ಬಿಜೆಪಿ ನಾಯಕಿಯ ಭಾಷಣಕ್ಕೆ ಸಿ ಟಿ ರವಿ ಕೊಟ್ಟ ಸ್ಪಷ್ಟನೆ ಹೀಗಿದೆ…!

suddionenews
1 Min Read

ಬೆಳಗಾವಿ: ಬಿಜೆಪಿ ನಾಯಕಿ ಪ್ರವಾದಿ ಮುಹಮ್ಮದ್ ಗೆ ಅವಮಾನ ಮಾಡಿದ್ದಾರೆ ಎಂಬ ವಿಚಾರ ಬಾರಿ ಸುದ್ದಿಯಾಗಿತ್ತು. ಈ ಸಂಬಂಧ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಿ.ಟಿ.ರವಿ, ಪಕ್ಷದ ಒಳಗೆಯೇ ಗೊಂದಲ ಇದೆ ಎಂಬ ಹೇಳಿಕೆ ಸುಳ್ಳು.

ಹೇಳಿಕೆಗಳಲ್ಲಿ ವ್ಯತ್ಯಾಸವಾದರೆ ತಕ್ಷಣ ಪಕ್ಷ ಏನು ನಿರ್ಧಾರ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಂಡಿದೆ. ಯಾರನ್ನು ಉಚ್ಛಾಟನೆ ಮಾಡಬೇಕೋ ಅವರನ್ನು ಮಾಡಿದೆ. ಪಕ್ಷದ ನೀತಿ ನಿಯಮಗಳನ್ನು ಸಹ ಸ್ಪಷ್ಟವಾಗಿ ಪತ್ರಿಕಾ ಹೇಳಿಕೆಯ ಮೂಲಕ ಕೊಟ್ಟಿದ್ದೇವೆ. ಅಲ್ಲಿಗೆ ಅದು ಮುಗಿದಿದೆ.

ಯಾರೇ ಹೇಳಿಕೆ ಕೊಟ್ಟಿದ್ದರು ಇಂಥ ಹೇಳಿಕೆಗಳನ್ನು ನೀಡಬಾರದು ಎಂಬುದನ್ನು ಹೇಳಿದೆ. ನಾವೂ ಎಲ್ಲಾ ಧರ್ಮಗಳನ್ನು ಗೌರವಿಸುತ್ತೆ. ಒಂದು ಹಿಂದೂ ವಿಚಾರಧಾರೆಗೆ ಬದ್ಧ ಬಿಜೆಪಿ. ಸರ್ವೇ ಜನಾಂಗ ಸುಖಿನೋಭವಾಂತು ಎಂಬ ಕಲ್ಪನೆ ಇರುವಂತ ಹಿಂದೂ ವಿಚಾರಾಧಾರೆಯಡಿ, ಪ್ರತಿಯೊಂದು ಧರ್ಮವನ್ನು ಪ್ರೀತಿಸುವ, ಗೌರವಿಸುವಂತದ್ದು ಈ ದೇಶದಲ್ಲಿದೆ.  ನಮ್ಮ ಪಾರ್ಟಿ ಮತ್ತು ಸರ್ಕಾರ ನಡೆಯುತ್ತದೆ.

ಭಾರತದ ಸಂವಿಧಾನದಡಿಯಲ್ಲಿ ಬರುವಂತದ್ದನ್ನು ಮೀರಿ ಯಾರಾದರೂ ವರ್ತಿಸಿದರೆ, ಅದನ್ನು ಪಾರ್ಟಿ ಸಹಿಸಿಕೊಳ್ಳುವುದಿಲ್ಲ. ಅಂತಹವರ ವಿರುದ್ಧ ಪಾರ್ಟಿ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ. ಪಾರ್ಟಿಯೂ ನಿನ್ನೆ ಒಂದು ಸಂದೇಶ ನೀಡಿದೆ. ಯಾರು ಅದನ್ನು ಉಲ್ಲಂಘನೆ ಮಾಡುವಂತಿಲ್ಲ‌.ಇಂದು ಅಂತರಾಷ್ಟ್ರೀಯ ಮಟ್ಟದಲ್ಲಾದಂತ ವಿಚಾರಗಳನ್ನು ನಮ್ಮ ಸರ್ಕಾರ ಗಂಭೀರವಾಗಿ ತೆಗೆದುಕೊಂಡು ಏನು ಮಾಡಬೇಕು ಎಂಬುದನ್ನು ಯೋಚಿಸುತ್ತದೆ.

ಎಲ್ಲದು ಶಮನ ಆಗುತ್ತದೆ. ಒಂದು ಅಥವಾ ಎರಡು ದಿವಸದಲ್ಲಿ ಶಮನವಾಗುತ್ತದೆ. ನಮ್ಮ ವಿದೇಶಾಂಗ ಸಚಿವರು ನಿಯಂತ್ರಿಸುತ್ತಾರೆ. ಬಾಕಿ ಉಳಿದ ದೇಶಗಳಿಗೆ ಏನು ಸಂದೇಶ ಕೊಡಬೇಕೋ ಅದನ್ನು ಕೊಡುತ್ತದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *