in

ಸಾಹುಕಾರ್ ಎಂಬ ಹೋರಿ ಹುಟ್ಟುಹಬ್ಬ ಆಚರಿಸಿದ ಶಾಸಕ ರೇಣುಕಾಚಾರ್ಯ..!

suddione whatsapp group join

ದಾವಣಗೆರೆ: ಕೊರೊನಾ ಸಂದರ್ಭದಲ್ಲಿ ಜನರ ಕಷ್ಟಗಳಿಗೆ ಮಿಡಿದು ಹೆಸರಾಗಿದ್ದ ರೇಣುಕಾಚಾರ್ಯ ಇದೀಗ ಕೊರೊನಾ ನಿಯಮ ಮುರಿದಿದ್ದಾರೆ ಎಂಬ ಆರೋಪಗಳು ಕೇಳಿ ಬರ್ತಿವೆ.

ಹೊನ್ನಾಳಿ ತಾಲೂಕಿನ ಜೀನಹಳ್ಳಿ ಗ್ರಾಮದಲ್ಲಿ ಸಾಹುಕಾರ್ ಎಂಬ ಹೋರಿ ಇದೆ. ಆ ಹೋರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈ ಸಂಭ್ರಮದಲ್ಲಿ ಶಾಸಕ ಎಂಪಿ ರೇಣುಕಾಚಾರ್ಯ ಕೂಡ ಭಾಗಿಯಾಗಿದ್ರು. ಹೋರಿಯ ಮೆರವಣಿಗೆ ಮಾಡಿ, ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿದ್ದಾರೆ.

ಹೋರಿಗೆ ಹಾರ-ತುರಾಯಿ ಹಾಕಿ, ನೂರಾರು ಜನರು ಸೇರಿ ಮೆರವಣಿಗೆ ಮಾಡಿಕೊಂಡು ಬಂದಿದ್ದಾರೆ. ಬಳಿಕ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಆದ್ರೆ ಈ ವೇಳೆ ಶಾಸಕರಾಗಲಿ, ಜೊತೆಯಲ್ಲಿದ್ದವರಾಗಲಿ ಮಾಸ್ಕ್ ಹಾಕಿಲ್ಲ, ಸಂಭ್ರಮದ ಘಳಿಗೆಯಲ್ಲಿ ಸಾಮಾಜಿಕ ಅಂತರವನ್ನು ಫಾಲೋ ಮಾಡಿಲ್ಲ. ಇದು ಎಲ್ಲರ ಕಣ್ಣು ಕುಕ್ಕಿದೆ. ಶಾಸಕರೇ ಹೀಗೆ ಕೊರೊನಾ ನಿಯಮ ಉಲ್ಲಂಘಿಸಿದ್ರೆ ಹೇಗೆ ಎಂಬ ಮಾತುಗಳು ಕೇಳಿ ಬಂದಿದೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಸಂಚಾರಿ ನಿಯಮ ಉಲ್ಲಂಘಿಸಿದ್ರು ಭಯವಿಲ್ಲ..ಯಾಕಂದ್ರೆ ಆತ ಸಂಚಾರಿ ಜಂಟಿ ಆಯುಕ್ತರ ಫ್ಯಾನ್..!

ಸೋಮವಾರದ ಅಧಿವೇಶನದಲ್ಲಿ ರೈತರಿಗೆ ಪರಿಹಾರದ ಚರ್ಚೆ : ಸತೀಶ್ ಜಾರಕಿಹೊಳಿ