in

ಜೆಡಿಎಸ್ ಭದ್ರಕೋಟೆಯಲ್ಲಿ ಕಾಂಗ್ರೆಸ್ ಗೆಲುವು : ರಿಯಲ್ ಗೂಳಿ ಜೊತೆ ಸಂಭ್ರಮಾಚರಣೆ..!

suddione whatsapp group join

 

ಮಂಡ್ಯ: ಮಂಡ್ಯ ಎಂದಾಕ್ಷಣ ಅಲ್ಲಿ ಜೆಡಿಎಸ್ ಪ್ರಾಬಲ್ಯ ಹೆಚ್ಚಿರುವುದೇ ಕಣ್ಣಿಗೆ ಕಟ್ಟುತ್ತೆ. ಜೆಡಿಎಸ್ ಭದ್ರಕೋಟೆಯಾಗಿಯೇ ಉಳಿದಿತ್ತು. ಆದ್ರೆ ಕಳೆದ ಲೋಕಸಭಾ ಚುನಾವಣೆಯಲ್ಲೂ ಮಂಡ್ಯದಲ್ಲಿ ಜೆಡಿಎಸ್ ಸೋಲು ಅನುಭವಿಸಿತ್ತು. ಇದೀಗ ಈ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲೂ ಜೆಡಿಎಸ್ ಅಭ್ಯರ್ಥಿಗೆ ಮಂಡ್ಯದ ಜನ ಸೋಲನ್ನೇ ತೋರಿಸಿದ್ದಾರೆ.

ಆಶ್ಚರ್ಯ ಎಂಬಂತೆ ಕಾಂಗ್ರೆಸ್ ಅಭ್ಯರ್ಥಿ ಮಂಡ್ಯ ಕ್ಷೇತ್ರದಲ್ಲಿ ಗೆದ್ದು ಬೀಗಿದ್ದಾರೆ. ದಿನೇಶ್ ಗೂಳಿಗೌಡ ಮಂಡ್ಯ ವಿಧಾನ ಪರಿಷತ್ ನಲ್ಲಿ ಗೆಲುವು ಕಂಡಿದ್ದಾರೆ. ಜೆಡಿಎಸ್ ಅಭ್ಯರ್ಥಿಯಾಗಿದ್ದ ಹಾಲಿ ಎಂಎಲ್ಸಿ ಅಪ್ಪಾಜಿ ಗೌಡ ಸೋಲು ಕಂಡಿದ್ದಾರೆ.

ಫಲಿತಾಂಶ ಬಂದ ಕೂಡಲೇ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದ್ದಾರೆ. ಸಂಭ್ರಮಾಚರಣೆಗಾಗಿ ದಿನೇಶ್ ಗೂಳಿಗೌಡ ಜೊತೆಗೆ ರಿಯಲ್ ಗೂಳಿಯನ್ನೇ ಕರೆಸಿದ್ದಾರೆ. ಗೂಳಿಗೌಡ ಕೂಡ ರಿಯಲ್ ಗೂಳಿ ಜೊತೆ ನಿಂತು ಪೋಸ್ ಕೊಟ್ಟಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಕೊಹ್ಲಿಯೇ ಕ್ಯಾಪ್ಟನ್ ಆಗಿ ಮುಂದುವರೆಯಲಿ ಅಂತಿದ್ದಾರೆ ಆಯ್ಕೆ ಸಮಿತಿಯ ಮಾಜಿ ಮುಖ್ಯಸ್ಥ..!

ಈ ರಾಶಿಯವರಿಗೆ ವಿವಿಧ ಮೂಲಗಳಿಂದ ಹೆಚ್ಚಿನ ಆದಾಯ!