ಹಿರಿಯೂರು : ತಂಗಿಯ ಸ್ನೇಹಿತೆಗೆ ಚಾಕಲೇಟ್, ಬಿಸ್ಕೇಟ್ ಕೊಡಿಸಿ, ಅನ್ಯಕೋಮಿನ ಯುವಕ ದಲಿತ ಬಾಲಕಿ ಮೇಲೆ ನಿರಂತರ ಅತ್ಯಾಚಾರ ಎಸಗಿರುವ ಘಟನೆ ಹಿರಿಯೂರಿನಲ್ಲಿ ನಡೆದಿದೆ. ಈ ಸಂಬಂಧ ಅನ್ಯಕೋಮಿನ ಯುವಕನ ವಿರುದ್ಧ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರು ನೀಡಿದ ಸಂತ್ರಸ್ತೆ 6ನೇ ತರಗತಿಗೆ ವಿದ್ಯಾಬ್ಯಾಸ ಮಾಡಲು ಹಿರಿಯೂರು ತಾಲೂಕಿನಲ್ಲಿರುವ ದೊಡ್ಡಮ್ಮ ಮನೆಗೆ ಬಂದಿರುತ್ತಾಳೆ. ಈ ವೇಳೆ ವಿದ್ಯಾರ್ಥಿನಿಯ ಸಹಪಾಠಿಯ ಅಣ್ಣನ ಪರಿಚಯವಾಗಿರುತ್ತದೆ. ಸಹಪಾಠಿಯ ಅಣ್ಣನು ವಿದ್ಯಾರ್ಥಿನಿಗೆ ಚಾಕಲೇಟ್, ಬಿಸ್ಕತ್ತು ಕೊಡಿಸುವ ನೆಪದಲ್ಲಿ ವಿದ್ಯಾರ್ಥಿನಿಯ ಖಾಸಗಿ ಅಂಗಾಂಗಗಳನ್ನು ಮುಟ್ಟುತ್ತಿದ್ದನಂತೆ. ಜೊತೆಗೆ ಎಸ್ಎಸ್ಎಲ್ಸಿ ಓದುವಾಗ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ಬಂದು, ಬೇಡವೆಂದರೂ ಪಿಲಾಲಿ ಗ್ರಾಮದ ಆರೋಪಿ ಬಲವಂತವಾಗಿ ಹಲವು ಬಾರಿ ಸಂಭೋಗ ಮಾಡಿದ್ದನಂತೆ. ಅಲ್ಲದೆ ಆರೋಪಿ ವಿದ್ಯಾರ್ಥಿನಿ ಮೊಬೈಲ್ ಗೆ ಪ್ರತಿನಿತ್ಯ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದನಂತೆ.
ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಜೀವ ತೆಗೆಯುವುದಾಗಿ ಬೆದರಿಕೆಯೊಡ್ಡಿದ್ದನಂತೆ. ಆರೋಪಿ ಎಸಗಿರುವ ದೌರ್ಜನ್ಯದ ಬಗ್ಗೆ ತಾಯಿಗೆ ವಿದ್ಯಾರ್ಥಿನಿ ತಿಳಿಸಿದ್ದಾಳೆ.
ವಿದ್ಯಾರ್ಥಿನಿಯ ಪೋಷಕರು ಮತ್ತು ಸಂಬಂಧಿಕರು ಆರೋಪಿ ಮನೆ ಬಳಿ ನ್ಯಾಯ ಕೇಳಲು ಹೋಗಿದ್ದರಂತೆ. ಆಗ ಆರೋಪಿಯ ತಂದೆ ತಾಯಿ ಅವರು ಆವಾಚ್ಯ ಶಬ್ದಗಳಿಂದ ನಿಂದಿಸಿ ಬೈದರಂತೆ. ಅಲ್ಲದೆ ಆರೋಪಿ ತಂದೆ ಹೇ ಸೂ….. ಎಂದು ನೀನು ನನ್ನ ಮಗನ ಜೊತೆ ಮಲಗಿರುವುದು ಸತ್ಯ, ಅದಕ್ಕೆ ಏನು ಕೊಡಬೇಕು ಹೇಳು ಕೊಡುತ್ತೆವೆ ಇಲ್ಲಿಂದ ಹೊರಟು ಹೋಗಿ ಎಂದು ನಿಮ್ಮನ್ನಾ ಸುಮ್ನೆ ಬಿಡುವುದಿಲ್ಲ ಎಂದು ಆರೋಪಿಯ ಪೋಷಕರು ವಿದ್ಯಾರ್ಥಿ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾರೆ.
ಈ ವಿಚಾರವಾಗಿ ಗ್ರಾಮಸ್ಥರು ಮಾತನಾಡೋಣ ಎಂದು ಹೇಳಿದರಂತೆ. ಆದರೆ ಇದುವರೆಗೂ ಯಾವುದೇ ಮಾತುಕತೆಗೆ ಬಾರದ ಹಿನ್ನೆಲೆಯಲ್ಲಿ ತಡವಾಗಿ ಬಂದು ಹಿರಿಯೂರು ಗ್ರಾಮಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇನೆಂದು ವಿದ್ಯಾರ್ಥಿನಿ ದೂರಿನಲ್ಲಿ ತಿಳಿಸಿದ್ದಾರೆ.
ಬೆಂಗಳೂರು: ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿದೆ. ಇದರಿಂದ ಅದೆಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸಾಲ ಕೊಟ್ಟ…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಕಡಲೆ, ಮೆಕ್ಕೆಜೋಳ ಸೇರಿದಂತೆ ಇತರೆ…
ಬೆಂಗಳೂರು: ನಟ ಡಾಲಿ ಧನಂಜಯ್ ಮದುವೆ ಸಂಭ್ರಮದಲ್ಲಿದ್ದಾರೆ. ಚಿತ್ರದುರ್ಗದ ಅಳಿಯ ಬೇರೆ ಆಗ್ತಾ ಇದ್ದಾರೆ. ಧನ್ಯತಾ ಮೂಲತಃ ಚಿತ್ರದುರ್ಗದವರು. ಆದರೆ…
ಬೆಂಗಳೂರು: ಇಂದು ಹೈಕೋರ್ಟ್ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದು ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ನೀಡಿದೆ. ಈ…
ಈ ರಾಶಿಯವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಒದಗಿ ಬರಲಿವೆ, ಈ ರಾಶಿಯವರಿಗೆ ಉತ್ತಮ ಸಂಗಾತಿ ಸಿಗುವರು, ಶುಕ್ರವಾರದ ರಾಶಿ ಭವಿಷ್ಯ…
144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದರೆ ಕರ್ಮ ಕಳೆಯುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಕೋಟ್ಯಾಂತರ ಮಂದಿ…