in ,

ಇಂದೇ ರಾಷ್ಟ್ರೀಯ ನಿರುದ್ಯೋಗ ದಿನಾಚರಣೆಗೆ ಮುಂದಾದ ಕಾಂಗ್ರೆಸ್..!

suddione whatsapp group join

ನವದೆಹಲಿ: ಇಂದು ಮೋದಿ ಹುಟ್ಟಿದ ಹಬ್ಬ. ಆದ್ರೆ ಈ ದಿನವನ್ನ ರಾಷ್ಟ್ರೀಯ ನಿರುದ್ಯೋಗ ದಿನವನ್ನಾಗಿ ಅಚರಿಸೋದಕ್ಕೆ ಕಾಂಗ್ರೆಸ್ ನಿರ್ಧರಿಸಿದೆ. ಕೆಲವು ಕಡೆ ಪ್ರತಿಭಟನೆಗೂ ಸಜ್ಜಾಗಿದೆ.

ಪ್ರಧಾನಿಯಾಗಿ ಏಳೂವರೆ ವರ್ಷ ಕಳೆದರೂ ಉದ್ಯೋಗ ಸೃಷ್ಠಿಯಾಗಿಲ್ಲ. ಸಾಕಷ್ಟು ಜನ ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ. ಇವರ ಆಡಳಿತಾಧಿಕಾರದಲ್ಲಿ ದೇಶಕ್ಕೆ ಉಪಯೋಗವಾಗುವ ಯಾವ ಯೋಜನೆಯೂ ಜಾರಿಯಾಗಿಲ್ಲ. ಹೀಗಾಗಿ ಅವರ ಹುಟ್ಟುಹಬ್ಬವನ್ನು ರಾಷ್ಟ್ರೀಯ ನಿರುದ್ಯೋಗ ದಿನವನ್ನಾಗಿ ಆಚರಿಸಲು ಕಾಂಗ್ರೆಸ್ ನಿರ್ಧರಿಸಿರುವುದರ ಬಗ್ಗೆ ತಿಳಿಸಿದೆ.

ಈ ಏಳೂವರೆ ವರ್ಷದಲ್ಲಿ ಮೋದಿ ಯುವಕರಿಗೆ ಅನುಕೂಲವಾಗುವಂತ ಕೆಲಸ‌ ಮಾಡಿಲ್ಲ. ಅಷ್ಟೆರ ಅಲ್ಲ ಖಾಲಿ ಇರುವ ಉದ್ಯೋಗಗಳ ಭರ್ತಿಗೂ ಮುಂದಾಗಿಲ್ಲ. ಈ ಸಂಬಂಧ ರಾಜ್ಯದ ವಿವಿದೆಡೆ ಕಾಂಗ್ರೆಸ್ ಪ್ರತಿಭಟನೆಗೆ ಮುಂದಾಗಿದೆ. ಕಳೆದ ವರ್ಷವೂ ಪ್ರಧಾನಿ ಹುಟ್ಟುಹಬ್ಬದ ದಿನ Unemploymentday ಅಂತ ಹ್ಯಾಶ್ ಟ್ಯಾಗ್ ಕ್ರಿಯೇಟ್ ಆಗುವ ಮೂಲಕ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆಗಿತ್ತು. ಇದೀಗ ಈ ಸಂಬಂಧ ಕಾಂಗ್ರೆಸ್ ಪ್ರತಿಭಟನೆ ನಡೆಸೋದಕ್ಕೆ ಶುರು ಮಾಡಿದೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಬಾಳೆ ಎಲೆ ಮೇಲೆ ಪ್ರಧಾನಿ : ಧಾರವಾಡ ಕಲಾವಿದನ ಕೈಚಳಕಕ್ಕೆ ಫಿದಾ..

500 ರೂಪಾಯಿಗಾಗಿ ರಾಹುಲ್ ಶೂಟ್ ಮಾಡಿಕೊಂಡನಾ..?