ದಾವಣಗೆರೆ : ಮಾ.8ಕ್ಕೆ ಜಿಲ್ಲೆಯಾದ್ಯಂತ ರಾಷ್ಟ್ರೀಯ ಲೋಕ್ ಅದಾಲತ್ : ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ

ದಾವಣಗೆರೆ:ಮಾರ್ಚ್.05 : ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ದಾವಣಗೆರೆ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಮಾರ್ಚ್ 8ರಂದು ರಾಷ್ಟ್ರೀಯ ಲೋಕ್ ಅದಾಲತ್ ಆಯೋಜಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ತಿಳಿಸಿದರು.

ಅವರು ಬುಧವಾರ ಜಿಲ್ಲಾ ನ್ಯಾಯಾಲಯದಲ್ಲಿ ಲೋಕ್ ಅದಾಲತ್ ಕುರಿತಂತೆ ಮಾಹಿತಿ ನೀಡಲು ಏರ್ಪಡಿಸಲಾದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ರಾಷ್ಟ್ರೀಯ ಲೋಕ್ ಅದಾಲತ್ ಮೂಲಕ ಅತಿ ಹೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಉದ್ದೇಶಿ ಇದಾಗಿದೆ. ರಾಷ್ಟೀಯ ಲೋಕ್ ಅದಾಲತ್ ನ್ನು ದಾವಣಗೆರೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಜಿಲ್ಲೆಗಳಲ್ಲಿರುವ ಎಲ್ಲಾ ನ್ಯಾಯಾಲಯಗಳಲ್ಲಿ  ಲೋಕ್ ಅದಾಲತ್ ನಡೆಯಲಿದೆ ಎಂದು ಹೇಳಿದರು.

ಲೋಕ್ ಅದಾಲತ್ ನಲ್ಲಿ ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿರುವ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಕಡಿಮೆ ಖರ್ಚಿನಲ್ಲಿ ಶೀಘ್ರವಾಗಿ ಪರಿಹರಿಸಿಕೊಳ್ಳಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ರಾಜಿಯಾಗಬಲ್ಲ ಎಲ್ಲಾ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳನ್ನು ಬಗೆಹರಿಸಲು ಅವಕಾಶವಿದೆ. ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಸಿವಿಲ್ ಹಾಗೂ ಕ್ರಿಮಿನಲ್ ಸೇರಿದಂತೆ 41965 ಪ್ರಕರಣಗಳು ಬಾಕಿ ಇದ್ದು ಇದರಲ್ಲಿ ಶೇ 50 ರಷ್ಟು ಪ್ರಕರಣಗಳು ಕ್ರಿಮಿನಲ್ ಸ್ವರೂಪದ್ದಾಗಿವೆ. ಬಾಕಿ ಇರುವ ಪ್ರಕರಣಗಳಲ್ಲಿ ಬರುವ ಲೋಕ್ ಅದಾಲತ್‍ನಲ್ಲಿ 11366 ರಾಜಿಯಾಗಬಲ್ಲ ಪ್ರಕರಣಗಳೆಂದು ಗುರುತಿಸಿದ್ದು ಇದರಲ್ಲಿ 8 ರಿಂದ 10 ಸಾವಿರ ಪ್ರಕರಣಗಳನ್ನು ಇತ್ಯರ್ಥ ಮಾಡಲು ಉದ್ದೇಶಿಸಲಾಗಿದೆ ಎಂದರು.

ಮೋಟಾರ್ ವಾಹನ ಅಪಘಾತ ಪರಿಹಾರ ಪ್ರಕರಣಗಳು, ಚೆಕ್ ಅಮಾನ್ಯ ಪ್ರಕರಣಗಳು, ಭೂಸ್ವಾಧೀನ ಪರಿಹಾರ ಪ್ರಕರಣಗಳು, ಬ್ಯಾಂಕ್ ಸಾಲ ವಸೂಲಾತಿ ಪ್ರಕರಣಗಳು, ಎಂ.ಎಂ.ಡಿ.ಆರ್. ಕಾಯ್ದೆಯಡಿಯ ಪ್ರಕರಣಗಳನ್ನು ಲೋಕ್ ಅದಾಲತ್ ನಲ್ಲಿ ಪರಿಹರಿಸಿಕೊಳ್ಳಬಹುದು. ಕೌಟುಂಬಿಕ ನ್ಯಾಯಾಲಯದ ಪ್ರಕರಣಗಳು (ವಿಚ್ಛೇಧನ ಹೊರತುಪಡಿಸಿ), ಪಿಂಚಣಿ ಪ್ರಕರಣಗಳು, ವೇತನ ಭತ್ಯೆ ಸಂಬಂಧಿಸಿದ ಪ್ರಕರಣಗಳು, ವಿದ್ಯುತ್ ಹಾಗೂ ನೀರಿನ ಶುಲ್ಕ, ಕೈಗಾರಿಕೆ, ಕಾರ್ಮಿಕರ ವೇತನ, ಕಾರ್ಮಿಕ ವಿವಾದ ಇತ್ಯಾದಿ ಪ್ರಕರಣಗಳನ್ನು ಪರಸ್ಪರ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬಹುದು. ರಾಜಿ ಬಗ್ಗೆ ಅನುಕೂಲವಾಗಲಿ ಎಂದು ರಾಜಿ ಪೂರ್ವ ಸಮಾಲೋಚನೆಗಳನ್ನು ಕೂಡ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಾರ್ವಜನಿಕರು ಮಾರ್ಚ್ 8 ರಂದು ನಡೆಯುವ ರಾಷ್ಟ್ರೀಯ ಲೋಕ್ ಆದಾಲತ್‍ನ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕು.  ಹೆಚ್ಚಿನ ಮಾಹಿತಿಗಾಗಿ ದಾವಣಗೆರೆ ಹಳೆಯ ನ್ಯಾಯಾಲಯ ಸಂಕೀರ್ಣದಲ್ಲಿರುವ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ದಾವಣಗೆರೆ ಇವರನ್ನು ದೂರವಾಣಿ ಸಂಖ್ಯೆ 08192-296364, ತಾಲ್ಲೂಕು ಕಾನೂನು ಸೇವಾ ಸಮಿತಿಗಳಾದ ಹರಿಹರ ದೂರವಾಣಿ ಸಂಖ್ಯೆ: 08192-296885, ಹೊನ್ನಾಳಿ ದೂರವಾಣಿ ಸಂಖ್ಯೆ 08188-251732, ಚನ್ನಗಿರಿ: 08189-229195 2 ಜಗಳೂರು: 08196-227600 ಇವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ.ಮಾತನಾಡಿ ಜನನ ಪ್ರಮಾಣ ಪತ್ರದಲ್ಲಿ ಹಲವು ಲೋಪದೋಷಗಳಿಂದ ಸುಮಾರು 2 ಸಾವಿರ ಪ್ರಕರಣಗಳು ಕೋರ್ಟ್‍ನಲ್ಲಿದ್ದವು, ಇವುಗಳನ್ನು ಆದ್ಯತೆ ಮೇಲೆ ಇತ್ಯರ್ಥ ಮಾಡಲಾಗಿದೆ. ಮತ್ತು ಕಂದಾಯ ಇಲಾಖೆಗೆ ಸಂಬಂಧಿಸಿದ ಪ್ರಕರಣಗಳು ತಹಶೀಲ್ದಾರ್, ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಯವರ ಕೋರ್ಟ್‍ನಲ್ಲಿ ಇದ್ದ ಹಲವು ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ. ಎಲ್ಲಾ ತಹಶೀಲ್ದಾರರ ಬಳಿ 200 ಕ್ಕಿಂತ ಕಡಿಮೆ ಹಾಗೂ ಎರಡು ಉಪವಿಭಾಗಾಧಿಕಾರಿಗಳ ಬಳಿ 250 ಕ್ಕಿಂತ ಕಡಿಮೆ ಮತ್ತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ 50 ಪ್ರಕರಣಗಳಿಗಿಂತ ಕಡಿಮೆ ಪ್ರಕರಣಗಳಿವೆ. ಹಿಟ್ ಅಂಡ್ ರನ್ ಪ್ರಕರಣಗಳಲ್ಲಿ ಗಾಯಾಳುಗಳು ಮತ್ತು ಮರಣ ಹೊಂದಿದವರಿಗೆ ಪರಿಹಾರ ನೀಡಲು ಅವಕಾಶ ಇದ್ದು ಪೊಲೀಸ್ ಇಲಾಖೆ ಮತ್ತು ಕಂದಾಯ ಇಲಾಖೆಯಿಂದ ಜಂಟಿಯಾಗಿ ಕಾರ್ಯರೂಪಕ್ಕೆ ತಂದು ಅಂತಹ ಪ್ರಕರಣಗಳಲ್ಲಿ ವಾರದಲ್ಲಿ ಕ್ರಮ ವಹಿಸಲಾಗುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರಣ್ಣವರ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಟಿ.ಎಂ.ನಿವೇದಿತಾ, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ವಿಜಯಕುಮಾರ್ ಎಂ. ಸಂತೋಷ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್.ಅರುಣ್‍ಕುಮಾರ್, ವಕೀಲರ ಸಂಘದ ಜಿ.ಕೆ.ಬಸವರಾಜ್, ಗೋಪನಾಳು ಎಸ್.ಬಸವರಾಜ್, ಎ.ಎಸ್.ಮಂಜುನಾಥ್ ಇದ್ದರು.

suddionenews

Recent Posts

ಇಂದು ನಡೆದಾಡುವ ದೇವರು ಶಿವಕುಮಾರ ಶ್ರೀಗಳ 118ನೇ ಜನ್ಮದಿನೋತ್ಸವ

  ತುಮಕೂರು; ತ್ರಿವಿಧ ದಾಸೋಹಿ, ನಡೆದಾಡುವ ದೇವರು ಶ್ರೀ ಶ್ರೀ ಸಿದ್ದಗಂಗಾ ಮಹಾಸ್ವಾಮಿಗಳ 118ನೇ ಜನಮದಿನೋತ್ಸವ. ಇದರ ಅಂಗವಾಗಿ ಇಂದು…

23 minutes ago

ಹಿಂದೆ ಸರಿದಿದ್ದ ಹೊರಟ್ಟಿ‌ ಮತ್ತೆ ರಾಜೀನಾಮೆ ಮಾತಾಡಿದ್ದಾರೆ ; ಕಾರಣವೇನು ಗೊತ್ತಾ..?

    ಇತ್ತೀಚೆಗಷ್ಟೇ ಸದನದಲ್ಲಿ ಆದ ಬೆಳವಣಿಗೆಯಿಂದ ಬೇಸತ್ತು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಬಸವರಾಜ್ ಹೊರಟ್ಟಿ ಅವರು…

33 minutes ago

ಹೊಸ ಆರ್ಥಿಕ ವರ್ಷ ಪ್ರಾರಂಭ ; ಯಾವುದೆಲ್ಲ ಹೆಚ್ಚಳವಾಗಲಿದೆ..?

ಬೆಂಗಳೂರು; ಇಂದಿನಿಂದ ಹೊಸ ಆರ್ಥಿಕ ವರ್ಷ ಪ್ರಾರಂಭವಾಗಿದೆ. ಕೆಲವೊಂದರ ದರ ಏರಿಕೆಯನ್ನು ಜನರು ಅನುಭವಿಸಬೇಕಾಗುತ್ತದೆ. ಹಾಗಾದ್ರೆ ಯಾವುದೆಲ್ಲರ ದರ ಏರಿಕೆಯಾಗಿದೆ..?…

45 minutes ago

ಬಾಹ್ಯಾಕಾಶದಿಂದ ಭಾರತ ಹೇಗೆ ಕಾಣಿಸುತ್ತದೆ..? ಸುನೀತಾ ವಿಲಿಯಮ್ಸ್ ಕೊಟ್ಟ ಉತ್ತರವೇನು..?

ಸುಮಾರು ಒಂಭತ್ತು ತಿಂಗಳುಗಳ ಕಾಲ ಬಾಹ್ಯಾಕಾಶದಲ್ಲಿ ಸಿಲುಕಿದ್ದ ಸುನೀತಾ ವಿಲಿಯಮ್ಸ್ ಹಲವು ಸಂಶೋಧನೆಗಳನ್ನ ಮಾಡಿದ್ದಾರೆ. ಪ್ರತಿದಿನ ಏನಾದರೊಂದು ಕಂಡುಹಿಡಿಯುತ್ತಾ ಜೀವಿಸಿದ್ದಾರೆ.…

1 hour ago

ಮೊಳಕಾಲ್ಮೂರು : ಭೀಕರ ರಸ್ತೆ ಅಪಘಾತ : ಇಬ್ಬರು ಸ್ಥಳದಲ್ಲೇ ಸಾವು…!

ಸುದ್ದಿಒನ್, ಮೊಳಕಾಲ್ಮೂರು, ಏಪ್ರಿಲ್. 01 : ತಾಲೂಕಿನ ಬೊಮ್ಮಕ್ಕನಹಳ್ಳಿಯಲ್ಲಿ ಇಂದು ಬೆಳ್ಳಂ ಬೆಳಿಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಲಿಸುತ್ತಿದ್ದ…

3 hours ago

ಈ ರಾಶಿಯವರಿಗೆ ಗುರು ಬಲ ಬಂದಿದೆ ಮದುವೆ ಸಡಗರ ಕಂಡಿತು

ಈ ರಾಶಿಯವರಿಗೆ ಗುರು ಬಲ ಬಂದಿದೆ ಮದುವೆ ಸಡಗರ ಕಂಡಿತು, ಈ ರಾಶಿಯವರು ಯಾವುದೇ ಕಾರಣಕ್ಕೂ ಉದ್ಯೋಗದ ಸ್ಥಳ ಬದಲಾಯಿಸಬಾರದು,…

7 hours ago