ಚಡ್ಡಿ ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕರು ತೊಟ್ಟ ಬಿಜೆಪಿ ಮುಖಗಳು ಯಾವುದು ಗೊತ್ತಾ..?

suddionenews
1 Min Read

ಬೆಂಗಳೂರು: ರಾಜ್ಯದಲ್ಲಿ ಸದ್ಯಕ್ಕೆ ಪಠ್ಯ ಪರಿಷ್ಕರಣೆ ವಿಚಾರ ಮತ್ತು ಆರ್ ಎಸ್ ಎಸ್ ಚಡ್ಡಿ ವಿಚಾರ ಸುದ್ದಿಯಲ್ಲಿದೆ. ಈ ಎರಡು ವಿಷಯದ ಮೇಲೆ ಕಾಂಗ್ರೆಸ್ ಮತ್ತು ಬಿಜೆಪಿ ವಾದ ಪ್ರತಿವಾದ ನಡೆಸುತ್ತಿದೆ. ಇಂದು ಕಾಂಗ್ರೆಸ್ ನಾಯಕರು ಈ ಸಂಬಂಧ ಪ್ರತಿಭಡನೆಯನ್ನು ನಡೆಸಿದೆ. ಈ ಪ್ರತಿಭಟನೆಯಲ್ಲಿ ಬಿಜೆಪಿ ನಾಯಕರ ಮುಖವಾಡ ಹಾಕಿಕೊಂಡಿದ್ದಾರೆ.

ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿ ಪ್ರತಿಭಟನೆ ನಡೆಸಿ, ಪಠ್ಯಪರಿಷ್ಕರಣೆ ಹಾಗೂ ಚಡ್ಡಿ ವಿಚಾರವಾಗಿ ತೀವ್ರ ಅಸಮಾಧಾನವನ್ನು ಹೊರಹಾಕಿದೆ. ಬಿಜೆಪಿಯವರು ಪಠ್ಯಪುಸ್ತಕದಲ್ಲಿರುವ ಲೋಪಗಳನ್ನು ಮರೆಮಾಚಲು ಹಾಗೂ ಶೇ. 40 ಕಮಿಷನ್ ಭ್ರಷ್ಟಾಚಾರವನ್ನು ಮುಚ್ಚಿ ಹಾಕಲು ವಿಷಯಾಂತರ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಖಂಡಿಸಿದೆ.

ಭ್ರಷ್ಟಾಚಾರದಲ್ಲಿ ಆರ್​ಎಸ್​ಎಸ್​ ಸಂಸ್ಥೆಯ ಸಂಘಟನೆ ನಡೆಸುತ್ತಿರುವ ಬಗ್ಗೆ ಜನತೆಗೆ ಬಹಿರಂಗಪಡಿಸಬೇಕು ಇಲ್ಲದೆ ಹೋದರೆ ಬಿಜೆಪಿ ಭ್ರಷ್ಟಾಚಾರದಲ್ಲಿ ಬಂದಿರುವ ಹಣವನ್ನು ಆರೆಸ್ಸೆಸ್ ಸಂಘಟನೆಗೆ ಬಳಸುತ್ತಿರುವುದು ಸಾಬೀತಾಗುತ್ತದೆ. ಬಿಜೆಪಿ ಅತ್ಯಂತ ಭ್ರಷ್ಟ ಪಕ್ಷ ಎಂಬುದು ಈಗ ಸಾಬೀತಾಗಿದೆ. ಭ್ರಷ್ಟಾಚಾರಿಗಳಿಗೆ ವಿರೋಧ ಪಕ್ಷಗಳ ವಿರುದ್ಧ ಮಾತನಾಡುವ ನೈತಿಕತೆ ಉಳಿದಿಲ್ಲ ಎಂಬ ಪರಿಜ್ಞಾನವೂ ಬಿಜೆಪಿಯ ಕೆಲವು ನಾಯಕರಿಗೆ ಇಲ್ಲದಂತಾಗಿದೆ. ಪಕ್ಷದ ಭ್ರಷ್ಟಾಚಾರದ ಬಗ್ಗೆ ಬಿಜೆಪಿ ಶಾಸಕರು ಬಹಿರಂಗವಾಗಿ ಹೇಳಿಕೆಗಳನ್ನು ನೀಡುತ್ತಾರೆ ಹಾಗೂ ಆರೋಗ್ಯ ಸಚಿವರು ಅರ್ಹತೆ ಇಲ್ಲದ ವ್ಯಕ್ತಿ ಎಂದು ಆ ಪಕ್ಷದ ನಾಯಕರೇ ಬಹಿರಂಗಪಡಿಸುತ್ತಾರೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *