ಬೆಂಗಳೂರು; ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ನಲ್ಲಿ ಮುಸ್ಲಿಮರಿಗೆ ಸರ್ಕಾರಿ ಗುತ್ತಿಗೆಯಲ್ಲಿ ಶೇಕಡ 4ರಷ್ಟು ಮೀಸಲಾತಿಯನ್ನು ಘೋಷಣೆ ಮಾಡಿದ್ದರು. ಅದಕ್ಕೆ ಸಾಕಷ್ಟು ವಿರೋಧವೂ ವ್ಯಕ್ತವಾಗಿತ್ತು. ಇದೀಗ ವಿರೋಧದ ನಡುವೆಯು ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಲಾಯ್ತು. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಅವರು ವಿಧಾನಸಭೆಯಲ್ಲಿ ವಿಧೇಯಕವನ್ನು ಮಂಡಿಸಿದರು. ಆದರೆ ಬಜೆಟ್ ನ ಆಯವ್ಯಯಕ್ಕೆ ವಿಧಾನಮಂಡಲ ಇನ್ನೂ ಅಂಗೀಕಾರ ನೀಡಿಲ್ಲ.
ಈವರೆಗೂ ಸರ್ಕಾರಿ ಗುತ್ತಿಗೆಯಲ್ಲಿ ಎಸ್ಸಿ ಹಾಗೂ ಎಸ್ಟಿಗಳಿಗೆ ಮಾತ್ರ ಮೀಸಲಾತಿ ಇದ್ದು, ಇದೀಗ ಪ್ರವರ್ಗ 2ಬಿಗೆ ಬರುವ ಮುಸ್ಲಿಮರಿಗೂ ಅವಕಾಶ ಕಲ್ಪಿಸಲಾಗಿದೆ. 2025-26ನೇ ಸಾಲಿನ ಆಯವ್ಯಯದ ಭಾಷಣದಲ್ಲಿ ಪ್ರಸ್ತಾವಿಸಲಾದ ಭರವಸೆಯಂತೆ ನಿರುದ್ಯೋಗ ಸಮಸ್ಯೆ ನಿವಾರಿಸಲು ಈ ವಿಧೇಯಕ ರೂಪಿಸಿರುವುದಾಗಿ ತಿಳಿಸಲಾಗಿದೆ.
ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆಶೇಕಡ 4 ಪರ್ಸೆಂಟ್ ಮೀಸಲಾತಿ ವಿಧೇಯಕ ಮಂಡನೆ ಬಳಿಕ ಮಾತನಾಡಿರುವ ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಅವರು, ಸದನದಲ್ಲಿ ಆ ವಿಷಯ ಬಂದಾಗ ಉತ್ತರ ಕೊಡುತ್ತೇವೆ. ಬಿಜೆಪಿಯವರು ರಾಜಕೀಯ ಬಿಟ್ಟು ಬೇರೆ ಏನು ಮಾಡುತ್ತಿಲ್ಲ. ಸರ್ವಜನಾಂಗದ ಶಾಂತಿಯ ತೋಟ ಮಾಡಲು ಹೊರಟಿದ್ದೇವೆ. ಆದರೆ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ನಾವೂ ಯಾರನ್ನೂ ತುಷ್ಠೀಕರಣ ಮಾಡುವ ಅಗತ್ಯವಿಲ್ಲ. ಯಾರ ತುಷ್ಠೀಕರಣವೂ ಇಲ್ಲ, ತಿರಸ್ಕಾರವೂ ಇಲ್ಲ. ಆದರೆ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಮುಸ್ಲಿಮರಿಗೆ ಸರ್ಕಾರಿ ಗುತ್ತಿಗೆಯಲ್ಲಿ ಶೇಕಡ 4 ರಷ್ಟು ಮೀಸಲಾತಿ ನೀಡಿದ್ದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಇದರ ಜೊತೆಗೆ ಹಿಂದುಳಿದ ವರ್ಗಗಳಿಗೆ ಸರಕು ಮತ್ತು ಸೇವೆಗಳಲ್ಲಿ ಮೀಸಲಾತಿ ಕಲ್ಪಿಸುವ ವಿಧೇಯಕವನ್ನು ಮಂಡಿಸಲಾಗಿದೆ.
ಸುದ್ದಿಒನ್ : ಬೆಲ್ಲವನ್ನು ಕಬ್ಬಿನ ರಸ ಅಥವಾ ತಾಳೆ ಹಣ್ಣಿನ ರಸದಿಂದ ತಯಾರಿಸಲಾಗುತ್ತದೆ. ಇದು ಸಂಸ್ಕರಿಸದ, ಶುದ್ದಿ ಮಾಡದ ನೈಸರ್ಗಿಕ…
ಈ ರಾಶಿಯವರಿಗೆ ಮದುವೆ ಮಾಡಿಕೊಳ್ಳಲು ಬರುವರು ಆದರೆ ಫಿಕ್ಸ್ ಆಗುತ್ತಿಲ್ಲ, ಈ ರಾಶಿಯವರಿಗೆ ಕೆಲಸಗಳ ಆಫರ್ ತುಂಬಾ ಇದೆ, ಗುರುವಾರದ…
ಸುದ್ದಿಒನ್, ಹಿರಿಯೂರು, ಮಾರ್ಚ್. 19 : ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಬೆಂಬಲಿಗರಿಬ್ಬರು ಸೋಮವಾರ ರಾತ್ರಿ ಟೆಂಡರ್…
ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 19 : ಬ್ಯಾಂಕ್ ಕಾಲೋನಿ ನಿವಾಸಿ ಜಿ.ಪಿ.ಉಮೇಶ್(63) ಬುಧವಾರ ಬೆಳಿಗ್ಗೆ 11-30 ಕ್ಕೆ ಹೃದಯಾಘಾತದಿಂದ ನಿಧನರಾದರು.…
ಚಿತ್ರದುರ್ಗ. ಮಾ. 19: ಸಾರ್ವಜನಿಕರೊಂದಿಗೆ ನೇರವಾಗಿ ವ್ಯವಹರಿಸುವ ಇಲಾಖೆಗಳಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅತಿ ಮುಖ್ಯವಾದದು.…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್.…