Connect with us

Hi, what are you looking for?

ಪ್ರಮುಖ ಸುದ್ದಿ

ಮಗನೊಂದಿಗೆ ಸೇರಿ ಪತ್ನಿಯನ್ನ ಕೊಂದ ಪಾಪಿ ಪತಿರಾಯ!

ದಾವಣಗೆರೆ: ಹಣ ಹಾಗೂ ಆಸ್ತಿಯ ವಿಚಾರಕ್ಕೆ ಸಂಬಂಧಿಸಿದಂತೆ ಪತಿ ತನ್ನ ಪುತ್ರನೊಂದಿಗೆ ಸೇರಿ ಪತ್ನಿಯನ್ನೇ ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ಕಬ್ಬೂರು ಗ್ರಾಮದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸಿದ್ದಮ್ಮ (35) ಕೊಲೆಯಾದ ಮಹಿಳೆ. ಈಕೆಯ ಪತಿ ಕೆಂಚವೀರಪ್ಪ, ಪುತ್ರ ವಿಕಾಸ್, ಮೃತಳ ಮಾವ ಶೇಖರಪ್ಪ ಹಾಗೂ ರಾಜಪ್ಪ ಅಲಿಯಾಸ್ ನಾಗರಾಜಪ್ಪ ಈ ನಾಲ್ವರು ಬಂಧಿತ ಆರೋಪಿಗಳು.

ಕಳೆದ ನಾಲ್ಕೈದು ದಿನಗಳ ಹಿಂದೆ ಹಳೇ ಬಿಸ್ಲೇರಿ ಗ್ರಾಮದ ಚಾನಲ್‌ನಲ್ಲಿ ಸಿದ್ದಮ್ಮಳ ಶವ ಪತ್ತೆಯಾಗಿದ್ದು, ತಲೆ ಹಾಗೂ ಮುಖದ ಮೇಲೆ ಗಾಯಗಳಾಗಿದ್ದವು. ಈ ಕುರಿತು ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪೊಲೀಸರು ಈ ಕುರಿತು ವಿಚಾರಣೆ ನಡೆಸಿದಾಗ ಪತಿ ಪತ್ನಿಯರ ಮಧ್ಯೆ ಆಸ್ತಿ ಹಾಗೂ ಹಣದ ಸಂಬಂಧ ಜಗಳವಿತ್ತು ಎಂಬುದಾಗಿ ತಿಳಿದುಬಂದಿದೆ. ಪತಿ ಸಿದ್ದವೀರಪ್ಪ ಉಳಿದ ಮೂವರೊಂದಿಗೆ ಚಾನಲ್ ಬಳಿ ಸಿದ್ದಮ್ಮನನ್ನು ಕರೆಸಿಕೊಂಡು ಹಲ್ಲೆ ನಡೆಸಿ ಹತ್ಯೆ ಮಾಡಿರುವ ವಿಷಯ‌ ಬಯಲಾಗಿದೆ. ಹೆಣವನ್ನು ಚಾನೆಲ್‌ಗೆ ಎಸೆದಿದ್ದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.

ತನಿಖೆಗಾಗಿ ಗ್ರಾಮಾಂತರ ಡಿವೈಎಸ್ಪಿ ನರಸಿಂಹ ವಿ. ತಾಮ್ರಧ್ವಜ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದು, ಸಿಪಿಐ ಮಂಜುನಾಥ್, ಹದಡಿ ಪಿಎಸ್‌ಐ ಪ್ರಸಾದ್, ಎ.ಎಸ್ಐ ಚನ್ನವೀರಪ್ಪ ಸಿಬ್ಬಂದಿ ಮಂಜುನಾಥ, ಕರಿಬಸಪ್ಪ ಶಿವಕುಮಾರ್, ವೀರಭದ್ರಪ್ಪ, ಅಣ್ಣಯ್ಯ, ಶ್ರೀನಿವಾಸ್ ತಂಡದಲ್ಲಿ ಇದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ರಾಜೀವ್ ಪ್ರಶಂಸೆ ವ್ಯಕ್ತಪಡಿಸಿ, ಬಹುಮಾನ ಘೋಷಿಸಿದ್ದಾರೆ.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ದಾವಣಗೆರೆ : ಜಿಲ್ಲೆಯಾದ್ಯಂತ ಭತ್ತದ ಬೆಳೆಗೆ ದುಂಡಾಣು ಅಂಗಮಾರಿ ರೋಗ ಕಂಡುಬಂದಿದ್ದು, ಇದರ ನಿರ್ವಹಣೆಗೆ ಕೃಷಿ ಇಲಾಖೆ ರೈತರಿಗೆ ಸಲಹೆ ನೀಡಿದೆ. ಭತ್ತದ ಬೆಳೆಯಲ್ಲಿ ಬೆಳವಣಿಗೆಯಿಂದ ತೆನೆ ಒಡೆಯುವ ಹಂತದವರೆಗೆ ತಲುಪಿ ಅಲ್ಲಲ್ಲಿ...

ಪ್ರಮುಖ ಸುದ್ದಿ

ಚಿತ್ರದುರ್ಗ : ಚಿತ್ರದುರ್ಗ ಜಿಲ್ಲೆಯಲ್ಲಿ ಕೋವಿಡ್-19 ವೈರಸ್‍ನ ಸೋಂಕಿತ ಪ್ರಕರಣಗಳ ಸಂಖ್ಯೆ ಹಾವು ಏಣಿ ಆಟದಂತಾಗಿದೆ. ಆದರೆ ಸೋಮವಾರದ ಗುಣಮುಖಗೊಂಡವರು ಹೆಚ್ಚಾಗಿದ್ದು, ಸಮಾಧಾನ ತಂದಿದೆ. ಸೋಮವಾರದ ವರದಿಯಲ್ಲಿ 11 ಜನರಿಗೆ ಸೋಂಕು ದೃಢಪಟ್ಟಿದ್ದು,...

ಪ್ರಮುಖ ಸುದ್ದಿ

ಚಿತ್ರದುರ್ಗ :  ಕೋವಿಡ್-19 ಹಿನ್ನಲೆಯಲ್ಲಿ ಧಾರ್ಮಿಕ ಹಬ್ಬಗಳಿಗೆ ಸಂಬಂಧಿಸಿದಂತೆ ಮುಂಜಾಗ್ರತಾ ಕ್ರಮವಾಗಿ ವಿವಿಧ ಜಾತ್ರೆಗಳು, ಮೇಳಗಳಲ್ಲಿ ಗುಂಪು ಸೇರದಂತೆ, ಸಾರ್ವಜನಿಕ ಸ್ಥಳಗಳು, ಮೈದಾನಗಳು, ಉದ್ಯಾನವನಗಳು, ಮಾರುಕಟ್ಟೆ, ಧಾರ್ಮಿಕ ಪ್ರದೇಶ ಇತ್ಯಾದಿ ಸ್ಥಳಗಳಲ್ಲಿ ಸಾರ್ವಜನಿಕ...

ಪ್ರಮುಖ ಸುದ್ದಿ

ಬೆಂಗಳೂರು: ಕಳೆದ ಬಾರಿ ಖಾಸಗಿ ಆಸ್ಪತ್ರೆಗಳಲ್ಲಿ 50% ರಷ್ಟು ಹಾಸಿಗೆ ಕೋವಿಡ್ ಗೆ ಮೀಸಲಿಡಲಾಗಿತ್ತು. ಇದೇ ರೀತಿ ಈಗ ಹಾಸಿಗೆ ಮೀಸಲಿಡಬೇಕು ಎಂದು ಖಾಸಗಿ ಆಸ್ಪತ್ರೆಗಳಿಗೆ ಸೂಚಿಸಲಾಗಿದೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ....

ಪ್ರಮುಖ ಸುದ್ದಿ

ಯುಗಾದಿ ಭಾರತೀಯರ ಪಾಲಿನ ಹೊಸ ವರುಷ. ದೂರು ದೂರುಗಳಲ್ಲಿ ನೆಲೆಸಿದ್ದರು, ಹಬ್ಬಗಳಿಗೆ ತನ್ನ ತವರಿಗೆ ಬರ್ತಾರೆ. ಸಿಹಿ ಮಾಡಿ ಬೇವು ಬೆಲ್ಲವನ್ನಂಚಿ ಜೀವನದ ಸಾರ ಸಾರುತ್ತಾರೆ. ಹೀಗೆ ಆ ಕುಟುಂಬ ಕೂಡ ಹಬ್ಬದ...

ಪ್ರಮುಖ ಸುದ್ದಿ

ಬೆಂಗಳೂರು: ಕೊರೊನಾ ಸೋಂಕು ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಇಂದು ಬಂದ ನಂಬರ್ಸ್ ನಾಳೆಗೆ ಮತ್ತಷ್ಟು ಏರಿಕೆಯಾಗುತ್ತಿದೆ. ಸೋಂಕಿತರ ಸಂಖ್ಯೆ ನೋಡುತ್ತಿದ್ರೆ ತಲೆ ಗಿರ್ ಎನ್ನುತ್ತಿದೆ. ಇಂದು ಒಂದೇ ದಿನ 10,250 ಮಂದಿಗೆ...

ಪ್ರಮುಖ ಸುದ್ದಿ

ದಾವಣಗೆರೆ: ಜಿಲ್ಲೆಯಲ್ಲಿಂದು ಕರೋನಾರ್ಭಟ ಮುಂದುವರೆದಿದ್ದು 50 ಮಂದಿಗೆ ಸೋಂಕು ತಗುಲುವ ಮೂಲಕ ಸಕ್ರಿಯ ಸೋಂಕಿತರ ಸಂಖ್ಯೆ 254 ಕ್ಕೆ ತಲುಪಿದೆ. ಗುಣಮುಖರಾಗಿ ಇಂದು 26 ಜನರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಯಾವುದೇ ಸಾವು...

ಪ್ರಮುಖ ಸುದ್ದಿ

ಚಿತ್ರದುರ್ಗ : ಜಿಲ್ಲೆಯಲ್ಲಿ ಕೋವಿಡ್-19 ವೈರಸ್‍ಗೆ ಸಂಬಂಧಿಸಿದ ಸಕ್ರಿಯ ಪ್ರಕರಣಗಳ ಸಂಖ್ಯೆ ಇನ್ನೂರರ ಗಡಿ ಸನಿಹದಲ್ಲಿದೆ. ಭಾನುವಾರದ ವರದಿಯಲ್ಲಿ 45 ಜನರಿಗೆ ಸೋಂಕು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 15,485 ಕ್ಕೆ...

ಪ್ರಮುಖ ಸುದ್ದಿ

ದಾವಣಗೆರೆ: ಮುಷ್ಕರದ ಮುಂದಾಳತ್ವ ವಹಿಸಿದ ದಾವಣಗೆರೆಯ ೧೭ ಸಾರಿಗೆ ನೌಕರರಿಗೆ ಮುಷ್ಕರ ವಾಪಸ್ಸು ಪಡೆಯುವಂತೆ ಸರ್ಕಾರ ವರ್ಗಾವಣೆ ವರ್ಗಾವಣೆ ಅಸ್ತ್ರ ಉಪಯೋಗಿಸಿದೆ! ಪ್ರತಿಭಟನೆಯನ್ನು ಧಮನ ಮಾಡುವ ಉದ್ದೇಶದಿಂದ ಬಸ್ ನಿಲ್ದಾಣದಲ್ಲಿ ೧೪೪ ಸೆಕ್ಷನ್...

error: Content is protected !!