ದಾವಣಗೆರೆ | ಸೆ. 17 ರಂದು ವಿದ್ಯುತ್ ವ್ಯತ್ಯಯ

1 Min Read

 

ದಾವಣಗೆರೆ (ಸೆ.16) : ಸೆಪ್ಟೆಂಬರ್ 17 ರ ಶನಿವಾರದಂದು ಬೆ.10 ರಿಂದ ಸ.4 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯಯ ಉಂಟಾಗಲಿದೆ.

ದಾವಣಗೆರೆ 220 ಕೆ.ವಿ ಎಸ್.ಆರ್.ಎಸ್ ವಿದ್ಯುತ್ ಸ್ವೀಕರಣಾ ಕೇಂದ್ರ: ಸರಸ್ವತಿ ಫೀಡರ್ ಎಫ್-10 ಸರಸ್ವತಿ ಬಡಾವಣೆ ಎ ಮತ್ತು ಬಿ ಬ್ಲಾಕ್, ಜಯನಗರ ಎ,ಬಿ ಮತ್ತು ಸಿ ಬ್ಲಾಕ್ ಭೂಮಿಕಾ ನಗರ ಜೆ,ಎನ್ ಕಾನ್ವೇಂಟ್, ಕೆ.ಎಸ್.ಎಸ್ ಕಾಲೇಜ್ ಮತ್ತು ಸುತ್ತ ಮುತ್ತ ಪ್ರದೇಶಗಳು.

ದಾವಣಗೆರೆ 66/11ಕೆ.ವಿ ವಿದ್ಯುತ್ ಉಪಕೇಂದ್ರ: ಡಿಸಿಎಮ್ ಎಫ್-06 ನಿಟ್ಟುವಳ್ಳಿ ಶ್ರೀ ರಾಮ್ ಬಡಾವಣೆ, ಡಿಸಿಎಂ ಟೌನ್‍ಶಿಪ್, ಜಯನಗರ ಸಿ ಬ್ಲಾಕ್, ಶಕ್ತಿನಗರ, ಎಸ್.ಎಸ್ ಹೈಟೆಕ್, ಲೇಔಟ್, ಭೂಮಿಕಾ ನಗರ, ಅಂಬಿಕಾ ಬಡಾವಣೆ, ಭಗತ್‍ಸಿಂಗ್ ನಗರ, ಕೊಟ್ಟೂರೇಶ್ವರ ಬಡಾವಣೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

                   ಬೆಸ್ಕಾಂ ಗ್ರಾಹಕ ಸಂವಾದ ಸಭೆ

ಬೆಸ್ಕಾಂ ದಾವಣಗೆರೆ ನಗರ ಉಪವಿಭಾಗ-1 ರ ವತಿಯಿಂದ ಸೆಪ್ಟೆಂಬರ್ 17 ರಂದು ಮಧ್ಯಾಹ್ನ 03 ಗಂಟೆಗೆ ಕಚೇರಿಯಲ್ಲಿ ಗ್ರಾಹಕರ ಸಂವಾದ ಸಭೆಯನ್ನು ಆಯೋಜಿಸಲಾಗಿದೆ. ಆದ್ದರಿಂದ ಸಭೆಯಲ್ಲಿ ಗ್ರಾಹಕರು ತಮ್ಮ ವಿದ್ಯುತ್ ಸಂಬಂಧಿತ ಯಾವುದೇ ಕುಂದುಕೊರತೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ ಎಂದು ನಗರ ಉಪ ವಿಭಾಗ-1 ರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *