ದಾವಣಗೆರೆ (ಮೇ.05) : ಜಿಲ್ಲೆಯಲ್ಲಿ ಮೇ.04 ರಂದು 11.0 ಮಿ.ಮೀ. ಸರಾಸರಿ ಮಳೆಯಾಗಿದ್ದು. 3.20 ಲಕ್ಷ ರೂ ಅಂದಾಜು ನಷ್ಟ ಸಂಭವಿಸಿದೆ. ತಾಲ್ಲೂಕುವಾರು ಮಳೆ ಹಾಗೂ ಹಾನಿ ವಿವರ ಈ ಕೆಳಕಂಡಂತಿದೆ.
ಚನ್ನಗಿರಿ 14.0 ಮಿ.ಮೀ, ದಾವಣಗೆರೆ ತಾಲ್ಲೂಕಿನಲ್ಲಿ 6.0 ಮೀ.ಮಿ, ಹರಿಹರದಲ್ಲಿ 11.0 ಮಿ.ಮೀ, ಹೊನ್ನಾಳಿ 14.0 ಮಿ.ಮೀ ಮಳೆಯಾಗಿದೆ. ಜಗಳೂರು 2.0 ಮಿ.ಮೀ, ನ್ಯಾಮತಿಯಲ್ಲಿ 26.0 ಮಿ.ಮೀ ಮಳೆಯಾಗಿದೆ.
ದಾವಣಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ 2 ಕಚ್ಚಾ ಮನೆ ಭಾಗಶಃ ಹಾನಿಯಾಗಿದ್ದು, ರೂ.0.60 ಲಕ್ಷ ಮತ್ತು 4 ಎಕರೆ ಬಾಳೆಬೆಳೆ ಹಾನಿಯಾಗಿದ್ದು, ರೂ.0.70 ಲಕ್ಷ.ಅಂದಾಜು ನಷ್ಟ ಸಂಭವಿಸಿರುತ್ತದೆ.
ಹರಿಹರ ತಾಲ್ಲೂಕು ವ್ಯಾಪ್ತಿಯಲ್ಲಿ 3 ಕಚ್ಚಾ ಮನೆ ಭಾಗಶಃ ಹಾನಿಯಾಗಿದ್ದು, ರೂ.0.90 ಲಕ್ಷ ಮತ್ತು 4 ಎಕರೆ ಭತ್ತದ ಬೆಳೆ ಹಾನಿಯಾಗಿದ್ದು, ರೂ.0.30 ಲಕ್ಷ ಅಂದಾಜು ನಷ್ಟ ಸಂಭವಿಸುತ್ತದೆ.
ಚನ್ನಗಿರಿ ತಾಲ್ಲೂಕು ವ್ಯಾಪ್ತಿಯಲ್ಲಿ 1.20 ಎಕರೆ ಮೆಕ್ಕೆಜೋಳದ ಬೆಳೆ ಹಾನಿಯಾಗಿದ್ದು, ರೂ.0.70 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ. ಒಟ್ಟು ರೂ.3.20 ಲಕ್ಷ ಅಂದಾಜು ನಷ್ಟ ಸಂಭವಿಸಿದೆ. ಸರ್ಕಾರದ ಮಾರ್ಗಸೂಚಿ ಅನ್ವಯ ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.01 : ಪ್ರಯಾಗ್ ರಾಜ್ ನಲ್ಲಿ ಜರುಗುತ್ತಿರುವ ಕುಂಭಮೇಳದಲ್ಲಿ ಇತ್ತೀಚೆಗೆ ಜರುಗಿದ ಕಾಲ್ತುಳಿತದಲ್ಲಿ ಚಿತ್ರದುರ್ಗದ ಓರ್ವರು…
ಸುದ್ದಿಒನ್ : ಅರಿಶಿನವು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂದು ಅನೇಕ ಜನರಿಗೆ ತಿಳಿದಿದೆ. ಅರಿಶಿನದಿಂದ ದೇಹದ ಆರೋಗ್ಯ ಮತ್ತು…
ಈ ರಾಶಿಯವರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ನೌಕರಿ ಸಿಗಲಿದೆ, ಈ ರಾಶಿಯವರಿಗೆ ಅತಿ ಶೀಘ್ರದಲ್ಲಿ ವಿದೇಶ ಪ್ರವಾಸ, ಶನಿವಾರದ ರಾಶಿ…
ಪ್ರಯಾಗ್ ರಾಜ್: ಎಷ್ಟೋ ದಶಕಗಳಿಗೊಮ್ಮೆ ಬರುವ ಮಹಾಕುಂಭಮೇಳದಲ್ಲಿ ಭಾಗವಹಿಸಬೇಕೆಂದು ದೇಶದ ಎಲ್ಲರ ಆಸೆ. ತ್ರಿವೇಣಿ ಸಂಗಮದಲ್ಲಿ ಮಿಂದೆದ್ದು ಬರಬೇಕೆಂದು ಕೋಟ್ಯಾಂತರ…
ಚಿತ್ರದುರ್ಗ. ಜ.31: ಇತ್ತೀಚಿಗೆ ಮೈಕ್ರೋಫೈನಾನ್ಸ್, ಲೇವಾದೇವಿ, ಗಿರವಿ ಹಣಕಾಸು ಸಂಸ್ಥೆಗಳಿಂದ ತನ್ನ ಸಾಲಗಾರರಿಗೆ ಅತಿಯಾಗಿ ಬಡ್ಡಿ ವಿಧಿಸುತ್ತಿರುವುದು ಹಾಗೂ ಸಾಲ…
ಸುದ್ದಿಒನ್, ಚಿತ್ರದುರ್ಗ, ಜನವರಿ. 31 : ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ವತಿಯಿಂದ ದಿನಾಂಕ : 31.01.2025ರ ಗುರುವಾರ…