ರಸ್ತೆ ಮುಚ್ಚುವ ಬದಲು ಅಭಿವೃದ್ದಿ ಮಾಡಿ : ಬಿ.ಟಿ.ಜಗದೀಶ್

suddionenews
2 Min Read

ವರದಿ : ಸುರೇಶ್ ಪಟ್ಟಣ್

ಚಿತ್ರದುರ್ಗ, (ಡಿ.11) : ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪಕ್ಕದಲ್ಲಿನ ರಸ್ತಯನ್ನು ಮುಚ್ಚಲು ಹುನ್ನಾರ ನಡೆಯುತ್ತಿದೆ ಇದನ್ನು ಮುಚ್ಚುವ ಬದಲು ಅಭಿವೃಧ್ದಿಯನ್ನು ಮಾಡುವುದರ ಮೂಲಕ ಉತ್ತಮವಾದ ರಸ್ತೆಯನ್ನು ನಿರ್ಮಾಣ ಮಾಡುವಂತೆ ಸರ್ಕಾರ ಮತ್ತು ಜಿಲ್ಲಾಡಳಿತವನ್ನು ಕರ್ನಾಟಕ ಪ್ರದೇಶ ಕುರುಬರ ಸಂಘದ ಹಿರಿಯ ಉಪಾಧ್ಯಕ್ಷರಾದ ಬಿ.ಟಿ.ಜಗದೀಶ್ ಆಗ್ರಹಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ರಸ್ತೆ ಬ್ರಿಟಿಷರ ಕಾಲದಿಂದಲೂ ಇದೆ ಈ ರಸ್ತೆಯಿಂದ ಯಾದವ, ಕುರುಬರ ಹಾಗೂ ಸಿರಿಗೆರೆ ಗುರುಪೀಠದ ಕಾಲೇಜು ಮತ್ತು ವಿದ್ಯಾರ್ಥಿ ನಿಲಯಗಳಿಗೆ, ರಂಗಯ್ಯನ ಬಾಗಿಲಿಗೆ ಸಂಪರ್ಕವನ್ನು ಕಲ್ಪಿಸುತ್ತಿದೆ. ಇದ್ದಲ್ಲದೆ ಆ ಕಡೆಯಿಂದ ನಗರಸಭೆ, ಪೋಲಿಸ್ ಠಾಣೆ, ಜಿಲ್ಲಾಧಿಕಾರಿಗಳ ಕಛೇರಿಯನ್ನು ಸಹಾ ಸಂಪರ್ಕ ಮಾಡಲು ಅನುಕೂಲವಾಗಿದೆ ಎಂದು ತಿಳಿಸಿದರು.

ಇಲ್ಲಿ ಪಕ್ಕದಲ್ಲಿ ಕಾಲೇಜು ಇದ್ದು ಬಾಲಕಿಯರು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ರಸ್ತೆಯಲ್ಲಿ ಅನೈತಿಕವಾದ ಚಟುವಟಿಕೆಗಳು ನಡೆಯುತ್ತಿದೆ ಎಂದು ಕಳೆದ ಹಲವಾರು ವರ್ಷಗಳಿಂದ ಸಂಬಂಧಪಟ್ಟವರಿಗೆ ದೂರು ಹಾಗೂ ಮನವಿಯನ್ನು ಸಹಾ ನೀಡಲಾಗಿದ್ದು ಇಲ್ಲಿ ಉತ್ತಮವಾದ ರಸ್ತೆಯನ್ನು ನಿರ್ಮಾಣ ಮಾಡುವಂತೆ ಸರ್ಕಾರಕ್ಕೆ ಆಗ್ರಹಿಸಲಾಗಿತ್ತು ಆದರೆ ಇದುವರೆವಿಗೂ ಯಾವುದೇ ಕಾರ್ಯವಾಗಿಲ್ಲ, ಆದರೆ ಈಗ ಏಕಾಏಕಿ ರಸ್ತೆಯನ್ನು ಬಂದ್ ಮಾಡುವ ಬಗ್ಗೆ ನಗರಸಭೆಯಲ್ಲಿ ಮಸೂದೆಯನ್ನು ಮಾಡಲಾಗಿದೆ ಎಂದು ಜಗದೀಶ್ ತಿಳಿಸಿದರು.

ರಸ್ತೆಯನ್ನು ಮುಚ್ಚುವ ಬಗ್ಗೆ ನ್ಯಾಯಾಲಯದಲ್ಲಿ ದಾವೆಯನ್ನು ಹಾಕಲಾಗಿದೆ ಇಷ್ಟಾದರೂ ಸಹಾ ಕೆಲವು ರಾಜಕೀಯ ಪಟ್ಟಭದ್ರಾ ಹಿತಾಸಕ್ತಿಗಳು ಈ ರಸ್ತೆಯನ್ನು ಮುಚ್ಚಲು ಹುನ್ನಾರವನ್ನು ಮಾಡುತ್ತಿದೆ. ರಸ್ತೆ ಮುಚ್ಚುವ ಬಗ್ಗೆ ಸಾರ್ವಜನಿಕರಿಂದ ಯಾವುದೇ ರೀತಿಯ ದೂರು ದುಮ್ಮಾನವನ್ನು ಕೇಳದೆ ಏಕಾಏಕಿಯಾಗಿ ರಸ್ತೆಯನ್ನು ಮುಚ್ಚಲು ಹೂರಟಿರುವುದು ಖಂಡನೀಯ ಈ ರಸ್ತೆಗೆ ಉತ್ತಮವಾದ ದೀಪಗಳನ್ನು ಆಳವಡಿಕೆ ಮಾಡಿ ಕಾಲೇಜಿಗೆ ಕಾಂಪೊಂಡ್ ನಿರ್ಮಾಣ ಮಾಡಿ ಅಕ್ಕ-ಪಕ್ಕದಲ್ಲಿ ಸಸಿಗಳನ್ನು ನೆಟ್ಟು ಸಿಮೆಂಟ್ ರಸ್ತೆಯನ್ನು ನಿರ್ಮಾಣ ಮಾಡುವಂತೆ ಸರ್ಕಾರವನ್ನು ಬಿ.ಟಿ.ಜಗದೀಶ್ ಒತ್ತಾಯಿಸಿದ್ದಾರೆ.

ಜಿಲ್ಲಾಧ್ಯಕ್ಷ ಶ್ರೀರಾಮ್ ಮಾತನಾಡಿ, ಈ ರಸ್ತೆಯನ್ನು ಆಭಿವೃದ್ದಿ ಮಾಡುವಂತೆ ಕಳೆದ 7 ವರ್ಷಗಳಿಂದ ಕನಕ ಜಯಂತಿಯಲ್ಲಿ ಮನವಿ ಮಾಡಲಾಗುತ್ತಿದೆಯಾದರೂ ಸಹಾ ಯಾರು ಪರಿಗಣಿಸಿಲ್ಲ ಈಗ ಏಕಾಏಕಿ ರಸ್ತೆಯನ್ನು ಮುಚ್ಚಲು ನಗರಸಭೆ ಮುಂದಾಗಿದೆ, ಇದು ಖಂಡನೀಯ, ಇದರಿಂದ ದಿನ ನಿತ್ಯ ಹಲವಾರು ಜನತೆ ಉಪಯೋಗವನ್ನು ಪಡೆಯುತ್ತಿದ್ದಾರೆ, ಇಂತಹ ರಸ್ತೆಯನ್ನು ಮುಚ್ಚುವುದು ಬೇಡ ಎಂದ ಮನವಿ ಮಾಡಿದ್ದಾರೆ.

ಗೋಷ್ಟಿಯಲ್ಲಿ ನಗರಸಭಾ ಸದಸ್ಯರಾದ ಮೀನಾಕ್ಷಿ, ಶಶಿಧರ್, ಮಾಜಿ ಸದಸ್ಯರಾದ ಮಂಜಣ್ಣ, ರವಿಶಂಕರ್, ಮಲ್ಲಿಕಾರ್ಜನ್, ಸಮಾಜದ ಮುಖಂಡರಾದ ಮಂಜುನಾಥ್ ಸೇರಿದಂತೆ ಇತರರು ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *