ನವದೆಹಲಿ: ಟಿಂ ಇಂಡಿಯಾದ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಹಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಧನಶ್ರೀ ವರ್ಮಾ ಜೊತೆ ನಿನ್ನೆ ಗುರುಗ್ರಾಮದ ಕಾರ್ಮಾ ಲೇಕ್ ರೆಸಾರ್ಟ್ನಲ್ಲಿ ಮದುವೆಯಾಗಿದ್ದಾರೆ.
ತಮ್ಮ ಮದುವೆ ಸಂಭ್ರಮದ ಫೋಟೋಗಳನ್ನು ಚಹಲ್ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ʼ22.12.20. ನಾವು ಒಂದಾನೊಂದು ಕಾಲದಲ್ಲಿ ಅನ್ನೋದ್ರಿಂದ ನಮ್ಮ ಪ್ರಯಾಣ ಆರಂಭಿಸಿ, ಈಗ ಹ್ಯಾಪಿಲಿ ಎವರ್ ಆಫ್ಟರ್ ಕಂಡುಕೊಂಡಿದ್ದೇವೆ. ಯಾಕಂದ್ರೆ ಇನ್ಮುಂದೆ ಎಂದೆಂದಿಗೂ ಜೊತೆಯಾಗಿರಲು ಯುಜುಗೆ ಧನಶ್ರೀ ಎಸ್ ಅಂದಿದ್ದಾಳೆʼ ಎಂದು ಚಹಲ್ ಬರೆದುಕೊಂಡಿದ್ದಾರೆ.
ಮದುವೆಯಲ್ಲಿ ಚಹಲ್ ಬಿಳಿ ಹಾಗೂ ಗೋಲ್ಡನ್ ಕಲರ್ ಶೇರ್ವಾನಿಯಲ್ಲಿ ಮಿಂಚಿದ್ರೆ, ಮದುಮಗಳು ಧನಶ್ರೀ ಕೆಂಪು ಬಣ್ಣದ ಲೆಹೆಂಗಾದಲ್ಲಿ ಕಂಗೊಳಿಸಿದ್ರು.
ಅಂದ್ಹಾಗೆ ಧನಶ್ರೀ ಕೊರಿಯಾಗ್ರಾಫರ್ ಹಾಗೂ ಯೂಟ್ಯೂಬರ್ ಆಗಿದ್ದಾರೆ.
ಚಾಹಲ್ ಇತ್ತೀಚೆಗಷ್ಟೇ ಆಸ್ಟ್ರೇಲಿಯಾದಲ್ಲಿ ಏಕದಿನ ಮತ್ತು ಟಿ20 ಸರಣಿಗಳನ್ನು ಆಡಿ ತವರಿಗೆ ಮರಳಿದ್ದರು.
ಕಳೆದ ಆಗಸ್ಟ್ನಲ್ಲಿ ಚಾಹಲ್ ಐಪಿಎಲ್ ಆಡಲು ತೆರಳುವುದಕ್ಕೆ ಮುನ್ನ ಧನಶ್ರೀ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಏಪ್ರಿಲ್ನಲ್ಲಿ ಲಾಕ್ಡೌನ್ ವೇಳೆ ಚಾಹಲ್ ಆನ್ಲೈನ್ ಮೂಲಕ ಧನಶ್ರೀ ಅವರಿಂದ ನೃತ್ಯ ಕಲಿಯಲಾರಂಭಿಸಿದ್ದರು.
ಈ ವೇಳೆ ಇಬ್ಬರ ನಡುವೆ ಪ್ರೀತಿ ಮೂಡಿತ್ತು. ಧನಶ್ರೀ ದಂತವೈದ್ಯೆಯೂ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ನೃತ್ಯದ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಜನಪ್ರಿಯತೆ ಗಳಿಸಿದ್ದಾರೆ. ತಮ್ಮದೇ ಆದ ಯೂಟ್ಯೂಬ್ ಚಾನಲ್ ಮತ್ತು ನೃತ್ಯ ಅಕಾಡೆಮಿಯನ್ನೂ ಹೊಂದಿದ್ದಾರೆ.
