in ,

ಹೆಚ್. ಅಂಜನೇಯ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಮೇ. 26 ರಂದು  ಬೃಹತ್ ಅಭಿಮಾನದ ನಡಿಗೆ

suddione whatsapp group join

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 87220 22817

ಚಿತ್ರದುರ್ಗ,(ಮೇ. 24)  : ಮಾದಿಗ ಸಮುದಾಯ ನಾಯಕ, ದಲಿತರ ದ್ವನಿಯಾಗಿರುವ ಹೆಚ್. ಅಂಜನೇಯವರವನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ ಸಚಿವರನ್ನಾಗಿ ಮಾಡುವಂತೆ ಆಗ್ರಹಿಸಿ ಮೇ. 26 ರಂದು ನಗರದಲ್ಲಿ ಬೃಹತ್ ಅಭಿಮಾನ ನಡಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ನ್ಯಾಯವಾದಿಗಳು, ಅಖಿಲ ಕರ್ನಾಟಕ ಹೆಚ್ ಅಂಜನೇಯ ಅಭಿಮಾನಿಗಳ ಬಳದ ರವೀಂದ್ರ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 2023ರ ವಿಧಾನಸಭಾ ಚುನಾವಣೆಯಲ್ಲಿ ಅಂಜನೇಯರವರು ಕುತಂತ್ರದಿಂದ ಅಲ್ಪ ಮತಗಳ ಅಂತರದಿಂದ ಸೋಲನ್ನು ಅನುಭವಿಸಬೇಕಾಯಿತು. ಮಾದಿಗ ಜನಾಂಗದ ಮಹಾ ಪುರುಷರಾದ ಅಂಜನೇಯರವರು ನಮ್ಮ ಜನಾಂಗದಚ ಪರವಾಗಿ ಧ್ವನಿಯನ್ನು ಎತ್ತುವ ಸಲುವಾಗಿ ವಿಧಾನಸೌಧದಲ್ಲಿ ಇರಬೇಕಿದೆ ಈ ಹಿನ್ನಲೆಯಲ್ಲಿ ಅವರನ್ನು ಎಂ.ಎಲ್.ಸಿ. ಮಾಡಿ ಸಚಿವರನ್ನಾಗಿ ಮಾಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜನ ಖರ್ಗೆಯವರನ್ನು ಆಗ್ರಹಿಸಿದ್ದಾರೆ.

ಅಂಜನೇಯರವರು ಸಮಾಜ ಕಲ್ಯಾಣ ಸಚಿವರಾಗಿದ್ಧಾಗ ರಾಜ್ಯದಲ್ಲಿ ಉತ್ತಮವಾದ ಕೆಲಸವನ್ನು ಮಾಡಿದ್ದಾರೆ ವಿವಿಧ ರೀತಿಯ ಹಾಸ್ಟಲ್‌ಗಳನ್ನು ನಿರ್ಮಾಣ ಮಾಡುವುದರ ಮೂಲಕ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಕಾರಣಿಭೂತರಾಗಿ ಶಿಕ್ಷಣದ ಹೊರೆಯಿಂದ ದೂರ ಮಾಡಿದ್ದಾರೆ. ಇದ್ದಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿ ಮನೆ, ಚರಂಡಿ, ರಸ್ತೆಗಳನ್ನು ನಿರ್ಮಾಣ ಮಾಡಿದ್ದಾರೆ. ಸಮುದಾಯ ಭವನಗಳನ್ನು ನಿರ್ಮಾಣ ಮಾಡಿ, ಗಂಗಕಲ್ಯಾಣ ಕಾರ್ಯಕ್ರಮದಡಿಯಲ್ಲಿ ಕೊಳವೆಭಾವಿಯನ್ನು ಕೊರೆಸುವುದರ ಮೂಲಕ ಕೃಷಿಗೆ ಸಹಾಯವನ್ನು ಮಾಡಿದ್ದಾರೆ ಎಂದರು.

ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿ ಉತ್ತಮವಾದ ಹೆಸರನ್ನು ಮಾಡುವುದರ ಮೂಲಕ ಅವರಿಗೆ ಕೀರ್ತಿಯನ್ನು ತಂದಿದ್ದಾರೆ. ಅವರನ್ನು ಎಂ.ಎಲ್.ಸಿಯನ್ನಾಗಿ ಮಾಡಿ ಸಚಿವರನ್ನಾಗಿ ಮಾಡುವುದರ ಮೂಲಕ ಮತ್ತೋಮ್ಮೆ ರಾಜ್ಯದಲ್ಲಿ ಮಾದಿಗ ಜನಾಂಗದವರಿಗೆ ನೆರವಾಗಬೇಕಿದೆ, ಈ ಹಿನ್ನಲೆಯಲ್ಲಿ ಅವರ ಅಭೀಮಾನ ಬಳಗದಿಂದ ಮೇ. 26ರ ಶುಕ್ರವಾರದಂದು ಚಿತ್ರದುರ್ಗ ನಗರದಲ್ಲಿ ಸಂತೇಪೇಟೆಯಿಂದ ಜಿಲ್ಲಾ ಕಾಂಗ್ರೆಸ್ ಕಚೇರಿಯವರೆಗೂ ಬೃಹತ್ ಅಭಿಮಾನದ ನಡಿಗಯನ್ನು ಹಮ್ಮಿಕೊಳ್ಳಲಾಗಿದೆ ಇದರಲ್ಲಿ ಅಂಜನೇಯ ಅಭಿಮಾನಿಗಳು ಭಾಗವಹಿಸುವುದರ ಮೂಲಕ ಯಶಸ್ವಿಗೂಳಿಸುವಂತೆ ರವೀಂದ್ರ ಮನವಿ ಮಾಡಿದ್ದಾರೆ.

ಈ ಹಿಂದೆ ಚುನಾವಣೆಯಲ್ಲಿ ಸೋತವರನ್ನು ಎಂ.ಎಲ್.ಸಿಯನ್ನಾಗಿ ಮಾಡಿ ಅವರನ್ನು ಸಚಿವರನ್ನಾಗಿ ಮಾಡಿದ ಉದಾಹರಣೆಗಳು ಇವೆ ಇದೇ ರೀತಿ ಅಂಜುನೇಯರವರನ್ನು ಸಹಾ ಎಂ.ಎಲ್.ಸಿ.ಯನ್ನಾಗಿ ಮಾಡಿ ಸಚಿವರನ್ನಾಗಿ ಮಾಡಬೇಕೆಂದು ಆಗ್ರಹಿಸಿದ್ದು, ಇದರಿಂದ ಈ ಜನಾಂಗಕ್ಕೆ ಮಾನ್ಯತೆಯನ್ನು ನೀಡಿದಂತೆ ಆಗಲಿದೆ ಮುಂದಿನ ದಿನದಲ್ಲಿ ಅಂಜುನೇಯವರ ಧ್ವನಿ ವಿಧಾನಸಭೆಯಲ್ಲಿ ಮೊಳಗುವಂತಾಗಬೇಕಿದೆ. ಈಗ ಪ್ರಾರಂಭೀಕವಾಗಿ ಚಿತ್ರದುರ್ಗದಲ್ಲಿ ನಮ್ಮ ಹೋರಾಟವನ್ನು ಹಮ್ಮಿಕೊಳ್ಳಳಾಗಿದೆ ಮುಖಂಡರು ನಮ್ಮ ಬೇಡಿಕೆಯನ್ನು ಈಡೇರಿಸದಿದ್ದರೆ ರಾಜ್ಯದ್ಯಾದಂತ ಹೋರಾಟವನ್ನು ರೂಪಿಸಲಾಗುವುದೆಂದು ಎಚ್ಚರಿಸಿದರು.

ಗೋಷ್ಟಿಯಲ್ಲಿ ಕುಮಾರಸ್ವಾಮಿ, ಕೆಂಚಪ್ಪ, ಸೋಮಶೇಖರ್, ಬ್ಯಾಲಹಳ್ಳಿ ಜಯ್ಯಪ್ಪ, ಶರಣಪ್ಪ, ಮಂಜುನಾಥ್ ಸೇರಿದಂತೆ ಇತರರು ಭಾಗವಹಿಸಿದ್ದರು.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಹೊಸ ಸರ್ಕಾರದ ಬಗ್ಗೆ ಆರ್ ಅಶೋಕ್ ಗೇಲಿ : ಡಿಕೆಶಿ & ಸಿದ್ದು ಬಗ್ಗೆ ಹೇಳಿದ್ದೇನು..?

ಚಿತ್ರದುರ್ಗದಲ್ಲಿ ಮೇ 26 ರಂದು ಉಚಿತ ಆರೋಗ್ಯ ಶಿಬಿರ : ಯಾವೆಲ್ಲಾ ಕಾಯಿಲೆಗಳಿಗೆ ಉಚಿತ ತಪಾಸಣೆ ? ಇಲ್ಲಿದೆ ಮಾಹಿತಿ…