ಹೊಂಬೆಳಕಿನ ಕೇಕೆ : ಡಾ.ಎಸ್ ಎಚ್ ಶಫಿಉಲ್ಲ ಅವರ ದೀಪಾವಳಿ ಕವನ

suddionenews
1 Min Read

 

ಬೆಳಕಿನ ಬೆಲೆ ಸಾರುವ ಹಬ್ಬವಿದು
ಚಿಣ್ಣರು ಚಿಲಿಪಿಲಿಗುಡುವ ಸಮಯವಿದು
ಕುಸುಮ ಗುಚ್ಚಗಳ ಅಂದದ ಸಂಭ್ರಮವಿದು
ಸಾಲು ಹಣತೆಗಳ ಮನೋಜ್ಞ ನೋಟವಿದು

ರಂಗುರಂಗಿನ ಉಡುಗೆ ತೊಡುಗೆಗಳ
ರಸಪಾಕ ಹೋಳಿಗೆ ಕಡುಬುಗಳ
ಸವಿಸವಿದು ನಲಿನಲಿವ ಕ್ಷಣಗಳ
ಮರೆಯಲಾದೀತೆ ಈ ದೀಪಾವಳಿ ದಿನಗಳ

ನರಕ ಚತುರ್ದಶಿ ಬಲಿಪಾಡ್ಯಮಿ
ಅಮವಾಸೆ ವಿಶೇಷಗಳ  ಈ ಭೂಮಿ
ಸದಾಕಾಲ ಪರಮಪಾವನವೆನ್ನಿ
ನಿಷ್ಕಲ್ಮಶ ಭಾವದಿ ಆನಂದಿಸುವ ಬನ್ನಿ

ಸಿಂಗಾರಗೊಂಡ ಅಂಗಡಿಮುಂಗ್ಗಟ್ಟು
ಮಿನುಮಿನುಗುವ ಲೈಟುಗಳ ಕಟ್ಟು
ಅಲಂಕಾರಗೊಂಡ ಗುಡಿಗೋಪುರ
ಕಣ್ಕುಕ್ಕಿದೆ ಹೆಂಗೆಳೆಯರ ರೇಶಿಮೆ ಬಂಗಾರ

ಪಟಾಕಿ ಸಿಡಿಸಲೇ ಬೇಕಾ ಮಗುವೇ?
ಯೋಚಿಸೊಮ್ಮೆ ಮಲಿನತೆಯ ಕುರಿತು ಮನವೇ?
ಮಬ್ಬಡರಿಸುವ ಮದ್ದುಗಳ ಆರ್ಭಟವೇಕೆ?
ಪ್ರಜ್ವಲಿಸಲಿ ದೀವಿಗೆಗಳ ಹೊಂಬೆಳಕಿನ ಕೇಕೆ !

ಡಾ.ಎಸ್ ಎಚ್ ಶಫಿಉಲ್ಲ (ಕುಟೀಶ)
ಸಾಹಿತಿಗಳು, ಉಪನ್ಯಾಸಕರು, ಹಿರೇಕುಂಬಳಗುಂಟೆ
ಮೊ.ನಂ: 8867435662

Share This Article
Leave a Comment

Leave a Reply

Your email address will not be published. Required fields are marked *