Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮಕ್ಕಳಲ್ಲಿ ಧನಾತ್ಮಕ ಚಿಂತನೆ ಬೆಳೆಸಲು ಪುಸ್ತಕ ಓದುವ ಹವ್ಯಾಸ ರೂಢಿಸಿ : ದಿವ್ಯಪ್ರಭು ಜಿ.ಆರ್.ಜೆ.

Facebook
Twitter
Telegram
WhatsApp

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

 

ಚಿತ್ರದುರ್ಗ,(ಫೆ.17) :   ಇಂದಿನ ಮಕ್ಕಳಲ್ಲಿ ಧನಾತ್ಮಕ ಚಿಂತನೆಗಳನ್ನು ಬೆಳೆಸಲು, ಅವರು ಪುಸ್ತಕಗಳನ್ನು ಓದುವಂತಹ ಹವ್ಯಾಸ ರೂಢಿಸುವುದು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಆಯ-ವ್ಯಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಕೆಎಮ್‍ಇಆರ್‍ಸಿ ಅನುದಾನದಲ್ಲಿ ಚಿತ್ರದುರ್ಗ ಜಿಲ್ಲಾ, ನಗರ ಗ್ರಂಥಾಲಯಗಳ ವಿಸ್ತರಣೆ ಹಾಗೂ ಮೂಲಭೂತ ಸೌಕರ್ಯಗಳ ಅನುಷ್ಠಾನಕ್ಕೆ 8. 22 ಕೋಟಿ ರೂ. ಗಳಿಗೆ ಗ್ರಂಥಾಲಯ ಇಲಾಖೆ ಪ್ರಸ್ತಾವನೆ ಸಿದ್ಧಪಡಿಸಿ ಸಲ್ಲಿಸಿದ್ದು, ಹೆಚ್ಚಿನ ಜನರು, ಮಕ್ಕಳು ಗ್ರಂಥಾಲಯಗಳಿಗೆ ಸ್ವಯಂ ಪ್ರೇರಿತವಾಗಿ ಬರುವಂತಾಗಬೇಕು, ಮಕ್ಕಳು ಗ್ರಂಥಾಲಯಗಳತ್ತ ಆಕರ್ಷಿತರಾಗಬೇಕು ಈ ದಿಸೆಯಲ್ಲಿ ಪ್ರಸ್ತಾವನೆಯಲ್ಲಿ ಬದಲಾವಣೆ ಅಗತ್ಯವಿದ್ದರೆ, ಮಾಡಿಕೊಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಇಂದಿನ ಯುವಪೀಳಿಗೆ ಮೊಬೈಲ್ ಅನ್ನೇ ತಮ್ಮ ಲೋಕವಾಗಿಸಿಕೊಂಡು, ಓದುವ ಹಾಗೂ ಬರೆಯುವ ಹವ್ಯಾಸ ಮರೆಯುತ್ತಿದ್ದಾರೆ, ಇತ್ತೀಚೆಗೆ ಮೊಬೈಲ್‍ನಲ್ಲಿ ಮಾತನಾಡುವುದನ್ನೂ ಕೂಡ ಕಡಿಮೆಯಾಗಿಸಿ, ಇತರೆ ಚಟುವಟಿಕೆಗಳಿಗೆ ಮೊಬೈಲ್‍ಗಳ ಬಳಕೆ ಹೆಚ್ಚಾಗುತ್ತಿದೆ.  ಇದರ ಜೊತೆಗೆ ಕುಟುಂಬ ಸಂಬಂಧಗಳನ್ನು ಕೂಡ ನಿರ್ಲಕ್ಷಿಸುತ್ತಿದ್ದಾರೆ. ಇದು ಮಕ್ಕಳಲ್ಲಿ ಧನಾತ್ಮಕತೆಗಿಂತಲೂ ನಕಾರಾತ್ಮಕ ಚಿಂತನೆಗಳಿಗೇ ಹೆಚ್ಚು ಅವಕಾಶವಾಗುತ್ತಿದೆ.

ದೇಶದ ಆರೋಗ್ಯಪೂರ್ಣ ಭವಿಷ್ಯದ ದೃಷ್ಟಿಯಿಂದ ಇದು ಒಳ್ಳೆಯ ಬೆಳೆವಣಿಗೆಯಲ್ಲ.  ಹೀಗಾಗಿ ಇಂತಹ ಯುವಪೀಳಿಗೆಯಲ್ಲಿ ಸಾಮಾಜಿಕ ಬದಲಾವಣೆ ಹಾಗೂ ಸೃಜನಾತ್ಮಕ ಹವ್ಯಾಸಗಳನ್ನು ಪುನರಾರಂಭಿಸಲು, ಅವರನ್ನು ಪುಸ್ತಕಗಳತ್ತ ಆಕರ್ಷಿಸಬೇಕಿದೆ.  ಒಮ್ಮೆ ಮಕ್ಕಳು ಪುಸ್ತಕಗಳ ಓದಿನತ್ತ ಆಕರ್ಷಿತರಾದರೆ, ಅವರನ್ನು ತಡೆಯಲು ಸಾಧ್ಯವಿಲ್ಲ.  ಊರಿನಲ್ಲಿ ಉತ್ತಮ ಗ್ರಂಥಾಲಯ ಇದ್ದ ಕಾರಣ, ಬಿಡುವಿನ ವೇಳೆ ಹೆಚ್ಚು ಕಾಲ ಗ್ರಂಥಾಲಯದಲ್ಲೇ ಕಾಲ ಕಳೆಯುತ್ತಿದ್ದೆ, ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಲು ಅವಕಾಶ ದೊರೆತಿದ್ದರಿಂದಲೇ ನಾನು ಐಎಎಸ್ ಉತ್ತೀರ್ಣರಾಗಿ, ಉನ್ನತ ಸ್ಥಾನಕ್ಕೆ ಬರಲು ಸಾಧ್ಯವಾಯಿತು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ತಮ್ಮ ಓದಿನ ದಿನಗಳನ್ನು ನೆನಪಿಸಿಕೊಂಡರು.

ಈ ದಿಸೆಯಲ್ಲಿ ಗ್ರಂಥಾಲಯಗಳನ್ನು ಆಕರ್ಷಣೀಯವಾಗಿಸಿ, ಅವರನ್ನು ಪುಸ್ತಕಗಳು, ಪತ್ರಿಕೆಗಳ ಓದುವಿಕೆಗೆ ಪ್ರಚೋದನೆ ಹಾಗೂ ಪ್ರೇರಣೆ ನೀಡಬೇಕಿದೆ.  ಗ್ರಂಥಾಲಯಗಳಲ್ಲಿ ಕೇವಲ ಪುಸ್ತಕ, ಪತ್ರಿಕೆಗಳನ್ನು ಇರಿಸಿ ಮಕ್ಕಳನ್ನು ಆಕರ್ಷಿಸಲು ಸಾಧ್ಯವಿಲ್ಲ.  ಹೀಗಾಗಿ ಗ್ರಂಥಾಲಯಗಳಲ್ಲಿ ಕೇರಂ, ಚೆಸ್ ನಂತಹ ಸೃಜನಶೀಲ ಆಟಗಳ ಕಲಿಕೆಗೆ ಗೇಮ್ ಪಾರ್ಕ್, ಬಯಲಿನಲ್ಲಿಯೇ ತಮಗಿಷ್ಟವಾದ ಪುಸ್ತಕಗಳನ್ನು ಇಷ್ಟಪಟ್ಟು ಓದುವ ರೀತಿ ವಾತಾವರಣ ಸೃಷ್ಟಿಸಬೇಕಿದೆ.

ಮಕ್ಕಳಲ್ಲಿ ಆಳ ಅಧ್ಯಯನದ ಸಂಸ್ಕøತಿಯನ್ನು ನಾವು ಬೆಳೆಸಬೇಕು, ಅಂತಹದೇ ವಾತಾವರಣವನ್ನು ಪಾಲಕರು ಮನೆಗಳಲ್ಲಿಯೂ ಸೃಷ್ಟಿಸಬೇಕು, ಅದನ್ನು ಬಿಟ್ಟು ಪಾಲಕರೇ ಟಿ.ವಿ., ಮೊಬೈಲ್‍ನಲ್ಲಿ ಸಕ್ರಿಯರಾದರೆ, ಮಕ್ಕಳು ಕೂಡ ಅದನ್ನೇ ಅನುಸರಿಸುತ್ತಾರೆ.  ಶಾಲೆಗಳಲ್ಲಿ ಪ್ರತಿ ವಾರಕ್ಕೊಮ್ಮೆ ಒಂದು ಗಂಟೆ ಮಕ್ಕಳನ್ನು ಗ್ರಂಥಾಲಯಕ್ಕೆ ಕರೆದುಕೊಂಡು ಹೋಗಿ, ಅಲ್ಲಿನ ಪುಸ್ತಕಗಳ ಪರಿಚಯ ಮಾಡಿಸಿ, ಅವರನ್ನು ಓದಲು ಪ್ರೇರಣೆ ನೀಡುವಂತಾಗಬೇಕು.  ಈ ಬಗ್ಗೆ ಸುತ್ತೋಲೆ ಹೊರಡಿಸಿ, ಶಿಕ್ಷಕರಿಗೆ ಸೂಚನೆ ನೀಡುವಂತೆ ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಡಿಡಿಪಿಐ ರವಿಶಂಕರರೆಡ್ಡಿ ಅವರಿಗೆ ತಿಳಿಸಿದರು.

ಗ್ರಂಥಾಲಯ ಸೆಸ್ ಬಾಕಿ : ಮುಖ್ಯ ಗ್ರಂಥಾಲಯ ಅಧಿಕಾರಿ ತಿಪ್ಪೇಸ್ವಾಮಿ ಅವರು ಮಾತನಾಡಿ, ಜಿಲ್ಲೆಯ ವಿವಿಧ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಗಳಿಂದ 2022 ರ ಏಪ್ರಿಲ್‍ನಿಂದ 2023 ರ ಜನವರಿ ಅಂತ್ಯದವರೆಗೆ ಒಟ್ಟಾರೆ 47.60 ಲಕ್ಷ ರೂ. ಗ್ರಂಥಾಲಯ ಕರ ವಸೂಲಾತಿ ಆಗಿದೆ.  ಈ ಪೈಕಿ ಹೊಸದುರ್ಗ ಪುರಸಭೆಯಿಂದ ಅತಿ ಹೆಚ್ಚು 6.66 ಲಕ್ಷ ರೂ. ಪಾವತಿಯಾಗಿದೆ.  ನಾಯಕನಹಟ್ಟಿ ಪಟ್ಟಣ ಪಂಚಾಯತಿಯಿಂದ ಕೇವಲ 93405 ರೂ. ಮಾತ್ರ ಗ್ರಂಥಾಲಯ ಕರ ವಸೂಲಾತಿಯಾಗಿದೆ.  ಉಳಿದಂತೆ 09 ಗ್ರಾಮ ಪಂಚಾಯತಿಗಳಿಂದ ಬಾಕಿ 2.09 ಲಕ್ಷ ರೂ. ಪಾವತಿಯಾಗಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಗ್ರಂಥಾಲಯ ಕರ ಪಾವತಿ ಮಾಡುವುದು ಬಾಕಿ ಇರುವಂತಹ ನಗರ, ಸ್ಥಳೀಯ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಬೇಕು, ಹಾಗೂ ತ್ವರಿತವಾಗಿ ಪಾವತಿಸಲು ಸೂಚನೆ ನೀಡಬೇಕು ಎಂದು ಸೂಚನೆ ನೀಡಿದರು.

ಬಸ್‍ನಿಲ್ದಾಣಗಳಲ್ಲಿ ಗ್ರಂಥಾಲಯ : ಜಿಲ್ಲೆಯಲ್ಲಿ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಗಳು, ಸರ್ಕಾರಿ ಆಸ್ಪತ್ರೆಗಳು, ಜಿಲ್ಲಾಧಿಕಾರಿಗಳ ಕಚೇರಿ, ತಹಸಿಲ್ದಾರರ ಕಚೇರಿ ಸೇರಿದಂತೆ ಜನರು ಹೆಚ್ಚಾಗಿ ಸೇರುವಂತಹ ಸ್ಥಳಗಳು ಹಾಗೂ ತಮ್ಮ ಕಾರ್ಯಗಳಿಗಾಗಿ ಕೆಲ ಕಾಲ ಕಾಯುವಂತಹ ಸ್ಥಳಗಳನ್ನು ಗುರುತಿಸಿ, ಅಲ್ಲಿ ಒಂದಷ್ಟು ಪುಸ್ತಕಗಳು, ನಿಯತಕಾಲಿಕೆಗಳನ್ನು ಇರಿಸಲು ಸೂಕ್ತ ವ್ಯವಸ್ಥೆ ಮಾಡಬೇಕು,  ಸಾರ್ವಜನಿಕರು ಕುಳಿತು ಅಥವಾ ನಿಂತು ಓದುವಂತಹ ವಾತಾವರಣ ಕಲ್ಪಿಸಬೇಕು.
ಈ ಕಾರ್ಯದಿಂದ ಕೆಲವರಲ್ಲಾದರೂ ಪುಸ್ತಕ ಓದುವ ಹವ್ಯಾಸ ಬೆಳೆಯಲಿ ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ವಿದ್ಯಾರ್ಥಿಗಳ ಅಭಿಪ್ರಾಯ ಪಡೆಯಿರಿ : ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಕುರಿತು ವಿವಿಧ ಬಗೆಯ ಪುಸ್ತಕಗಳನ್ನು ಗ್ರಂಥಾಲಯಗಳಿಗಾಗಿ ಖರೀದಿಸಲಾಗುತ್ತಿದೆ.  ಐಎಎಸ್, ಐಪಿಎಸ್, ಕೆಎಎಸ್, ಬ್ಯಾಂಕಿಂಗ್, ಪೊಲೀಸ್, ರೈಲ್ವೆ ಮುಂತಾದ ಹುದ್ದೆಗಳಿಗೆ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತಾರೆ.  ಅವರಿಗೆ ಎಂತಹ ಪುಸ್ತಕಗಳು ಬೇಕಾಗುತ್ತದೆ ಎಂಬುದನ್ನು ಹಾಸ್ಟೆಲ್ ಮಕ್ಕಳು, ಉನ್ನತ ವ್ಯಾಸಂಗ ಮಾಡುವಂತಹ ಮಕ್ಕಳಿಂದ ಅಭಿಪ್ರಾಯ ಪಡೆಯಬೇಕು,  ಸಾಧ್ಯವಾದಲ್ಲಿ ಕೋಚಿಂಗ್ ಸೆಂಟರ್‍ಗಳಿಗೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳಿಂದಲೂ ಅಭಿಪ್ರಾಯ ಸಂಗ್ರಹಿಸಿ, ಹೆಚ್ಚು ಬೇಡಿಕೆ ಬರುವಂತಹ, ಹೆಚ್ಚು ಉಪಯುಕ್ತವೆನಿಸುವಂತಹ ಪುಸ್ತಕಗಳನ್ನು ಖರೀದಿಸಿ, ಗ್ರಂಥಾಲಯಗಳಲ್ಲಿ ಇರಿಸಿದರೆ, ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ.  ಇದರಿಂದ ಜಿಲ್ಲೆಯ ಹೆಚ್ಚು ಹೆಚ್ಚು ಅಭ್ಯರ್ಥಿಗಳು ಐಎಎಸ್, ಐಪಿಎಸ್ ಮುಂತಾದ ಉನ್ನತ ಹುದ್ದೆಗಳಿಗೆ ಆಯ್ಕೆಯಾಗುವಂತಾಗಲಿ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಸಭೆಯಲ್ಲಿ ಮುಖ್ಯ ಗ್ರಂಥಾಲಯಾಧಿಕಾರಿ ತಿಪ್ಪೇಸ್ವಾಮಿ, ಡಿಡಿಪಿಐ ರವಿಶಂಕರರೆಡ್ಡಿ, ಸೇರಿದಂತೆ ಜಿಲ್ಲಾ ಗ್ರಂಥಾಲಯ ಸಮಿತಿಯ ಸದಸ್ಯರುಗಳಾದ ಲೋಕೇಶ್, ಶೈಲಜಾ, ಕೆ. ರಂಗಪ್ಪ, ರೇವಣಸಿದ್ದಪ್ಪ, ತಿಪ್ಪೇಸ್ವಾಮಿ, ಲಿಂಗರಾಜು, ಸುರೇಶ್ ಉಗ್ರಾಣ, ನಾಗರತ್ನ, ಬಸವರಾಜ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯ ದಂಪತಿಗಳಿಗೆ ಸಂತಾನದ ವಿಷಯ ಕೇಳಿ ಹರ್ಷವೋ ಹರ್ಷ!

ಈ ರಾಶಿ ಒಲ್ಲದ ಮನಸಿಗೆ ಮದುವೆ ಯೋಗ, ಈ ರಾಶಿಯ ದಂಪತಿಗಳಿಗೆ ಸಂತಾನದ ವಿಷಯ ಕೇಳಿ ಹರ್ಷವೋ ಹರ್ಷ! ಶುಕ್ರವಾರ- ರಾಶಿ ಭವಿಷ್ಯ ಮಾರ್ಚ್-29,2024 ಸೂರ್ಯೋದಯ: 06:16, ಸೂರ್ಯಾಸ್ತ : 06:25 ಶಾಲಿವಾಹನ ಶಕೆ1944,

ಚಿತ್ರದುರ್ಗ | ಕ್ರೂಸರ್ ವಾಹನ ಪಲ್ಟಿ  ಓರ್ವ ಸಾವು, 13 ಮಂದಿಗೆ ಗಾಯ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಮಾರ್ಚ್. 28 : ತಾಲ್ಲೂಕಿನ ತಳಕು ಪೋಲೀಸ್ ಠಾಣೆ ವ್ಯಾಪ್ತಿಯ ರಾಷ್ಟೀಯ ಹೆದ್ದಾರಿ 150 ಎ

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕ್ವಾರಿ ಅಂಡ್ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್‍ಗೆ ಶಕ್ತಿ ತುಂಬಬೇಕಾಗಿದೆ : ಅಬ್ದುಲ್ ಮಾಜಿದ್

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,    ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 28  : ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಭೆ ನಡೆಸಿ ಹೊಸ ಅಸೋಸಿಯೇಷನ್‍ಗೆ ಶಕ್ತಿ ತುಂಬಬೇಕಾಗಿದೆ

error: Content is protected !!