ಬೆಂಗಳೂರು: ಜೂನ್ ನಲ್ಲಿ ನಡೆಯುವ ರಾಜ್ಯಸಭೆ ಚುನಾವಣೆಗೆ ಈಗಾಗಲೇ ಎರಡು ಪಕ್ಷಗಳು ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದಾರೆ. ನಾಳೆ ಎಂದರೆ ಮೇ 31 ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕವಾಗಿದೆ. ಈಗಾಗಲೇ ಬಿಜೆಪಿಯಿಂದ ನಿರ್ಮಲಾ ಸೀತರಾಮನ್ ಹಾಗೂ ನಟ ಜಗ್ಗೇಶ್ ಗೆ ಟಿಕೆಟ್ ನೀಡಲಾಗಿದೆ. ಇನ್ನು ಕಾಂಗ್ರೆಸ್ ಜೈರಾಂ ರಮೇಶ್ ಅವರಿಗೆ ಫೈನಲ್ ಆಗಿದೆ.
ಈ ಸಂಬಂಧ ಕೆಪಿಸಿಸಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ಹಂಚಿಕೊಳ್ಳಲಾಗಿದೆ. ಸುದ್ದಿಗೋಷ್ಟಿ ಆರಂಭಕ್ಕೂ ಮುನ್ನ ಸಿದ್ದರಾಮಯ್ಯ ಹಾಗೂ ಜೈರಾಂ ರಮೇಶ್ ಮಾತನಾಡುತ್ತಾ, ಬಿಜೆಪಿಯಲ್ಲಿ ಯಾರಿಗೆ ಟಿಕೆಟ್ ಎಂಬ ಪ್ರಶ್ನೆ ಎದ್ದಿದೆ. ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ ಜಗ್ಗೇಶ್ ಅವರಿಗಂತೆ ಎಂದಿದ್ದಾರೆ.
ಇದಕ್ಕೆ ಜೈರಾಂ ರಮೇಶ್ ಈ ಹಿಂದೊಮ್ಮೆ ನಮ್ಮ ಪಕ್ಷದಿಂದಲೇ ಶಾಸಕರಾಗಿದ್ದವರು ಅಲ್ಲವೇ ಎಂದಿದ್ದಾರೆ. ಬಳಿಕ ಸಿದ್ದರಾಮಯ್ಯ ಅವರು ಮಾತು ಮುಂದುವರೆಸಿ ಅವರು ಕಮೆಡಿಯನ್ ಅಲ್ಲವೇ ಎಂದಿದ್ದಾರೆ. ಬಳಿಕ ಸುದ್ದಿಗೋಷ್ಟಿಯಲ್ಲಿ ಈ ಬಾರಿಯ ರಾಜ್ಯಸಭೆಗೆ ಜೈರಾಂ ರಮೇಶ್ ಹೋಗುತ್ತಿರುವ ಬಗ್ಗೆ ನಾಯಕರೆಲ್ಲಾ ಮಾತನಾಡಿದ್ದಾರೆ.