ದಲಿತರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು : ಧರ್ಮಸೇನಾ

suddionenews
1 Min Read

ಬೆಂಗಳೂರು: ಛಲವಾದಿ ನಾರಾಯಣಸ್ವಾಮಿ ವಿರುದ್ಧ ಮಾಜಿ ಎಂಎಲ್ ಸಿ ಧರ್ಮಸೇನಾ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ನಾಯಕರ‌ ಮೇಲೆ ಇಲ್ಲ ಸಲ್ಲದ ಹೇಳಿಕೆ ಕೊಡುತ್ತಾರೆ. ದಲಿತರನ್ನ ಧಿಕ್ಕು ತಪ್ಪಿಸುತ್ತಿದ್ದಾರೆ. ನಾಯಕರಾದವರು ಧಿಕ್ಕುತಪ್ಪಿಸುವ ಕೆಲಸ ಮಾಡಬಾರದು. ಎಸ್ಸಿಪಿ,ಟಿಎಸ್ಪಿ ಹಣವನ್ನ ಇನ್ನೂ ಕೊಟ್ಟಿಲ್ಲ ಎಂದಿದ್ದಾರೆ.

ನಾವು ದಲಿತ ವರ್ಗದಲ್ಲಿ ಹುಟ್ಟಿದವರು. ನಿಮಗೆ ಮಂತ್ರಿ ಸ್ಥಾನವನ್ನ ಕೊಟ್ಟಿಲ್ಲ. ನಿಮ್ಮ ಸಮುದಾಯಕ್ಕೆ ಮಂತ್ರಿ ಸ್ಥಾನ ಕೊಡಿಸಿಲ್ಲ. ಅದನ್ನ ನೀವು ಕೊಡಿಸುವ ಕೆಲಸ ಮಾಡಿ. ಛಲವಾದಿ ನಾರಾಯಣಸ್ವಾಮಿ ವಿರುದ್ಧ ಧರ್ಮಸೇನಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೀವು ಅಂಡರ್ ವೇರ್ ಹೊತ್ತು ತರೋದು ಸರಿಯಲ್ಲ. ನಾವು ೧೧೦ ಕೋಟಿ ಜನ ರಾಜ್ಯದಲ್ಲಿದ್ದೇವೆ. ನಮ್ಮ ಅಷ್ಟೂ ಜನರಿಗೆ ನಿಮ್ಮಿಂದ ನೋವಾಗಿದೆ. ನಿಮ್ಮಿಂದ ನಮಗೆ ೨ ರೀತಿಯಲ್ಲಿ‌ ನೋವಾಗಿದೆ. ಹಿರಿಯರ ಬಗ್ಗೆ ಗೌರವ ಕೊಡುವುದನ್ನ ಕಲಿಯಿರಿ. ನಿಮ್ಮ ಹೇಳಿಕೆಗಳನ್ನ ನಿಲ್ಲಿಸಿ. ಇರುವಷ್ಟು ದಿನ ದಲಿತರ ಪರ ಕೆಲಸ ಮಾಡಿಸಿ. ನಿಮಗೆ ಇರೋದೇ ಐದಾರು ತಿಂಗಳ ಸಮಯ ಮಾತ್ರ

ಶಾಸಕರಾಗಿ ಅನುಭವ ಕಲಿಯೋಕೆ ೫ ವರ್ಷ ಬೇಕು. ನಿಮ್ಮಿಂದ ಕೆಲಸ ಮಾಡಿಸೋಕೂ‌ ಆಗಲ್ಲ. ಹಾಗಾಗಿ ಇನ್ಮುಂದೆ ಇಂತಹ ಹೇಳಿಕೆಗಳನ್ನ ಕೈಬಿಡಿ ಎಂದು ಛಲವಾದಿ ನಾರಾಯಣಸ್ವಾಮಿ ವಿರುದ್ಧ ಕೆಪಿಸಿಸಿ ಎಸ್ಸಿ ಘಟಕದ ಅಧ್ಯಕ್ಷ ಧರ್ಮಸೇನಾ ಲೇವಡಿ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *