in

ಆರ್‌ಎಸ್‌ಎಸ್‌ ಉತ್ತಮ ಸಂಘಟನೆ ಎಂದು ಹೊಗಳಿದ್ದ ದೇವೇಗೌಡರು: ಸಿ ಟಿ ರವಿ

suddione whatsapp group join

ಬೆಂಗಳೂರು: ಆರ್‌ಎಸ್‌ಎಸ್‌ ಉತ್ತಮ ಸಂಘಟನೆ ಎಂದು ದೇವೇಗೌಡರು ಹೊಗಳಿದ್ದರು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರು ಹೇಳಿದ್ದಾರೆ. ಟ್ವೀಟರ್ ಮೂಲಕ ಕುಮಾರಸ್ವಚಾಮಿಗೆ ತಿರುಗೇಟು ಕೊಟ್ಟಿರುವ ಸಿ ಟಿ ರವಿ, ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಚಾಮುಂಡೇಶ್ವರಿ ಚುನಾವಣಾ ಪ್ರಚಾರದ ವೇಳೆ ನಿಮ್ಮ ತಂದೆ ದೇವೇಗೌಡರು ಆರ್‌ಎಸ್‌ಎಸ್‌ ಉತ್ತಮ ಸಂಘಟನೆ 1975ರಲ್ಲಿ ತುರ್ತುಪರಿಸ್ಥಿತಿ ವೇಳೆ ನಾವೆಲ್ಲ ಬಂಧನವಾದಾಗ ಎಲ್‌.ಕೆ.ಅಡ್ವಾಣಿ ಮತ್ತಿತರರು ನಡೆದುಕೊಂಡ ರೀತಿ ನನಗೆ ಮೆಚ್ಚುಗೆಯಾಯಿತು.

ಹೀಗಾಗಿ ಆರ್‌ಎಸ್‌ಎಸ್‌ ಹೊಗಳುತ್ತೇನೆ ಎಂದು ಹೇಳಿದ್ದರು. ಮಾಜಿ ಪ್ರಧಾನಿ ದೇವೇಗೌಡ ಅವರು ಆರ್‌ಎಸ್‌ಎಸ್‌ ಸಿದ್ದಾಂತಗಳನ್ನು ಒಪ್ಪಿಕೊಂಡಿದ್ದಾರೆ. ಆದರೆ ಅವರ ಪುತ್ರರಾದ ಮಾಜಿ ಸಿಎಂ ಕುಮಾರಸ್ವಾಮಿ ಅವರು ಮಾತ್ರ ಸಂಘದ ಸಿದ್ದಾಂತಗಳ ಬಗ್ಗೆ ಹಗುರವಾಗಿ ಮಾತನಾಡಿರುವುದು ಅವರ ಅಪ್ರಬುದ್ಧತೆಗೆ ಸಾಕ್ಷಿ ಎಂದಿದ್ದಾರೆ.

ಆರ್‌ಎಸ್‌ಎಸ್‌ನಲ್ಲಿ ವ್ಯಕ್ತಿ ನಿರ್ಮಾಣದ ಜೊತೆ ರಾಷ್ಟ್ರ ನಿರ್ಮಾಣದ ಧ್ಯೇಯ ಇರುವ ಕಾರಣ ಇಂದು ನಮ್ಮ ಪ್ರಧಾನಿಗಳು, ರಾಷ್ಟ್ರಪತಿ, ಉಪರಾಷ್ಟ್ರಪತಿ, ಸಂಘದ ಸ್ವಯಂ ಸೇವಕರು. ಉನ್ಮತ ಮಟ್ಟದಲ್ಲಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಶೂನ್ಯಮಟ್ಟಕ್ಕೆ ತಂದಿದ್ದಾರೆ. ಇದು ಯಾವುದರ ಪರಿಣಾಮ ಎಂದು ಎಚ್‌ಡಿ ಕುಮಾರಸ್ವಾಮಿಗೆ ಪ್ರಶ್ನಿಸಿದ್ದಾರೆ.

ಸ್ವಜನಪಕ್ಷಪಾತ, ಕುಟುಂಬ ರಾಜಕಾರಣವನ್ನ ಸರ್ವಸ್ವ, ಸ್ವಾರ್ಥವನ್ನು ಹಕ್ಕೆಂದು ಭಾವಿಸಿರುವವರಿಗೆ ಸಂಘದ ಸಿದ್ದಾಂತಗಳು ಅರ್ಥವಾಗುವುದಿಲ್ಲ. ಆರ್‌ಎಸ್‌ಎಸ್‌ ನ ನಿಷ್ಠೆ, ದೇಶ ಭಕ್ತಿ, ಸಂಕಷ್ಟದಲ್ಲಿರುವ ಜನರಿಗೆ ನಿಸ್ವಾರ್ಥ ಸೇವಾ ಮನೋಭಾವ ಹೆಚ್‌ಡಿಕೆ ಅವರಿಗೆ ಅರ್ಥವಾಗುವುದಿಲ್ಲ ಬಿಡಿ. 1977ರಲ್ಲಿ ಬೆಂಗಳೂರಿನಲ್ಲಿ ನಡೆದ ಸಂಘದ ಕಾರ್ಯಕ್ರಮದಲ್ಲಿ ಅಂದಿನ ಸರಸಂಘಚಾಲಕರಾದ ಬಾಳಾಸಾಹೇಬ್‌ ದೇವರಸ್‌, ಕೆ.ಎಸ್‌. ಹೆಗ್ಡೆ, ಡಾ.ಜಾನ್‌ ಜೊತೆಯಲ್ಲಿ ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರು ಕುಳಿತಿದ್ದಾರೆ, ಫೋಟೋ ನೋಡಿ ಎಂದು ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ. ಅಂದರೆ ದೇವೇಗೌಡರಿಗೆ ಆರ್‌ಎಸ್‌ಎಸ್‌ ಸಿದ್ದಾಂತದಲ್ಲಿ ನಂಬಿಯಿದೆ ಎಂದು ಅರ್ಥವಲ್ಲವೇ ಕುಮಾರಸ್ವಾಮಿ ಅವರೇ? ಎಂದು ಪ್ರಶ್ನಿಸಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಜಿಲ್ಲೆಯಾದ್ಯಂತ ಹೆಚ್ಚಿನ ಮಳೆ: ಸಾರ್ವಜನಿಕರು ಎಚ್ಚರಿಕೆವಹಿಸಲು ಜಿಲ್ಲಾಡಳಿತ ಸೂಚನೆ

ಚಿತ್ರದುರ್ಗ ಜಿಲ್ಲೆಯ ಮಳೆ ವರದಿ