in , ,

ಮುರುಘಾಮಠದಲ್ಲಿ ಹಾರ್ಟ್ ಅಂಡ್ ಸ್ಟ್ರೋಕ್ ಫೌಂಡೇಷನ್ ಆಫ್ ಇಂಡಿಯಾದ ವತಿಯಿಂದ ಸಿಪಿಆರ್.ಟ್ರೈನಿಂಗ್ ಪ್ರೋಗ್ರಾಂ : ಕೆ.ಎಸ್.ನವೀನ್

suddione whatsapp group join

 

ವರದಿ : ಕೆ.ಎಂ. ಮುತ್ತುಸ್ವಾಮಿ ಕಣ್ಣನ್

ಚಿತ್ರದುರ್ಗ, (ಸೆ.23) : ಕೋವಿಡ್‍ನಿಂದಾಗಿ ಸಾಕಷ್ಟು ಸಾವು-ನೋವು ಸಂಭವಿಸಿದ್ದು, ಜೀವನೋಪಾಯಕ್ಕೆ ತೊಂದರೆಯಾಗಿರುವುದರಿಂದ ದೇಶದಲ್ಲಿ ಎಲ್ಲರ ಗಮನ ಆರೋಗ್ಯದ ಕಡೆಗಿದೆ ಈ ನಿಟ್ಟಿನಲ್ಲಿ ಮುರುಘಾಮಠದಲ್ಲಿ ಈ ಬಾರಿ ನಡೆಯುವ ಶರಣ ಸಂಸ್ಕøತಿ ಉತ್ಸವದಲ್ಲಿ ಹಾರ್ಟ್ ಅಂಡ್ ಸ್ಟ್ರೋಕ್ ಫೌಂಡೇಷನ್ ಆಫ್ ಇಂಡಿಯಾದ ವತಿಯಿಂದ ಸಿಪಿಆರ್.ಟ್ರೈನಿಂಗ್ ಪ್ರೋಗ್ರಾಂ ಹಮ್ಮಿಕೊಳ್ಳಲಾಗಿದೆ ಎಂದು ಶರಣ ಸಂಸ್ಕøತಿ ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಕೆ.ಎಸ್.ನವೀನ್ ತಿಳಿಸಿದರು.

ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಹೃದಯ ಸಂಬಂಧಿ ಕಾಯಿಲೆ ಹಾಗೂ ಹೃದಯಾಘಾತಕ್ಕೆ ಭಾರತ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಿದೆ.

ಚಿಕ್ಕವಯಸ್ಸಿನವರು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಅದಕ್ಕಾಗಿ ಅ.4 ರಂದು ಮರುಘಾಮಠದ ಅನುಭವ ಮಂಟಪದಲ್ಲಿ ಎಲ್ಲಾ ಶಾಲಾ-ಕಾಲೇಜು ಹಾಗೂ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಸಿಪಿಆರ್.ತರಬೇತಿ. ಅ.8 ರಂದು ಜಿಲ್ಲೆಯ 189 ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಯುವಕರಿಗೆ, ಮಹಿಳಾ ಸ್ವಸಹಾಯ ಸಂಘಗಳಿಗೆ, ಯುವ ರೈತರಿಗೆ ತರಬೇತಿ ನೀಡಲಾಗುವುದು. ಅ.14 ರೊಳಗೆ ಜಿಲ್ಲೆಯ ಮೂರು ಲಕ್ಷ ಜನರಿಗೆ ತರಬೇತಿ ನೀಡುವ ಗುರಿಯಿದೆ. ತರಬೇತಿ ನೀಡುವವರಿಗೆ 24 25,26 ರಂದು ಮೂರು ದಿನಗಳ ಕಾಲ ಆರು ಗುಂಪುಗಳನ್ನಾಗಿ ಮಾಡಿಕೊಂಡು ಪ್ರತಿ ಗುಂಪಿನಲ್ಲಿ ಐದುನೂರು ವೈದ್ಯಕೀಯ, ಡೆಂಟಲ್, ನರ್ಸಿಂಗ್, ಪ್ಯಾರಾಮೆಡಿಕಲ್, ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು. ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತರಬೇತಿ ಉದ್ಘಾಟಿಸಲಿದ್ದಾರೆಂದು ಹೇಳಿದರು.

25 ರಂದು ಎಲ್ಲಾ ಶಾಲಾ ಕಾಲೇಜು ಶಿಕ್ಷಕರಿಗೆ ಹಾಗೂ ಉಪನ್ಯಾಸಕರುಗಳಿಗೆ ತರಬೇತಿ, ಮಧ್ಯಾಹ್ನ ಪೌರ ಕಾರ್ಮಿಕರಿಗೆ, ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ ಹಾಗೂ 26 ರಂದು ಆಶಾ ಕಾರ್ಯಕರ್ತೆಯರಿಗೆ, ಮಧ್ಯಾಹ್ನ ಸಂಜೀವಿನಿ ಜೀವ ರಕ್ಷಕ ಟ್ರಸ್ಟ್‍ನ ಸ್ವಯಂ ಸೇವಕರಿಗೆ ತರಬೇತಿ ನೀಡಲಾಗುವುದು.

ಮೂರು ದಿನಗಳಲ್ಲಿ ಮೂರು ಸಾವಿರದ ಐದುನೂರು ಮಂದಿಗೆ ತರಬೇತಿ ನೀಡುವ ಉದ್ದೇಶವಿದೆ. ಅ.14 ರಂದು ತರಬೇತಿಯ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಆರೋಗ್ಯ ಸಚಿವರು ಭಾಗವಹಿಸಲಿದ್ದಾರೆಂದರು.

ಡಾ.ಶಾಲಿನಿ ಮಾತನಾಡಿ ಸಿಪಿಆರ್.ತರಬೇತಿಯನ್ನು ಹೆಲ್ತ್ ಚಳುವಳಿ ಹಾಗೂ ಜೀವ ಉಳಿಸುವ ಚಳುವಳಿಯನ್ನಾಗಿ ಮಾಡಬೇಕೆಂಬುದು ನಮ್ಮೆಲ್ಲರ ಬಯಕೆ. ಸಿಪಿಆರ್ ಜೊತೆಗೆ ಪ್ರಥಮ ಚಿಕಿತ್ಸೆ ಕೂಡ ಹೇಳಿಕೊಡಲಾಗುವುದು. ದೇಶದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಹಳ್ಳಿಗಳಲ್ಲಿ ತರಬೇತಿ ನೀಡುತ್ತಿದ್ದು, ಇದೊಂದು ವೈಜ್ಞಾನಿಕ ರೀತಿಯಲ್ಲಿರುತ್ತದೆ. ಕೋವಿಡ್ ರೋಗಿಗಳನ್ನು ಹೇಗೆ ಟ್ರೀಟ್ ಮಾಡಬೇಕೆನ್ನುವುದನ್ನು ತರಬೇತಿಯಲ್ಲಿ ತಿಳಿಸಲಾಗುವುದು ಎಂದರು.

ಡಾ.ನಿಶ್ಚಲ್ ಮಾತನಾಡುತ್ತ ಸಾವಿಗೂ ಮುನ್ನ ಹೃದಯ ಬಡಿತ ನಿಂತು ಹೋಗುತ್ತದೆ. ಯಾರಾದರೂ ಹೃದಯಾಘಾತಕ್ಕೊಳಗಾದರೆ ತಕ್ಷಣವೇ ಏನು ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಎನ್ನುವುದನ್ನು ಸಿಪಿಆರ್.ಟ್ರೈನಿಂಗ್‍ನಲ್ಲಿ ಹೇಳಿಕೊಡಲಾಗುವುದು. ಇದರಿಂದ ಅಮೂಲ್ಯವಾದ ಜೀವ ಉಳಿಸಿದಂತಾಗುತ್ತದೆ. ತರಬೇತಿಯಲ್ಲಿ ಎಲ್ಲಾ ಕಡೆಯಿಂದ ಪರಿಣಿತ ವೈದ್ಯರುಗಳು ಪಾಲ್ಗೊಳ್ಳಲಿದ್ದು, ಹೃದಯಾಘಾತಕ್ಕೊಳಗಾದವರಿಗೆ ಇದರಿಂದ ಜೀವ ಉಳಿಯುವ ಅವಕಾಶ ಜಾಸ್ತಿಯಿರುತ್ತದೆ ಎಂದು ತರಬೇತಿಯ ಮಹತ್ವವನ್ನು ತಿಳಿಸಿದರು.

ಡಾ.ಪುನಿತ್ ಅಗರ್‍ವಾಲ್, ಅರ್ಜುನ್ ರಂಗರಾಜು, ಸಂಜೀವಿನಿ ಜೀವ ರಕ್ಷಕ ಟ್ರಸ್ಟ್‍ನ ರಂಗಸ್ವಾಮಿ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಮೈಸೂರು ಗ್ಯಾಂಗ್ ರೇಪ್ : ಆರೋಪಿಗಳ ಪತ್ತೆ ಮಾಡಿದ ಸಂತ್ರಸ್ತೆ

ಬಳ್ಳಾರಿಯಲ್ಲಿ ಕಲುಷಿತ ನೀರು ಸೇವಿಸಿ 30 ಕ್ಕೂ ಹೆಚ್ಚು ಜನ ಅಸ್ವಸ್ಥ..!