ನವದೆಹಲಿ : ರೈತರು 100 ಕಿ.ಮೀ ಟ್ರಾಕ್ಟರ್ ಪೆರೇಡ್ ನಡೆಸಲು ರ್ಯಾಲಿಗೆ ದೆಹಲಿ ಪೊಲೀಸರು ಅವಕಾಶ ನೀಡಿದ್ದಾರೆ. ಈ ನಿಟ್ಟಿನಲ್ಲಿ ದೇಶದ ರಾಜಧಾನಿ ದೆಹಲಿಯ ಗಾಜಿಪುರ, ಸಿಂಗು ಮತ್ತು ಟಿಕ್ರಿ ಗಡಿಗಳಲ್ಲಿ ಬ್ಯಾರಿಕೇಡ್ಗಳನ್ನು ತೆರವುಗೊಳಿಸಿದ್ದು, ಗುರುವಾರ ರ್ಯಾಲಿ ನಡೆಸಲು ಅನುವು ಮಾಡಿಕೊಟ್ಟಿದೆ.
ಕೇಂದ್ರ ಸರ್ಕಾರದ ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಈ ತಿಂಗಳ 26 ರಂದು ಗಣರಾಜ್ಯೋತ್ಸವದ ಸಂದರ್ಭದಲ್ಲಿ, ರೈತರು ಟ್ರಾಕ್ಟರುಗಳ ಮೆರವಣಿಗೆಯ ಮೂಲಕ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಲು ನಿರ್ಧರಿಸಿದರು. ಆದರೆ, ಪೊಲೀಸರು ಮೊದಲಿಗೆ ಅನುಮತಿ ನಿರಾಕರಿಸಿದ್ದರು ಮತ್ತು ಕಡಿಮೆ ಟ್ರಾಕ್ಟರುಗಳನ್ನು ಬಳಸಲು ತಿಳಿಸಲಾಗಿತ್ತು.
ಆದರೆ ರೈತರೊಂದಿಗೆ ಚರ್ಚಿಸಿದ ನಂತರ ಹೊಸದಾಗಿ ಅವಕಾಶ ನೀಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ, ಭಾರತೀಯ ಕಿಸಾನ್ ಒಕ್ಕೂಟದ ಮುಖಂಡ ಗುರ್ನಮ್ ಸಿಂಗ್ ಚೌಧರಿ, ರ್ಯಾಲಿಯ ಸಂದರ್ಭದಲ್ಲಿ ಸಮಿತಿಯು ರೈತ ಸಹೋದರರಿಗೆ ನಿಯಮಗಳನ್ನು ಪಾಲಿಸಿ ಶಿಸ್ತಿನೊಂದಿಗೆ ವ್ಯವಹರಿಸುವಂತೆ ಮನವಿ ಮಾಡಿದೆ ಎಂದು ಹೇಳಿದರು. ದೆಹಲಿಯಲ್ಲಿ ರೈತರ ನೇತೃತ್ವದ ಟ್ರ್ಯಾಕ್ಟರ್-ರ್ಯಾಲಿ ಶಾಂತಿ ಮತ್ತು ಸುವ್ಯವಸ್ಥೆಯ ವಿಷಯವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
