ತಲೆನೋವು ಸದಾ ಕಾಡುತ್ತಾ..? ಈ ಮನೆ ಮದ್ದನ್ನ ಟ್ರೈ ಮಾಡಿ ಸಾಕು

ಹಲವರಿಗೆ ಇದ್ದಕ್ಕಿದ್ದ ಹಾಗೇ ತಲೆ ನೋವು ಬರುತ್ತೆ. ಮಾತ್ರೆಗಳಿಗೆ ಅಂತವರು ಅಡಿಕ್ಟ್ ಆಗಿರುತ್ತಾರೆ. ಆದರೆ ಮಾತ್ರೆ ತೆಗೆದುಕೊಳ್ಳುವುದು ಸದಾ ಕಾಲ ಒಳ್ಳೆಯದಲ್ಲ. ತೀರಾ ಆಗ್ತಾನೇ ಇಲ್ಲ ಎಂದಾಗ ಮಾತ್ರೆಗಳ ಮೊರೆ ಹೋಗಬಹುದು. ಹಾಗಾದ್ರೆ ಮಾತ್ರೆಗಳಿಲ್ಲದೆ ತಲೆ ನೋವನ್ನ ಕಡಿಮೆ ಮಾಡಿಕೊಳ್ಳುವುದೇಗೆ ಗೊತ್ತಾ..? ಇಲ್ಲಿದೆ ನೋಡಿ ಒಂದಷ್ಟು ಸಿಂಪಲ್ ಟ್ರಿಕ್ಸ್.

* ಸ್ವಲ್ಪೇ ಸ್ವಲ್ಪ ತುಪ್ಪವನ್ನ ತೆಗೆದುಕೊಳ್ಳಿ. ಒಂದು ಕರ್ಪೂರವನ್ನ ತೆಗೆದುಕೊಂಡು, ತುಪ್ಪದಲ್ಲಿ ತೇಯಬೇಕು. ಎರಡು ಚೆನ್ನಾಗಿ ಮಿಕ್ಸ್ ಆದ ಬಳಿಕ, ಅದನ್ನ ಹಣೆಗೆ ಹಚ್ಚಬೇಕು. ಹೀಗೆ ಮಾಡುವುದರಿಂದ ಆ ಕರ್ಪೂರದ ವಾಸನೆ ಹಾಗೂ ತುಪ್ಪದ ವಾಸನೆಯಿಂದಾಗಿ ತಲೆ ನೋವು ಕಡಿಮೆಯಾಗುತ್ತದೆ.

* ಈ ತಲೆನೋವು ಕೆಲವೊಂದು ಸಲ ಹಲವು ಕಾರಣಗಳಿಗೆ ಬರುತ್ತದೆ. ಶೀತಕ್ಕೆ ಬರುತ್ತೆ, ಯೋಚನೆ ಮಾಡಿದರೆ ಮೈಗ್ರೇನ್ ಇದ್ದವರಿಗೆ ಮಾಡುತ್ತದೆ. ಹೀಗಾಗಿ ಈ ತುಪ್ಪದ ಬಳಕೆ ಆ ಎಲ್ಲಾ ಸಮಸ್ಯೆಗೆ ಪರಿಹಾರ ನೀಡುತ್ತದೆ. ತುಪ್ಪದ ವಾಸನೆಯಿಂದ ತಲೆನೋವು ಬಿಟ್ಟು ಹೋಗುತ್ತದೆ.

* ಬಜೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಲ್ವಾ. ಆ ಬಜೆಯನ್ನ ಪೌಡರ್ ಮಾಡಿಕೊಂಡು ವಾಸನೆ ನೋಡುವುದರಿಂದಾನೂ ತಲೆ ನೋವು ಮಾಯವಾಗುತ್ತದೆ. ಅಥವ ಬಜೆಯನ್ನು ನಡುವೆ ಕಟ್ ಮಾಡಿದರೂ ಅದರಿಂದಾನೂ ವಾಸನೆ ನೋಡಬಹುದು.

* ತಲೆ‌ನೋವು ಕಡಿಮೆನೇ ಆಗ್ತಾ ಇಲ್ಲ ಎಂಬ ಚಿಂತೆ ಇರುವವರು ಇನ್ನೊಂದು ಮನೆ ಮದ್ದನ್ನು ಟ್ರೈ ಮಾಡಬಹುದು. ಹೇಗಪ್ಪ ಅಂದ್ರೆ ಒಂದು ಟೇಬಲ್ ಸ್ಪೂನ್ ತುಪ್ಪಕ್ಕೆ ಒಂದು ಟೇಬಲ್ ಸ್ಪೂನ್ ಬೆಲ್ಲವನ್ನು ಬೆರೆಸಿ, ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಅದನ್ನ ಖಾಲಿ ಹೊಟ್ಟೆಗೆ ಸೇವಿಸುತ್ತಾ ಬಂದರು, ಹಲವು ದಿನಗಳಿಂದ ಇರುವ ತಲೆ ನೋವು ಕಡಿಮೆಯಾಗುತ್ತದೆ.

(ಈ ಎಲ್ಲಾ ಮಾಹಿತಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಿರುವ ಮಾಹಿತಿಯಾಗಿದೆ. ಒಮ್ಮೆ ವೈದ್ಯರನ್ನು ಸಂಪರ್ಕಿಸಿ, ಸಲಹೆ ಪಡೆದು ಬಳಸಿ)

suddionenews

Recent Posts

ಈ ಪುಟಾಣಿಯ ಚಿಕಿತ್ಸೆಗೆ 16 ಕೋಟಿಯ ಅಗತ್ಯ ; ಕೈಜೋಡಿಸಿದ ಕಿಚ್ಚ ಸುದೀಪ್

ಬೆಂಗಳೂರು; ಮಕ್ಕಳೆಂದರೆ ಯಾವ ಪೋಷಕರಿಗೆ ತಾನೇ ಇಷ್ಟ ಇಲ್ಲ ಹೇಳಿ. ಮಕ್ಕಳಾದ ಮೇಲೆ ಅವರ ಉಜ್ವಲ ಭವಿಷ್ಯಕ್ಕಾಗಿಯೇ ಹೋರಾಡುತ್ತಾರೆ. ಅವರ…

21 minutes ago

ಚಿತ್ರದುರ್ಗ : ಯುಗಾದಿ ಹಬ್ಬ ಆಚರಣೆ : ಚಂದ್ರನನ್ನು ಕಣ್ತುಂಬಿಕೊಂಡ ಜನತೆ

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 31 : ಯುಗಾದಿ ಹಬ್ಬವನ್ನು ಜಿಲ್ಲೆಯಲ್ಲಿ ಭಾನುವಾರ ಮತ್ತು ಸೋಮವಾರ ಎರಡು ದಿನ ಸಂಭ್ರಮದಿಂದ ಆಚರಿಸಲಾಯಿತು.…

45 minutes ago

ಚಿತ್ರದುರ್ಗ : ಯುಗಾದಿ ವೇಳೆ ಇಸ್ಪೀಟ್ ಜೂಜಾಟ ಅಡ್ಡೆಗಳ ಮೇಲೆ ಪೊಲೀಸ್ ದಾಳಿ : 575 ಜನ ಮತ್ತು 7 ಲಕ್ಷ ವಶಕ್ಕೆ

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 31 : ಜಿಲ್ಲೆಯಾದ್ಯಂತ ಯುಗಾದಿ ಹಬ್ಬದ ಪ್ರಯುಕ್ತ ಇಸ್ಪೀಟ್ ಜೂಜಾಟದ ಅಡ್ಡೆಗಳ ಮೇಲೆ ಪೊಲೀಸರು ಮಾರ್ಚ್…

2 hours ago

ಚಿತ್ರದುರ್ಗ : ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಯುಗಾದಿ ಹಬ್ಬ ಆಚರಣೆ

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 31 : ಗೋನೂರು ಸಮೀಪವಿರುವ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಯುಗಾದಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು. ವಿಶೇಷವಾದ…

2 hours ago

ಚಿತ್ರದುರ್ಗ : ಮಡಿವಾಳರ ವಿದ್ಯಾರ್ಥಿನಿಲಯ ನಾಮಫಲಕ ಉದ್ಘಾಟನೆ

ವರದಿ ಮತ್ತು ಫೋಟೋ ಕೃಪೆ                      ಕೆ.ಎಂ.ಮುತ್ತುಸ್ವಾಮಿ…

3 hours ago

ಯುವಕರು ರಂಗಭೂಮಿ ಬಗ್ಗೆ ಹೆಚ್ಚಿನ ಆಸಕ್ತಿ ತೋರಬೇಕು : ಆರ್.ಶೇಷಣ್ಣಕುಮಾರ್

ವರದಿ ಮತ್ತು ಫೋಟೋ ಕೃಪೆ                    ಕೆ.ಎಂ.ಮುತ್ತುಸ್ವಾಮಿ ಕಣ್ಣನ್…

3 hours ago