ಬೆಳೆಹಾನಿ: ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು ರೂ.99.23 ಕೋಟಿ ಬೆಳೆ ಪರಿಹಾರ ವಿತರಣೆ

 

ಮಾಹಿತಿ ಕೃಪೆ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ,(ಅಕ್ಟೋಬರ್ 21): ಜಿಲ್ಲೆಯಲ್ಲಿ 2022-23ನೇ ಸಾಲಿನ ಆಗಸ್ಟ್ ಹಾಗೂ ಸೆಪ್ಟೆಂಬರ್ ಮಾಹೆಗಳಲ್ಲಿ (ಮುಂಗಾರು ಹಂಗಾಮಿನಲ್ಲಿ) ಬಿದ್ದಂತಹ ಹೆಚ್ಚಿನ ಮಳೆಯಿಂದಾಗಿ ಬೆಳೆಹಾನಿ ಆಗಿದ್ದು, ಬೆಳೆ ಹಾನಿಯ ಕುರಿತು ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿ ಸಮೀಕ್ಷೆ ಕಾರ್ಯ ಮುಗಿಸಿದ್ದು, ಜಿಲ್ಲೆಯಾದ್ಯಂತ ಒಟ್ಟು 71158.47 ಹೆಕ್ಟೇರ್‍ಗಳಷ್ಟು ಕೃಷಿ ಬೆಳೆ ಹಾನಿಯಾಗಿರುವುದು ವರದಿಯಾಗಿದೆ.

ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 15 ರವರೆಗೆ 5 ಹಂತದಲ್ಲಿ ಚಿತ್ರದುರ್ಗ ಜಿಲ್ಲೆಯ,

ಚಿತ್ರದುರ್ಗ ತಾಲ್ಲೂಕಿನ 23,778 ರೈತ ಫಲಾನುಭವಿಗಳ ಖಾತೆಗಳಿಗೆ ರೂ. 34.54 ಕೋಟಿ,

ಚಳ್ಳಕೆರೆ ತಾಲ್ಲೂಕಿನ 1569 ರೈತ ಫಲಾನುಭವಿಗಳ ಖಾತೆಗಳಿಗೆ ರೂ. 3.52 ಕೋಟಿ,

ಮೊಳಕಾಲ್ಮೂರು ತಾಲ್ಲೂಕಿನ 501 ರೈತ ಫಲಾನುಭವಿಗಳ ಖಾತೆಗಳಿಗೆ ರೂ.0.74 ಕೋಟಿ,

ಹಿರಿಯೂರು ತಾಲ್ಲೂಕಿನ 19619 ರೈತ ಫಲಾನುಭವಿಗಳ ಖಾತೆಗಳಿಗೆ ರೂ.28.95 ಕೋಟಿ,

ಹೊಳಲ್ಕೆರೆ ತಾಲ್ಲೂಕಿನ 21745 ರೈತ ಫಲಾನುಭವಿಗಳ ಖಾತೆಗಳಿಗೆ ರೂ.26.57 ಕೋಟಿ ಹಾಗೂ

ಹೊಸದುರ್ಗ ತಾಲ್ಲೂಕಿನ 6408 ರೈತ ಫಲಾನುಭವಿಗಳ ಖಾತೆಗಳಿಗೆ ರೂ.4.98 ಕೋಟಿ ಸೇರಿದಂತೆ ಜಿಲ್ಲೆಯಿಂದ ಒಟ್ಟು 99.23 ಕೋಟಿಗಳಷ್ಟು ಬೆಳೆ ಪರಿಹಾರದ ಮೊತ್ತ ನೇರ ನಗದು ವರ್ಗಾವಣೆ ಮುಖಾತರ ಜಮೆಯಾಗಿರುತ್ತದೆ.

ಉಳಿದ ಫಲಾನುಭವಿಗಳಿಗೆ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಹಣ ವರ್ಗಾವಣೆ ಮಾಡಲಾಗುತ್ತದೆ. ಮುಂದುವರೆದು ಅಕ್ಟೋಬರ್ ಮಾಹೆಯಲ್ಲಿ (ಹಿಂಗಾರು ಹಂಗಾಮಿನಲ್ಲಿ) ಬಿದ್ದಂತಹ ಹೆಚ್ಚಿನ ಮಳೆಯಿಂದಾಗಿ ಜಿಲ್ಲೆಯಿಂದ ಒಟ್ಟು 49,162.20 ಹೆಕ್ಟೇರಷ್ಟು ಕೃಷಿ ಬೆಳೆ ಹಾನಿಯಾಗಿರುವುದರ ಕುರಿತು ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿ ಸಮೀಕ್ಷೆ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

suddionenews

Recent Posts

ಫೈನಾನ್ಸ್ ಕಿರುಕುಳಕ್ಕೆ ದಾವಣಗೆರೆಯ ಶಿಕ್ಷಕಿ ಆತ್ಮಹತ್ಯೆ ಕೇಸ್ : ಉಲ್ಟಾ ಹೊಡೆದ ಪತಿ..!

ದಾವಣಗೆರೆ: ಇತ್ತೀಚೆಗೆ ಮೈಕ್ರೋ ಫೈನಾನ್ಸ್ ಕಾಟಕ್ಕೆ ರಾಜ್ಯದಲ್ಲಿ ಜೀವ ಕಳೆದುಕೊಂಡವರು ಅದೆಷ್ಟೋ. ಇದಕ್ಕೆ ಕಡಿವಾಣ ಹಾಕುವುದಕ್ಕೆ ಸರ್ಕಾರ ಕೂಡ ಸಭೆಗಳನ್ನ…

9 hours ago

ಹುತಾತ್ಮರ ದಿನ : ಗಾಂಧೀಜಿಯವರಿಗೆ ಪುಷ್ಪ ನಮನ

ಚಿತ್ರದುರ್ಗ. ಜ.30: ಮಹಾತ್ಮಾ ಗಾಂಧೀಜಿಯವರು ಹುತಾತ್ಮರಾದ ದಿನವಾದ ಜ. 30 ರಂದು ಸರ್ವೋದಯ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಈ ನಿಮಿತ್ತ ಅಪರ…

9 hours ago

ಸರ್ಕಾರಿ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಬಿಸಿಯೂಟ ಸವಿದ ಜಿ.ಪಂ ಸಿಇಒ

ಚಿತ್ರದುರ್ಗ. ಜ.30: ಚಿತ್ರದುರ್ಗ ತಾಲ್ಲೂಕಿನ ಕಾಲ್ಗೆರೆ ಹಾಗೂ ಇಸ್ಸಾಮುದ್ರ ಗ್ರಾಮ ಪಂಚಾಯಿತಿಗಳಿಗೆ ಗುರುವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ…

9 hours ago

ಮೈಕ್ರೋ ಫೈನಾನ್ಸ್ ಕಿರುಕುಳ ನೀಡಿದಲ್ಲಿ ಎಫ್.ಐ.ಆರ್ ದಾಖಲಿಸಿ : ಜಿಲ್ಲಾಧಿಕಾರಿ ಗಂಗಾಧರಸ್ವಾಮಿ

ದಾವಣಗೆರೆ ಜ.30 : ಯಾವುದೇ ವ್ಯಕ್ತಿಯನ್ನು ನಿಂದನೆ ಮಾಡಲು  ಅವಕಾಶವಿಲ್ಲ, ಮೈಕ್ರೋ ಫೈನಾನ್ಸ್ ಕಂಪನಿಗಳು ಜನರಿಗೆ ಕಿರುಕುಳ ನೀಡಿದಲ್ಲಿ ಎಫ್‌ಐಆರ್…

9 hours ago

ವಾಹನ ಚಾಲನೆ ವೇಳೆ ತಾಳ್ಮೆ ಅಗತ್ಯ : ಮಹಾಂತೇಶ್

ಸುದ್ದಿಒನ್, ಚಿತ್ರದುರ್ಗ, ಜನವರಿ. 30 : ವಾಹನ ಚಲಾವಣೆ ಮಾಡುವ ಸಂದರ್ಭ ಬಹಳಷ್ಟು ತಾಳ್ಮೆ ಅಗತ್ಯ. ಇಲ್ಲದಿದ್ದರೆ ಅಪಘಾತಗಳು ಹೆಚ್ಚು…

9 hours ago

ಮಹೇಶ್ ಮೋಟಾರ್ಸ್ ನಲ್ಲಿ ಹೊಸ ಹೀರೋ ಡೆಸ್ಟಿನಿ 125 ಬಿಡುಗಡೆ

ಸುದ್ದಿಒನ್, ಚಿತ್ರದುರ್ಗ, ಜನವರಿ. 30 : ಪ್ರತಿಷ್ಠಿತ ದ್ವಿಚಕ್ರ ವಾಹನ ಕಂಪನಿಯಾದ ಹೀರೊ ಮೋಟೋಕಾರ್ಪ್ ನ ಹೊಸ ಮಾದರಿಯ ದ್ವಿಚಕ್ರ…

10 hours ago