Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಬೆಳಕಿನ ಹಬ್ಬದಲ್ಲಿ ಸದ್ದು ಮಾಡುವ ಪಟಾಕಿ ಪುರಾಣ : ದೀಪಾವಳಿ ವಿಶೇಷ ಲೇಖನ : ಟಿ.ರೇಖಾ

Facebook
Twitter
Telegram
WhatsApp

ಲೇಖಕರು :
ಟಿ.ರೇಖಾ ಚಿತ್ರಕಲಾ ಶಿಕ್ಷಕರು
ಸ.ಪ.ಪೂ.ಕಾಲೇಜು ಪ್ರೌಢಶಾಲಾ ವಿಭಾಗ, ಶಿರಾ-572137, ಮೊ.ನಂ: 9845641941

ದೀಪಾವಳಿ ಎಂದರೆ ಬೆಳಕಿನ ಹಬ್ಬ. ಇದಕ್ಕೆ ಪರ್ಯಾಯವಾಗಿ ನೆನಪಾಗುವುದು ಪಟಾಕಿಗಳು. ಪ್ರತಿಬಾರಿ ದೀಪಾವಳಿಯ ಸಾಂಪ್ರದಾಯಿಕ ಹಿನ್ನೆಲೆಯನ್ನು ಹೊಸರೀತಿಯಲ್ಲಿ ಅಭಿವ್ಯಕ್ತಿಸುತ್ತೇವೆ. ಈ ಬಾರಿ ಪಟಾಕಿಯ ಇತಿಹಾಸ, ಬಳಕೆ, ಉಪಯೋಗ, ತೊಂದರೆ ಪಟಾಕಿಯಲ್ಲಿ ಬಳಸುವ ರಾಸಾಯನಿಕಗಳ ಬಗ್ಗೆ ತಿಳಿದುಕೊಳ್ಳೋಣ ಅರಿವಿನ ಜ್ಞಾನ ದೀವಿಗೆ ಹಚ್ಚೋಣ.

ಪಟಾಕಿಯ ಇತಿಹಾಸವು ಭಾರತದಲ್ಲಿ ಕ್ರಿಸ್ತಪೂರ್ವ ಮೂರರಲ್ಲಿ ಅಸ್ತಿತ್ವದಲ್ಲಿತ್ತು ಎಂಬುದಕ್ಕೆ ಬಳಸುತ್ತಿದ್ದ ಗನ್ ಪೌಡರ್ ಸಾಕ್ಷಿಯಾಗುತ್ತದೆ. ಚಾಣಕ್ಯನ ‘ಅರ್ಥಶಾಸ್ತ್ರ’ ಮತ್ತು ‘ಶುಕ್ರಾಚಾರ್ಯರ’ ಶುಕ್ರ ನೀತಿಯಲ್ಲಿ ಅಲ್ಲದೆ ಇತ್ತೀಚಿನ ಇತಿಹಾಸಕಾರರ ಪುಸ್ತಕಗಳಲ್ಲಿಯೂ ಉಲ್ಲೇಖವಿದೆ. ಹಿಂದೆ ದೀಪಾವಳಿ ಕಾಲದಲ್ಲಿ ಪ್ರತಿಯೊಂದು ಋತುಮಾನವು ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿರುತ್ತದೆ.

ವ್ಯವಸಾಯ ಪ್ರಧಾನವಾದ ಭಾರತದಲ್ಲಿ ಹೆಚ್ಚಿನ ಕಡೆ ಭತ್ತ ಬೆಳೆಯುತ್ತಿದ್ದರು. ಕೀಟಗಳ ಕಾಟದಿಂದ ತಪ್ಪಿಸಿಕೊಳ್ಳಲು ಹಾಗೂ ಹಲವಾರು ಸಾಂಪ್ರದಾಯಿಕ ರೋಗಗಳಿಂದ ದೂರವಿರಲು ಸಿಡಿಮದ್ದನ್ನು ಮೋಜಿನ ಜೊತೆಗೆ ಮದ್ದಾಗಿಯೂ (ಔಷಧ )ಬಳಸಲಾಗುತ್ತಿತ್ತು. ಏಕೆಂದರೆ ಸಿಡಿಮದ್ದಿನಲ್ಲಿ ಗಂಧಕ ಬಳಸಲಾಗುತ್ತದೆ. ಹೊಸ ವೈಜ್ಞಾನಿಕ ಸಂಶೋಧನೆಗಳು ಕೂಡ ಗಂಧಕವನ್ನು ಉತ್ತಮ ಕೀಟನಾಶಕ ಎಂದು ಸಾಬೀತುಪಡಿಸಿದೆ. ಇವುಗಳನ್ನು ಆಗಿನ ಕಾಲದಲ್ಲಿ ರಾಜಮಹಾರಾಜರು ಶ್ರೀಮಂತರು ಸೀಮಿತ ಬಳಕೆ ಮಾಡುತ್ತಿದ್ದರು. ನಾಗರೀಕತೆ ಬೆಳೆದಂತೆ ಇವುಗಳನ್ನು ವಿನೋದಕ್ಕಾಗಿ ಪ್ರತಿಷ್ಠೆಗಾಗಿ ಬಳಸುತ್ತಿರುವುದು ವಿಷಾದದ ಸಂಗತಿ.

ದೇಶದಲ್ಲಿ ಪ್ರಪ್ರಥಮವಾಗಿ ಉದ್ಯಮವನ್ನು ದಾಸ್ ಗುಪ್ತಾ ಅವರು 19ನೇ ಶತಮಾನದ ಆರಂಭದಲ್ಲಿ ಕಲ್ಕತ್ತದಲ್ಲಿ ಪ್ರಾರಂಭಿಸಿದರು. ಮೊದಲಿಗೆ ಬೆಂಕಿಪೊಟ್ಟಣ,  ಹೂಕುಂಡ ಮುಂತಾದವುಗಳನ್ನು ತಯಾರಿಸುತ್ತಿದ್ದರು. ಇಪ್ಪತ್ತನೇ ಶತಮಾನದಲ್ಲಿ ಈ ಕೈಗಾರಿಕೆಯು ತಮಿಳುನಾಡಿನ ಶಿವಕಾಶಿಗೆ ಸ್ಥಳಾಂತರಗೊಂಡಿತು. ಇಂದು ದೇಶದಲ್ಲೆಡೆ ಕೈಗಾರಿಕೆಗಳು ನಾಯಿಕೊಡೆಯಂತೆ ತಲೆ ಎತ್ತಿವೆ.

ಈ ಸಿಡಿಮದ್ದುಗಳ ಅತಿಯಾದ ಬಳಕೆಯಿಂದಾಗಿ ನಮಗೆ ಉಸಿರಾಟದ ತೊಂದರೆ ಕೆಲವು ರೀತಿಯ ಚರ್ಮರೋಗಗಳು ಕೂಡ ತಲೆದೋರಬಹುದಾಗಿದೆ. ಅಲ್ಲದೆ ಪರಿಸರದ ಮೇಲೆ ಈ ರಾಸಾಯನಿಕಗಳು ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡುವುದರಿಂದ ಪರಿಸರ ಮಾಲಿನ್ಯದಂತಹ ಗಂಭೀರವಾದ ಪರಿಣಾಮಗಳನ್ನು ನಾವು ಎದುರಿಸುತ್ತಿದ್ದೇವೆ.

ಪರಿಸರ ಸ್ನೇಹಿ ಪಟಾಕಿಗಳು ಎಂಬ ಹಣೆಪಟ್ಟಿಯೊಂದಿಗೆ ಮಾರುಕಟ್ಟೆಗೆ ಬರುತ್ತಿರುವ ಸಿಡಿಮದ್ದುಗಳನ್ನು ಹಿಂದಿನ ಸಿಡಿಮದ್ದುಗಳಿಗೆ ಹೋಲಿಸಿದರೆ ಕಡಿಮೆ ಪ್ರಮಾಣದ ಹಾನಿ ಮಾಡುತ್ತವೆ. ಏಕೆಂದರೆ ಇದರಲ್ಲಿ ಬಳಸುವ ರಾಸಾಯನಿಕ ಸಂಯೋಜನೆಗಳನ್ನು ನಿಗ್ರಹಿಸಲು ಸಹಾಯಮಾಡುತ್ತದೆ.

ಹಾಗೆಯೇ ಪರಿಸರಸ್ನೇಹಿ ಇಲಾಖೆ ಪ್ರಕಾರ ಪಟಾಕಿಗಳ ಗಾತ್ರವನ್ನು ಕಡಿಮೆ ಮಾಡಿ ತಯಾರಿಸುವುದರಿಂದ 30 ರಿಂದ 35 ಪರ್ಸೆಂಟ್ ಹೊರಸೂಸುವಿಕೆ ಕಡಿಮೆಯಾಗುತ್ತದೆ. ಜೊತೆಗೆ ಹಸಿರು ಪಟಾಕಿಗಳು 125 ಡೆಸಿಬಲ್  ಸದ್ದು ಮಾಡಿದರೆ ಬೇರೆಯವು 160 ಡೆಸಿಬಲ್ ಸದ್ದನ್ನು ಹೊರಸೂಸುತ್ತವೆ ಹಾಗೂ ಸಾಮಾನ್ಯವಾಗಿ ಅಲ್ಯೂಮಿನಿಯಂ, ಪೊಟ್ಯಾಷಿಯಂ, ನೈಟ್ರೇಟ್ ಮತ್ತು ಇದ್ದಿಲನ್ನು ತೆಗೆದಿರುವುದು ಅಥವಾ ಭಾಗಶಃ ಕಡಿಮೆ ಮಾಡಿರುವುದರಿಂದ 15 ರಿಂದ 30 ಪರ್ಸೆಂಟ್ ಮಾಲಿನ್ಯ ದಾಯಕ ಅನಿಲಗಳ ಹೊರಸೂಸುವಿಕೆಯಲ್ಲಿ ಕಡಿಮೆಯಾಗುತ್ತದೆ. ಬೇರೆ ಸಿಡಿಮದ್ದುಗಳಿಗಿಂತ ಪರಿಸರಸ್ನೇಹಿ ಸಿಡಿಮದ್ದುಗಳು (ಗ್ರೀನ್ ಕ್ರ್ಯಾಕರ್ಸ್) ತುಟ್ಟಿ ಎಂದೆನಿಸುತ್ತದೆ. ಚಿಕ್ಕಮಕ್ಕಳು ಸಿಡಿಮದ್ದನ್ನು ಸಿಡಿಸುವಾಗ ಹಿರಿಯರ ಮಾರ್ಗದರ್ಶನದಲ್ಲಿ ಇವುಗಳನ್ನು ಆನಂದಿಸುವುದು ಸೂಕ್ತ ಎಂದೆನಿಸುತ್ತದೆ.

ಒಂದು ಕ್ಷಣ ಆಲೋಚಿಸಿ ಈ ಬಾರಿ ಯಾವ ಪಟಾಕಿ ಕೊಂಡುಕೊಳ್ಳಬೇಕು ಎಂದು ಹಾಗೂ ಇತಮಿತ ಬಳಕೆಯಿಂದ ನಾವು ಅನುಭವಿಸಿ ಆಸ್ವಾದಿಸಿದ ಜೀವನವನ್ನು ನಮ್ಮ ಮುಂದಿನ ಪೀಳಿಗೆಗೆ ಉಳಿಸಿ ಹೋಗಬಹುದಲ್ಲವೆ ? ಈ ಜ್ಞಾನ ದೀವಿಗೆ ಮನ ಮಸ್ತಕದಲ್ಲಿ ಪ್ರಜ್ವಲಿಸಲಿ ಎಂದು ಆಶಿಸುತ್ತೇನೆ.

*ಬಾಕ್ಸ್** ಪಟಾಕಿಗಳಲ್ಲಿ ರಾಸಾಯನಿಕಗಳ ಬಳಕೆ
ಈ ಸಿಡಿಮದ್ದುಗಳಲ್ಲಿ ಬಳಕೆಯಾಗುವ ರಾಸಾಯನಿಕ ಮಿಶ್ರಣಗಳ ಬಗ್ಗೆ ತಿಳಿದುಕೊಳ್ಳೋಣ. ಮೆಗ್ನೀಷಿಯಂ ಆಕ್ಸೈಡ್ ಗಳು ಗಾಳಿಯಲ್ಲಿ ಸುಲಭವಾಗಿ ಪ್ರಕಾಶಮಾನವಾಗಿ ಉರಿಯುತ್ತವೆ. ಸಾಮಾನ್ಯವಾಗಿ ನೈಟ್ರೋಜನ್ ಮತ್ತು ಸಲ್ಪರ್ ಬಳಸಿ ತಯಾರಾಗುವ ಸಿಡಿಮದ್ದುಗಳು ಅದ್ಭುತ ಪ್ರಕಾಶಮಾನವಾದ ಬೆಳಕನ್ನು ಹೊರಸೂಸುವ ವಸ್ತುವನ್ನು ಹೊಂದಿದೆ.

75% ಪೊಟ್ಯಾಷಿಯಂ ನೈಟ್ರೇಟ್ 15%ಇದ್ದಿಲು ಮತ್ತು 10% ಗಂಧಕದ ಮಿಶ್ರಣದಿಂದ ಗನ್ ಪೌಡರ್ ತಯಾರಾಗುತ್ತದೆ. ಈಗ ಪೌಡರನ್ನು ಸಿಡಿಮದ್ದಿನ ಬೆನ್ನೆಲುಬು ಎಂದರೆ ತಪ್ಪಾಗಲಾರದು. ಈ ಸಿಡಿಮದ್ದುಗಳಿಗೆ ಬೆಂಕಿಯ ಕಿಡಿ ತಗಲುವುದರಿಂದ ಚಿತ್ತಾಕರ್ಷಕವಾದ ಬಣ್ಣದ ಬೆಳಕು ಕಂಗೊಳಿಸುವಂತೆ ನಮ್ಮ ಚಿತ್ತವನ್ನು ಆಕರ್ಷಿಸುತ್ತವೆ ಹಾಗೂ ಮನಸ್ಸಿಗೆ ಉಲ್ಲಾಸವನ್ನು ಕೊಡುತ್ತವೆ.

> ಟಿ.ರೇಖಾ ಚಿತ್ರಕಲಾ ಶಿಕ್ಷಕರು
ಸ.ಪ.ಪೂ.ಕಾಲೇಜು ಪ್ರೌಢಶಾಲಾ ವಿಭಾಗ, ಶಿರಾ-572137, ಮೊ.ನಂ: 9845641941

Facebook
Twitter
Telegram
WhatsApp
suddionenews

suddionenews

Leave a Comment

Top Stories

ಅಣ್ಣಾವ್ರಿಗೆ ಅಣ್ಣಾವ್ರೇ ಸಾಟಿ, ಹಿರಿಯೂರಲ್ಲಿ ಬಿ.ಎನ್.ಚಂದ್ರಪ್ಪ ಬಣ್ಣನೆ

ಸುದ್ದಿಒನ್, ಚಿತ್ರದುರ್ಗ, ಏ. 24 :  ಮುಖ್ಯಮಂತ್ರಿ ಸ್ಥಾನವನ್ನು ಸುಲಭವಾಗಿ ಅಲಂಕರಿಸುವ ಬಂದಿದ್ದ ಅವಕಾಶವನ್ನು ನಿರಾಕರಿಸಿ, ಕನ್ನಡ ನಾಡು-ನುಡಿಗೆ ಬದುಕು ಮಿಸಲಿಟ್ಟ ಡಾ.ರಾಜಕುಮಾರ್ ಅವರಿಗೆ ಅವರೇ ಸಾಟಿ ಎಂದು ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಬಣ್ಣಿಸಿದರು.

ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಸುಳ್ಳು ಹೇಳಿದರೆ ತಾಯಿ ಭದ್ರೆ ಸಹಿಸುವುದಿಲ್ಲ : ಕಮಲ ಪಡೆಗೆ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ತಿರುಗೇಟು

ಸುದ್ದಿಒನ್, ಚಿತ್ರದುರ್ಗ, ಏ. 24 : ಭದ್ರಾ ಮೇಲ್ದಂಡೆ ಯೋಜನೆ ವಿಷಯದಲ್ಲಿ ನಿರಂತರ ಸುಳ್ಳು ಹೇಳಿಕೊಂಡು ಬರುತ್ತಿರುವ ಬಿಜೆಪಿಯವರಿಗೆ ಭದ್ರಾ ಮೇಲ್ದಂಡೆ ಯೋಜನೆ ಜಾರಿ, ಅದಕ್ಕಾಗಿ ನಡೆದ ಹೋರಾಟದ ಮಾಹಿತಿ ಕೊರತೆ ಇದೆ ಅಥವಾ

ಏಪ್ರಿಲ್ 26 ರಂದು ಲೋಕಸಭೆ ಚುನಾವಣೆ | ಸಾರ್ವತ್ರಿಕ ರಜಾದಿನ ಘೋಷಣೆ

ಚಿತ್ರದುರ್ಗ. ಏ.24: ಎರಡನೇ ಹಂತದ ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಏಪ್ರಿಲ್ 26 ರಂದು ಚಿತ್ರದುರ್ಗ ಜಿಲ್ಲೆಯಲ್ಲಿ ಮತದಾನ ಜರುಗಲಿದೆ. ಮತದಾನದ ದಿನವನ್ನು ಸಾರ್ವತ್ರಿಕ ರಜಾದಿನವನ್ನಾಗಿ ಘೋಷಣೆ ಮಾಡಲಾಗಿದೆ. ಅಂದು ಎಲ್ಲಾ ಸರ್ಕಾರಿ ಹಾಗೂ ಖಾಸಗಿ

error: Content is protected !!