ಭೀಕರ ಬರಗಾಲದ ನಡುವೆಯೂ ಚಿತ್ರದುರ್ಗ ರೈತನ ಮೊಗದಲ್ಲಿ ಸಂತಸ: ಕೊಳವೆ ಬಾವಿಯಲ್ಲಿ 5 ಇಂಚು ನೀರು…!

ಚಿತ್ರದುರ್ಗ: ರಾಜ್ಯದ ಮೂಲೆ ಮೂಲೆಯಲ್ಲೂ ಬರಗಾಲದ ವಿಚಾರ ತಾಂಡವವಾಡುತ್ತಿದೆ. ಎಷ್ಟೋ ಕಡೆ ಕುಡಿಯುವ ನೀರಿಗೂ ಬರ ಬಂದಿದೆ‌. ಜಾನುವಾರುಗಳ ಪರಿಸ್ಥಿತಿ ಅಂತು ಹೇಳುವಂತೆ ಇಲ್ಲ. ಅಷ್ಟು ಬೀಕರ ಪರಿಸ್ಥಿತಿಯಲ್ಲಿ ಜನ ಕಾಲ ಕಳೆಯುತ್ತಿದ್ದಾರೆ. ಅದರ ಜೊತೆಗೆ ಬೆಳೆದಿರುವ ಬೆಳೆಯನ್ನು ಉಳಿಸಿಕೊಳ್ಳುವುದಕ್ಕೇನೆ ಜಮೀನಿನ ಬೋರ್ವೆಲ್ ನಲ್ಲಿ ನೀರು ಬರುತ್ತಿಲ್ಲ‌. ಹೀಗಿರುವಾಗ ರೈತನೊಬ್ಬನ ಮುಖದಲ್ಲಿ ಸಂತಸ ಮನೆ ಮಾಡಿದೆ. ಧೈರ್ಯ ಮಾಡಿ ಕೊರೆಸಿದ ಬೋರ್ವೆಲ್ ನಲ್ಲಿ ಗಂಗಮ್ಮ ತಾಯಿ ಚಿಮ್ಮಿದ್ದಾಳೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಚಿಕ್ಕಚೆಲ್ಲೂರು ಗ್ರಾಮದಲ್ಲಿ ಹೊಸದಾಗಿ ಬೋರ್ವೆಲ್ ಕೊರೆಸಲಾಗಿದೆ. ರೈತ ಹರೀಶ್ ಎಂಬುವವರು ತಮ್ಮ ಜಮೀನಿನಲ್ಲಿ ಬೋರ್ವೆಲ್ ಕೊರೆಸಿದ್ದಾರೆ. ಆದರೆ ಇಂತ ಬಿರುಬೇಸಿಗೆಯಲ್ಲಿ, ಭೀಕರ ಬರಗಾಲದಲ್ಲಿ ನೀರು ಸಿಕ್ಕಿರುವುದು ಖುಷಿಗೆ ಕಾತಣವಾಗಿದೆ. ಅದರಲ್ಲೂ ಐದು ಇಂಚು ನೀರು ಬಂದಿದೆ.

ರೈತ ಹರೀಶ್ ಇದೇನು ಮೊದಲ ಬಾರುಗೆ ಬೋರ್ವೆಲ್ ಕೊರೆಸಿರುವುದಲ್ಲ. ಕಳೆದ ಬಾರಿಯೂ ಕೊರೆಸಿ ಕೈ ಸುಟ್ಟು ಕೊಂಡಿದ್ದರು. ಈ ಬಾರಿಯೂ ದೇವರ ಮೇಲೆ ಭಾರ ಹಾಕಿ, ಪ್ರಾರ್ಥನೆ ಮಾಡಿ ಬೋರ್ವೆಲ್ ಕೊರೆಸುವುದಕ್ಕೆ ಮುಂದಾಗಿದ್ದರು. ಈ ಬಾರಿ ದೇವರು ಕಣ್ಣು ಬಿಟ್ಟಿದ್ದಾನೆ. ಜೀವಗಂಗೆ ಸಿಕ್ಕಿದ್ದಾಳೆ. ಚಿಮ್ಮಿದ ಗಂಗೆಯನ್ನು ಕಂಡು ರೈತ ಹರೀಶ್ ಕುಟುಂಬದವರು ಹರ್ಷೊದ್ಘಾರ ಪಟ್ಟಿದ್ದಾರೆ. ಭೂಮಿಯಲ್ಲಿ ಫಲವತ್ತಾದ ಬೆಳೆ ತೆಗೆಯುವ ಆಸೆಯಲ್ಲಿದ್ದ ರೈತನಿಗೆ ಈ ಗಂಗಾ ಜಲ ದರ್ಶನ ಮತ್ತಷ್ಟು ಹುಮ್ಮಸ್ಸು ತಂದುಕೊಟ್ಟಿದೆ. ಆದರೆ ಈ ಭೀಕರ ಬರಗಾಲದಲ್ಲೂ ನೀರು ಸಿಕ್ಕಿರುವುದು ಮಾತ್ರ ಸ್ಥಳೀಯರಿಗೆ ಖುಷಿಯಾಗಿದೆ, ಆಶ್ಚರ್ಯವೂ ಆಗಿದೆ.

suddionenews

Recent Posts

ಬಗರ್‍ಹುಕುಂ ಅರ್ಜಿಗಳನ್ನು ಮರು ಪರಿಶೀಲಿಸಿ : ಕುಮಾರ್ ಸಮತಳ ಒತ್ತಾಯ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ,ಫೆಬ್ರವರಿ. 07…

5 minutes ago

ಹೈಕೋರ್ಟ್ ತೀರ್ಪು : ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಭ್ರಮಾಚರಣೆ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…

9 minutes ago

ದಾವಣಗೆರೆ ವಿಶ್ವವಿದ್ಯಾನಿಲಯ : ಹೊಳಲ್ಕೆರೆ ವಿದ್ಯಾರ್ಥಿನಿ ಗಂಗಮ್ಮ ಪ್ರಥಮ ರ‌್ಯಾಂಕ್

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…

12 minutes ago

ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮಕ್ಕೆ ಹೆಚ್ಚಿನ ಅನುದಾನ : ಸಚಿವ ಮಧು ಬಂಗಾರಪ್ಪ

ಚಿತ್ರದುರ್ಗ.ಫೆ.07: ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಜತೆಗೆ ದೇಶದ, ರಾಜ್ಯದ ಸಾಂಸ್ಕøತಿಕ ರಾಯಬಾರಿಗಳಾಗಿ ಕಲೆ, ಸಂಸ್ಕøತಿಯನ್ನು ಮುಂದಿನ ಪೀಳಿಗೆಗೆ ಕೊಂಡ್ಯೊಯುವ ಕೆಲಸ…

19 minutes ago

15 ಸಾವಿರ ಶಿಕ್ಷಕರ ನೇಮಕಕ್ಕೆ ಕ್ರಮ : ಸಚಿವ ಮಧು ಬಂಗಾರಪ್ಪ

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 : ಶಿಕ್ಷಣ ಇಲಾಖೆಗೆ ಈಗಾಗಲೇ 13 ಸಾವಿರ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗಿದ್ದು, ಹೊಸದಾಗಿ 15…

31 minutes ago

ಮೈಕ್ರೋ ಫೈನಾನ್ಸ್ ಸುಗ್ರಿವಾಜ್ಞೆಗೆ ಅಂಕಿತ ಹಾಕದ ರಾಜ್ಯಪಾಲರು : ಸರ್ಕಾರಕ್ಕೆ ಹಿನ್ನಡೆ

ಬೆಂಗಳೂರು: ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿದೆ. ಇದರಿಂದ ಅದೆಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸಾಲ ಕೊಟ್ಟ…

3 hours ago