in

ಕುಕ್ಕೆ, ಧರ್ಮಸ್ಥಳಕ್ಕೆ ಹೋಗಬೇಕೆಂದವರಿಗೆ ಗುಡ್ ನ್ಯೂಸ್ : ಇನ್ಮುಂದೆ ಸಿಗಲಿದೆ ಪೂಜೆ ವ್ಯವಸ್ಥೆ

suddione whatsapp group join

ದಕ್ಷಿಣ ಕನ್ನಡ: ಧರ್ಮಸ್ಥಳ ಮಂಜುನಾಥ, ಕುಕ್ಕೆ ಸುಬ್ರಮಣ್ಯ ದೇವಸ್ಥಾನಗಳಿಗೆ ಹೋಗೋದಕ್ಕೆ ಜನ ಸಾಕಷ್ಟು ದಿನಗಳಿಂದ ಕಾಯ್ತಿರ್ತಾರೆ. ಬರೀ ಸ್ವಾಮಿಯ ದರ್ಶನಕ್ಕಾಗಿ ಅಲ್ಲ ಬದಲಿಗೆ ಅಲ್ಲಿ ನಡೆಯುವ ವಿಶೇಷ ಪೂಜೆ ಮಾಡಿಸಲು ಕಾಯ್ತಿದ್ದಾರೆ. ಆದ್ರೆ ಇಷ್ಟು ದಿನ ಕೊರೊನಾ ಭಯಕ್ಕೆ ಎಲ್ಲಿಯೂ ವಿಶೇಷ ಪೂಜೆ ನಡೆಯುತ್ತಿರಲಿಲ್ಲ. ಬದಲಿಗೆ ದೇವರ ದರ್ಶನಕ್ಕಷ್ಟೇ ಅವಕಾಶ ನೀಡಲಾಗಿತ್ತು.

ಇದೀಗ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ದರ ಕಡಿಮೆಯಾಗಿದ್ದು, ಎಲ್ಲಾ ದೇವಾಲಯಗಳಲ್ಲೂ ವಿಶೆಷ ಪೂಜೆಗೆ ಅವಕಾಶ ಮಾಡಿಕೊಡಲಾಗಿದೆ. ಈ ಸಂಬಂಧ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಸರ್ಪ ಸಂಸ್ಕಾರ, ಆಶ್ಲೇಷ ಪೂಜೆ, ಪಂಚಾಮೃತ ಅಭಿಷೇಕ, ನಾಗಪ್ರತಿಷ್ಠೆ ಸೇವೆಗಳನ್ನು ಮಿತಿಗೊಳಿಸಲು ಜಿಲ್ಲಾಡಳಿತ ಸೂಚನೆ ನೀಡಿದೆ. ಅಷ್ಟೆ ಅಲ್ಲ ಒಂದಷ್ಟು ಕಂಡೀಷನ್ ಗಳನ್ನು ಹಾಕಲಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತರು 72 ಗಂಟೆಗಳ ಕಾಲ RTPCR ನೆಗೆಟಿವ್ ವರದಿಯನ್ನ ಕಡ್ಡಾಯವಾಗಿ ಹೊಂದಿರಬೇಕು. ಹಾಗೇ ಎರಡು ಡೋಸ್ ವ್ಯಾಕ್ಸಿನ್ ಕಡ್ಡಾಯವಾಗಿ ತೆಗೆದುಕೊಂಡಿರಬೇಕಾಗುತ್ತದೆ.

ಕೋವಿಡ್ ಮಾರ್ಗಸೂಚಿಯನ್ನ ಬರುವ ಭಕ್ತಾಧಿಗಳು ಪಾಲನೆ ಮಾಡಲೇಬೇಕು ಒಂದು ವೇಳೆ ಇದನ್ನ ಮೀರಿದ್ರೆ ಜಿಲ್ಲಾಡಳಿತದ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಫುಕ್ಸಟ್ಟೆ ಲೈಫ್ ಚಿತ್ರದ ಮತ್ತೊಂದು ಸಾಂಗ್ ರಿಲೀಸ್ ಎಲ್ಲಾ ಖಾಲಿ..ಖಾಲಿ ಅಂತಿದೆ ಚಿತ್ರತಂಡ

ಸೆಪ್ಟೆಂಬರ್ 20 ರಿಂದ 25 ರವರಗೆ ಬಸವೇಶ್ವರ ಆಸ್ಪತ್ರೆಯಲ್ಲಿ ಉಚಿತ ಮೂತ್ರಕೋಶ ಮತ್ತು ಮೂತ್ರಪಿಂಡ ತಪಾಸಣಾ ಶಿಬಿರ