ಬೆಂಗಳೂರು: ನಾಗಿಣಿ ಧಾರಾವಾಹಿ ಹಾಗೂ ಬಿಗ್ ಬಾಸ್ ಖ್ಯಾತಿಯ ದೀಪಿಕಾ ದಾಸ್ ಇಂದು ಅದ್ದೂರಿಯಾಗಿ ರಿಸೆಪ್ಶನ್ ಮಾಡಿಕೊಂಡಿದ್ದಾರೆ. ಕಳೆದ ಕೆಲವು ದಿನಗಳ ಹಿಂದಷ್ಟೇ ಯಾರಿಗೂ ಮಾಹಿತಿಯೇ ತಿಳಿಸದೆ ಮದುವೆಯಾಗಿದ್ದರು. ಕುಟುಂಬಸ್ಥರ ಸಮ್ಮುಖದಲ್ಲಷ್ಟೇ ಮದುವೆ ನಡೆದಿತ್ತು. ದೀಪಿಕಾ ದಾಸ್ ಈ ರೀತಿ ಗುಟ್ಟಾಗಿ ಮದುವೆಯಾಗಿದ್ದೇಕೆ ಎಂಬುದು ಎಲ್ಲರಿಗೂ ಪ್ರಶ್ನೆಯಾಗಿ ಕಾಡಿತ್ತು. ಹುಡುಗ ದುಬೈ ಎಂದೇ ಹೇಳಲಾಗಿತ್ತು. ಕನ್ನಡ ಬರುತ್ತಾ ಎಂಬೆಲ್ಲಾ ಚರ್ಚೆಗಳು ಹುಟ್ಟುಕೊಂಡಿದ್ದವು. ಇದೀಗ ದೀಪಿಕಾ ದಾಸ್ ಪತಿಯ ಬಗ್ಗೆ ಇದೀಗ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಕ್ಕಿದೆ.
ಇಂದು ದೀಪಿಕಾ ದಾಸ್ ಹಾಗೂ ದೀಪಕ್ ಅದ್ದೂರಿ ಆರತಕ್ಷತಾ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮಕ್ಕೆ ಬಿಗ್ ಬಾಸ್ ಸ್ಪರ್ಧಿಗಳು ಕೂಡ ಭಾಗಿಯಾಗಿ, ನವದಂಪತಿಗೆ ಶುಭ ಹಾರೈಸಿದ್ದಾರೆ. ಸ್ಯಾಂಡಲ್ ವುಡ್ ನ ಹಲವು ಕಲಾವಿದರು ಕೂಡ ಆಗಮಿಸಿದ್ದರು.
ಇನ್ನು ದೀಪಿಕಾ ದಾಸ್ ಎಲ್ಲಾ ಪ್ರಶ್ನೆಗಳಿಗೂ ತೆರೆ ಎಳೆದಿದ್ದಾರೆ. ‘ನಾನು ಮದುವೆಯಾಗಿರುವ ಹುಡುಗ ಅಪ್ಪಟ ಕನ್ನಡದ ಹುಡುಗ, ಗೌಡ್ರ ಹುಡುಗ. ನಾನು ವಿದೇಶಿಗರನ್ನೆಲ್ಲಾ ನೋಡಲ್ಲ. ಇಲ್ಲೆ ಆರ್ ಆರ್ ನಗರದ ಹುಡುಗ. ಮದುವೆಯನ್ನ ಗುಟ್ಟಾಗಿ ಏನು ಆಗಿಲ್ಲ. ಮೂರ್ನಾಲ್ಕು ತಿಂಗಳ ತಯಾರಿ ಅದು. ನಾನು ದೀಪಕ್ ಹಲವು ವರ್ಷಗಳಿಂದ ಪರಿಚಯ ಇದ್ದೆವು. ಕಳೆದ ವರ್ಷ ಮದುವೆ ವಿಚಾರ ಅಂತ ಬಂದಾಗ, ಮೊದಲು ಒಂದು ವರ್ಷ ಡೇಟ್ ಮಾಡೊಣಾ. ಇಬ್ಬರಿಗೂ ಹೊಂದಾಣಿಕೆಯಾಗುತ್ತೆ ಎಂದರೆ ಮದುವೆಯಾಗೋಣಾ ಎಂದು ತೀರ್ಮಾನ ಮಾಡಿದೆವು. ಅದರಂತೆ ಇಬ್ಬರಿಗೂ ಹೊಂದಾಣಿಕೆ ಆಯ್ತು. ಮದುವೆ ಯಾಕೆ ತಡ ಮಾಡಬೇಕು ಅಂತ ಮದುವೆ ಆದೆವು’ ಎಂದಿದ್ದಾರೆ.
ಚಿತ್ರದುರ್ಗ. ಫೆ.24: ಬರುವ ಮಾರ್ಚ್ 01 ರಂದು ಚಿತ್ರದುರ್ಗದ ಮುರುಘರಾಜೇಂದ್ರ ಕ್ರೀಡಾಂಗಣ (ಸರ್ಕಾರಿ ವಿಜ್ಞಾನ ಕಾಲೇಜು ಮೈದಾನ) ದಲ್ಲಿ ಬೃಹತ್…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳೆಗೆರೆ, ಚಳ್ಳಕೆರೆ, ಮೊ : 84314 13188 ಸುದ್ದಿಒನ್, ಚಳ್ಳಕೆರೆ, ಫೆಬ್ರವರಿ. 24 :…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…
ಚಿತ್ರದುರ್ಗ, ಫೆಬ್ರವರಿ. 24 : ಭದ್ರ ಮೇಲ್ದಂಡೆ ಯೋಜನೆಗೆ ಮುಂಬರುವ ರಾಜ್ಯ ಬಜೆಟ್ ನಲ್ಲಿ ಕನಿಷ್ಟ ಐದು ಸಾವಿರ ಕೋಟಿ…
ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಛಾವಾ ಸಿನಿಮಾ ಎಲ್ಲೆಡೆ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಇದರಲ್ಲಿ ಸಂಭಾಜಿ ಜೀವನ…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ ಫೆ. 24 :…