Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ವಿಶ್ವಕಪ್ ಸೋಲಿನ ಬಳಿಕ ಪಾಂಡ್ಯ ವಾಪಾಸ್ : ವಿಮಾನ ನಿಲ್ದಾಣದಲ್ಲೇ 5 ಕೋಟಿ ಮೌಲ್ಯದ ವಾಚ್ ವಶಕ್ಕೆ..!

Facebook
Twitter
Telegram
WhatsApp

ನವದೆಹಲಿ: ವಿಶ್ವಕಪ್ ನಿಂದ ಟೀಂ ಇಂಡಿಯಾ ವಾಪಾಸ್ ಆಗಿದೆ. ಸೋಲಿನ ಬಳಿಕ ಎಲ್ಲಾ ನಾಯಕರು ವಾಪಾಸ್ ಭಾರತಕ್ಕೆ ಬಂದಿಳಿದಿದ್ದಾರೆ. ಈ ವೇಳೆ ಹಾರ್ದೀಕ್ ಪಾಂಡ್ಯಾಗೆ ವಿಮಾನ ನಿಲ್ದಾಣದಲ್ಲೇ ಒಂದಷ್ಟು ಸಂಕಷ್ಟ ಎದುರಾಗಿದೆ. ಕಸ್ಟಮ್ಸ್ ಅಧಿಕಾರಿಗಳು ಅವರ ಬಳಿ ಇದ್ದ 5 ಕೋಟಿ ಮೌಲ್ಯದ ವಾಚ್ ಗಳನ್ನ ವಶಕ್ಕೆ ಪಡೆದಿದ್ದಾರೆ.

ಹಾರ್ದಿಕ್ ಪಾಂಡ್ಯ ಕಾಸ್ಟ್ಲೀ ವಾಚ್ ಗಳನ್ನ ತೆಗೆದುಕೊಂಡು ಬರುತ್ತಿದ್ದರು. ಆದ್ರೆ ಆ ವಾಚ್ ಗಳನ್ನ ಲಗೇಜ್ ನಲ್ಲಿ ಇಟ್ಟುಕೊಂಡಿದ್ದರು ಎನ್ನಲಾಗಿದೆ. ಜೊತೆಗೆ ಆ ವಾಚ್ ಗಳಿಗೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳಿರಲಿಲ್ಲ. ಹೀಗಾಗಿ ಆ ವಾಚ್ ಗಳನ್ನ ಕಸ್ಟಮ್ ಅಧಿಕಾರಿಗಳಿಗಳು ಆ ವಾಚ್ ಗಳನ್ನ ಜಪ್ತಿ ಮಾಡಿದ್ದಾರೆ.

ಭಾನುವಾರ ದೇಶಕ್ಕೆ ವಾಪಾಸ್ ಆಗುವ ವೇಳೆ ಏರ್ಪೋರ್ಟ್ ನಲ್ಲಿ ಕಸ್ಟಮ್ ಅಧಿಕಾರಿಗಳು ಹಾರ್ದಿಕ್ ಪಾಂಡ್ಯ ಅವರನ್ನು ತಪಾಸಣೆ ಮಾಡಿದ್ದಾರೆ ಈ ವೇಳೆ ಅವರ ಬಳಿ ವಾಚ್ ಗಳು ಇದ್ದದ್ದು ಪತ್ತೆಯಾಗಿದೆ. ಈ ಹಿಂದೆ ಇವರ ಸಹೋದರನ ಬಳಿಯೂ ಅಧಿಕಾರಿಗಳು ವಾಚ್ ಗಳನ್ನ ವಶಕ್ಕೆ ಪಡೆದಿದ್ದರು. ದುಬೈನಲ್ಲಿ ಐಪಿಎಲ್ ಪಂದ್ಯವಾಡಿ ವಾಪಾಸ್ಸಾಗುತ್ತಿದ್ದಾಗ ಕೃನಾಲ್ ಪಾಂಡ್ಯಾರನ್ನ ವಶಕ್ಕೆ ಪಡೆದು ಅವರ ಬಳಿಯಿದ್ದ ವಾಚ್ ಗಳನ್ನ ವಶಕ್ಕೆ ಪಡೆಯಲಾಗಿತ್ತು. ಆ ವಾಚ್ ಗಳು ಕೂಡ ತುಂಬಾ ದುಬಾರಿ ಬೆಲೆಯದ್ದಾಗಿದ್ದವು.

Facebook
Twitter
Telegram
WhatsApp
suddionenews

suddionenews

Leave a Comment

Top Stories

Summer Migraine: ಬಿಸಿಲಿಗೆ ಹೋದಾಗ ಈ ನಿಯಮಗಳನ್ನು ಪಾಲಿಸಿ : ಮೈಗ್ರೇನ್‌ ನಿಂದ ದೂರವಿರಿ….!

ಸುದ್ದಿಒನ್ : ಈ ಬೇಸಿಗೆಯಲ್ಲಿ ಬಿಸಿಲು ಜೋರಾಗಿದೆ. ತಾಪಮಾನವು 37 ರಿಂದ 40 ಡಿಗ್ರಿ  ಆಸುಪಾಸಿನಲ್ಲಿದೆ. ವಿಪರೀತ ಬಿಸಿಲಿನಿಂದ ಮಕ್ಕಳಿಂದ ವೃದ್ಧರವರೆಗೆ ಬಹುತೇಕ ಎಲ್ಲರೂ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಆದರೆ ಮೈಗ್ರೇನ್ ಪೀಡಿತರು ಸ್ವಲ್ಪ ಹೆಚ್ಚು

ಈ ರಾಶಿಯ ತಂದೆ ತಾಯಿಗೆ ಮಗಳ ಕುಟುಂಬದಲ್ಲಿ ತುಂಬ ಸಮಸ್ಯೆ ಇದೆ

ಈ ರಾಶಿಯ ತಂದೆ ತಾಯಿಗೆ ಮಗಳ ಕುಟುಂಬದಲ್ಲಿ ತುಂಬ ಸಮಸ್ಯೆ ಇದೆ, ಈ ರಾಶಿಯವರ ಉದ್ಯೋಗದಲ್ಲಿ ತುಂಬಾ ಸಮಸ್ಯೆ ಅದರ ಜೊತೆ ಹಣಕಾಸಿನ ಸಮಸ್ಯೆ ಕಾಡಲಿದೆ, ಬುಧವಾರ ರಾಶಿ ಭವಿಷ್ಯ -ಏಪ್ರಿಲ್-24,2024 ಸೂರ್ಯೋದಯ: 05:57,

ಬಿ ಎನ್ ಚಂದ್ರಪ್ಪ ಪರ ಮತಯಾಚನೆ ಮಾಡಿ, ಮೋದಿ, ಅಮಿತ್ ಶಾ ವಿರುದ್ಧ ಗುಡುಗಿದ ಸಿದ್ದರಾಮಯ್ಯ

ಚಿತ್ರದುರ್ಗ: ಈ ತಿಂಗಳ 26 ಕ್ಕೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಅಭ್ಯರ್ಥಿ ಬಿಎನ್ ಚಂದ್ರಪ್ಪ ರನ್ನ ಹೆಚ್ಚು ಮತಗಳಿಂದ ಗೆಲ್ಲಿಸಿಕೊಡಬೇಕು ಎಂದು ಮನವಿ ಮಾಡ್ತೀನಿ. ಕಳೆದ 10 ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿದೆ ಮೋದಿಯವರು ಪ್ರಧಾನಿಯಾಗಿದ್ದಾರೆ.

error: Content is protected !!