ಆರೋಗ್ಯ ತಪಾಸಣೆ ಜೊತೆಯಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ : ತಹಶೀಲ್ದಾರ್ ಸತ್ಯನಾರಾಯಣ

suddionenews
1 Min Read

ಚಿತ್ರದುರ್ಗ, (ಅಕ್ಟೋಬರ್.16) : ಸಾರ್ವಜನಿಕರು ತಮ್ಮ ಆರೋಗ್ಯ ತಪಾಸಣೆ ಜೊತೆಯಲ್ಲಿ ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳಬೇಕು ಎಂದು ಚಿತ್ರದುರ್ಗ ತಹಶೀಲ್ದಾರ್ ಸತ್ಯನಾರಾಯಣ ಹೇಳಿದರು.

ಚಿತ್ರದುರ್ಗ ತಾಲ್ಲೂಕಿನ ಕೊಡಗವಳ್ಳಿ ಗ್ರಾಮದಲ್ಲಿ ಶನಿವಾರ ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕಿನ ಎಲ್ಲಾ ಇಲಾಖೆಗಳ ಸಹಯೋಗದೊಂದಿಗೆ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯು ಎಲ್‍ಇಡಿ ವಾಹನದ ಮೂಲಕ ಕೋವಿಡ್ ಲಸಿಕೆ ಮತ್ತು ಆರೋಗ್ಯ ಇಲಾಖೆಯ ವಿವಿಧ ಯೋಜನೆಗಳ ಮಾಹಿತಿ ಶಿಕ್ಷಣ ಸಂವಹನಕ್ಕೆ ಚಾಲನೆ ನೀಡಿ  ಅವರು ಮಾತನಾಡಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ ಗಿರೀಶ್ ಮಾತನಾಡಿ,  ಈ ಗ್ರಾಮದಲ್ಲಿ ಒಟ್ಟು 907 ಜನರ ಲಸಿಕಾ ಗುರಿ ಇರುತ್ತದೆ ಈಗಾಗಲೇ ಶೇ.61 ರಷ್ಟು ಜನರು ಲಸಿಕೆ ಪಡೆದಿದ್ದೀರ ಶೇ.39 ರಷ್ಟು ಜನರು ಲಸಿಕೆ ಪಡೆದು ಸುರಕ್ಷಿತರಾಗಿರಿ. ಲಸಿಕೆ ಬಗ್ಗೆ  ಊಹಾಪೋಹಗಳನ್ನು ನಂಬಬೇಡಿ ಲಸಿಕೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದರು.

ತಹಶೀಲ್ದಾರ್ ರವರ ಜೊತೆ ಎಲ್ಲಾ ಇಲಾಖೆಗಳ ಮುಖ್ಯಸ್ಥರು ಮನೆ ಮನೆ ಭೇಟಿ ನೀಡಿ ಅಹವಾಲು ಸ್ವೀಕರಿಸಿ ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಿದರು ಹಾಗೂ ಮನೆ ಮನೆ ಭೇಟಿ ಸಂದರ್ಭದಲ್ಲಿ ಕೋವಿಡ್ ಲಸಿಕೆ ಪಡೆಯಲು ಮನ ಒಲಿಸಿ ಸುಮಾರು 150 ಜನರಿಗೆ ಲಸಿಕೆ ಹಾಕಿಸಿದರು. 250 ಜನರ ಆರೋಗ್ಯ ತಪಾಸಣೆ, ರಕ್ತ, ಮೂತ್ರ, ಗಂಟಲು ದ್ರವ ಪರೀಕ್ಷೆ, ರಕ್ತದೊತ್ತಡದ ಪರೀಕ್ಷೆ ಚಿಕಿತ್ಸೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಎನ್.ಎಸ್. ಮಂಜುನಾಥ, ಜಾನಕಿ, ಸಿಡಿಪಿಓ ನರಸಿಂಹರಾಜು, ಬಿಇಓ ಈಶ್ವರಪ್ಪ, ಡಾ. ಶೈಲಕೊಳ್ಳಿ, ಡಾ.ವಾಣಿ, ಡಾ. ಮಂಜುಳಾ ಗ್ರಾಮ ಪಂಚಾಯತಿ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *