Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ನೂರು ಚಪ್ಪಲಿ ಏಟು ತಿನ್ನಬಹುದು, ದುಡ್ಡಿನೇಟು ಅಲ್ಲ : ಡಿಕೆ ಶಿವಕುಮಾರ್

Facebook
Twitter
Telegram
WhatsApp

 

ಬೆಂಗಳೂರು: ಇಂದು ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನಾಯಕರು ಪ್ರತಿಭಟನೆಗಿಳಿದಿದ್ದಾರೆ. ಸಿಲಿಂಡರ್ ಗೆ ನಮಸ್ಕಾರ ಮಾಡಿ, ಅದನ್ನ ತಲೆ‌ಮೇಲೆ ಹೊತ್ತು ವಿನೂತನವಾಗಿ ಪ್ರತಿಭಟಿಸುತ್ತಿದ್ದಾರೆ.

ಇದೇ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಮಾರ್ಚ್ 31 ಆರ್ಥಿಕ ವರ್ಷ ಮುಕ್ತಾಯ. 11 ದಿನದಲ್ಲಿ 10 ಬಾರಿ ಬೆಲೆ ಏರಿಕೆ ಮಾಡಿದ್ದಾರೆ. ಇವತ್ತೆ ಯಾಕೆ ಆಯ್ಕೆ ಮಾಡಿದ್ದೀವಿ ಅಂದ್ರೆ, ಇವತ್ತಿಗೆ ಈ ವರ್ಷದ ಲೆಕ್ಕ ಬರುತ್ತೆ. ನಮಗೆ ದಿನಾ ಪುಕ್ ಪಾಕೇಟ್ ಆಗುತ್ತಾ ಇದೆ. ಪ್ರತಿಯೊಬ್ಬರ ಆದಾಯವನ್ನ ಡಬ್ಬಲ್ ಮಾಡ್ತೀವಿ ಅಂತ ಬಿಜೆಪಿ ಸರ್ಕಾರ ಹೇಳಿದ್ರು.

 

ಬೆಲೆ ಏರಿಕೆ ಗಗನಕ್ಕೇರಿದೆ. ಆದಾಯ ಪಾತಾಳಕ್ಕೆ ಹೋಗಿದೆ. ಎಲ್ಲರೂ ನೋವು ಅನುಭವಿಸುತ್ತಿದ್ದಾರೆ. ಈಗಾಗಲೇ ಸುಮಾರು 110 ರೂಪಾಯಿ‌ ಮುಟ್ಟಿದೆ. ಇದನ್ನ ವಿರೋಧಿಸಿಯೆ ನಾವೂ ಪ್ರತಿಭಟಿಸುತ್ತಿದ್ದೇವೆ. ಕಾಂಗ್ರೆಸ್ ಕಚೇರಿ ಮುಂದೆ ನಾವೆಲ್ಲರೂ ಪ್ರತಿಭಟನೆ ಶುರು ಮಾಡಿದ್ದೇವೆ.

ನಮ್ಮ ಕರ್ನಾಟಕ ರಾಜ್ಯದ ಜನ ದಡ್ಡರಲ್ಲ. ಅವಕಾಶಕ್ಕಾಗಿ ಕಾಯ್ದುಕೊಂಡಿದ್ದಾರೆ. ಜನರಿಗೆ ಇರುವ ನೋವು ಮತ ಹಾಕುವಾಗ ಹೊರ ಬರುತ್ತೆ, ಬಿಜೆಪಿ ಸರ್ಕಾರವನ್ನ ಕಿತ್ತೊಗೆಯೋ ಮೂಲಕ ಹೊರ ಬರಲಿದೆ. ಕಾಂಗ್ರೆಸ್ ಪಕ್ಷ ಜನರ ಧ್ವನಿಯಾಗಿ ಕೆಲಸ ಮಾಡುತ್ತಿದೆ. ಜನಕ್ಕಂತು ಪ್ರಾಣ ಹಿಂಡುತ್ತಿದ್ದಾರೆ. ನೂರು ಚಪ್ಪಲಿ ಏಟು ತಿಂದರು ದುಡ್ ಏಟನ್ನ ತಿನ್ನೋದಕ್ಕೆ ಆಗಲ್ಲ. ಜನರ ಜೀವನದ ಜೊತೆಗೆ ಆಟ ಆಡ್ತಾ ಇದ್ದಾರೆ. ಸಮಾಜವನ್ನ ಹೊಡೆಯುವ ಕೆಲಸ ಅವರದ್ದು ಆದ್ರೆ ನಮ್ಮದು ಸಮಾಜವನ್ನ ಒಟ್ಟುಗೂಡಿಸುವಂತ ಕೆಲಸವಾಗುತ್ತಿದೆ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಅಣ್ಣಾವ್ರಿಗೆ ಅಣ್ಣಾವ್ರೇ ಸಾಟಿ, ಹಿರಿಯೂರಲ್ಲಿ ಬಿ.ಎನ್.ಚಂದ್ರಪ್ಪ ಬಣ್ಣನೆ

ಸುದ್ದಿಒನ್, ಚಿತ್ರದುರ್ಗ, ಏ. 24 :  ಮುಖ್ಯಮಂತ್ರಿ ಸ್ಥಾನವನ್ನು ಸುಲಭವಾಗಿ ಅಲಂಕರಿಸುವ ಬಂದಿದ್ದ ಅವಕಾಶವನ್ನು ನಿರಾಕರಿಸಿ, ಕನ್ನಡ ನಾಡು-ನುಡಿಗೆ ಬದುಕು ಮಿಸಲಿಟ್ಟ ಡಾ.ರಾಜಕುಮಾರ್ ಅವರಿಗೆ ಅವರೇ ಸಾಟಿ ಎಂದು ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಬಣ್ಣಿಸಿದರು.

ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಸುಳ್ಳು ಹೇಳಿದರೆ ತಾಯಿ ಭದ್ರೆ ಸಹಿಸುವುದಿಲ್ಲ : ಕಮಲ ಪಡೆಗೆ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ತಿರುಗೇಟು

ಸುದ್ದಿಒನ್, ಚಿತ್ರದುರ್ಗ, ಏ. 24 : ಭದ್ರಾ ಮೇಲ್ದಂಡೆ ಯೋಜನೆ ವಿಷಯದಲ್ಲಿ ನಿರಂತರ ಸುಳ್ಳು ಹೇಳಿಕೊಂಡು ಬರುತ್ತಿರುವ ಬಿಜೆಪಿಯವರಿಗೆ ಭದ್ರಾ ಮೇಲ್ದಂಡೆ ಯೋಜನೆ ಜಾರಿ, ಅದಕ್ಕಾಗಿ ನಡೆದ ಹೋರಾಟದ ಮಾಹಿತಿ ಕೊರತೆ ಇದೆ ಅಥವಾ

ಏಪ್ರಿಲ್ 26 ರಂದು ಲೋಕಸಭೆ ಚುನಾವಣೆ | ಸಾರ್ವತ್ರಿಕ ರಜಾದಿನ ಘೋಷಣೆ

ಚಿತ್ರದುರ್ಗ. ಏ.24: ಎರಡನೇ ಹಂತದ ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಏಪ್ರಿಲ್ 26 ರಂದು ಚಿತ್ರದುರ್ಗ ಜಿಲ್ಲೆಯಲ್ಲಿ ಮತದಾನ ಜರುಗಲಿದೆ. ಮತದಾನದ ದಿನವನ್ನು ಸಾರ್ವತ್ರಿಕ ರಜಾದಿನವನ್ನಾಗಿ ಘೋಷಣೆ ಮಾಡಲಾಗಿದೆ. ಅಂದು ಎಲ್ಲಾ ಸರ್ಕಾರಿ ಹಾಗೂ ಖಾಸಗಿ

error: Content is protected !!