Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕಾಂಗ್ರೆಸ್ ಪಕ್ಷಕ್ಕೆ ಹಿಂದುಳಿದ ವರ್ಗಗಳಿಂದ ಶಕ್ತಿ ಬಂದಿದೆ : ಮಧು ಬಂಗಾರಪ್ಪ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ : ಸುರೇಶ್ ಪಟ್ಟಣ್,                         ಮೊ : 87220 22817

ಚಿತ್ರದುರ್ಗ,(ನ.01) : ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಓಬಿಸಿ ಸಮಾವೇಶವನ್ನು ಮಾಡುವುದರ ಮೂಲಕ ಪಕ್ಷದ ಸಂಘಟನೆ ಮಾಡಲಾಗುವುದೆಂದು ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೆಸ್ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ತಿಳಿಸಿದರು.

ನಗರದ ಕಾಂಗ್ರೆಸ್ ಕಛೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಹಿಂದುಳಿದ ವರ್ಗಗಳಿಂದ ಶಕ್ತಿ ಬಂದಿದೆ. ಚಿಕ್ಕ ಚಿಕ್ಕ ಸಮಾಜವನ್ನು ಗುರುತಿಸಿ ಅವರನ್ನು ಮುಕ್ಯವಾಹಿನಿಗೆ ತರುವಂತ ಕಾರ್ಯವನ್ನು ಮಾಡಬೇಕಿದೆ. ಯಾವ ಸಮಾಜವೂ ಸಹಾ ನಿರ್ಲಕ್ಷಕ್ಕೆ ಒಳಗಾಗಬರದೆಂದು ನಮ್ಮ ಉದ್ದೇಶವಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯವಾರು ಪ್ರವಾಸವನ್ನು ಮಾಡುವುದರ ಮೂಲಕ ಜಿಲ್ಲಾ ಓಬಿಸಿ ಘಟಕವನ್ನು ಜಾಗೃತಿ ಮಾಡಲಾಗುವುದು ಎಂಧರು.

ರಾಹುಲ್ ಗಾಂಧಿಯವರು ಭಾರತ್ ಜೋಡೋ ಯಾತ್ರೆ ತುಂಬಾ ಫಲ ಪ್ರದವಾಗಿದೆ. ಅವರ ಮೇಲೆ ಇಲ್ಲ ಸಲ್ಲದ ಅವಹೇಳನಕಾರಿ  ಮಾತುಗಳನ್ನಾಡುವವರಿಗೆ ಈ ಯಾತ್ರೆ ಉತ್ತರವನ್ನು ನೀಡಿದೆ. ಇದರಲ್ಲಿ ಆಗಮಿಸಿ ಜನ ಜಾತ್ರೆಯನ್ನು ಕಂಡು ಬೇರೆಯವರು ಕಂಗಾಲಾಗಿದ್ದಾರೆ. ಉತ್ತಮವಾದ ಬೆಂಬಲ ಈ ಯಾತ್ರೆಗೆ ಕರ್ನಾಟಕದಲ್ಲಿ ವ್ಯಕ್ತವಾಗಿದೆ. ದೇಶದ ಬಗ್ಗೆ ಕಾಳಜಿಯನ್ನು ಇಟ್ಟುಕೊಂಡು ರಾಹುಲ್ ರವರು ಈ ಯಾತ್ರೆಯನ್ನು ಕೈಗೊಂಡಿದ್ದಾರೆ. ಇದರಿಂದ ಪಕ್ಷಕ್ಕೆ ಶಕ್ತಿ ಬಂದಿದೆ. ಮಂದಿನ ದಿನದಲ್ಲಿ ಪಕ್ಷ ಅಧಿಕಾರಕ್ಕೆ ಬರಲಿದೆ. ರಾಹುಲ್ ರವರು ಮಾನವೀಯತೆಯ ನಡಿಗೆ ಇದಾಗಿದೆ ಎಂದು ಮಧು ಬಂಗಾರಪ್ಪ ತಿಳಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಜಾತಿಯನ್ನು ನೋಡಿ ಯಾವುದೇ ಯೋಜನೆಯನ್ನು ಜಾರಿ ಮಾಡಿಲ್ಲ, ಬಡವರನ್ನು ನೋಡಿ ದೇವರಾಜು ಅರಸುರಿಂದ ಹಿಡಿದು ಸಿದ್ದರಾಮಯ್ಯ ರವರೆಗೂ ಬಡವರಿಗಾಗಿಯೇ ವಿವಿಧ ರೀತಿಯ ಯೋಜನೆಯನ್ನು ರೂಪಿಸಲಾಗಿದೆ. ಇಂದಿನ ಸರ್ಕಾರ 40 ಪಸೆಂರ್ಟ್ ಕಮಿಷನ್ ಸರ್ಕಾರವಾಗಿದೆ. ಹಲವಾರು ಹಗರಣಗಳನ್ನು ಮಾಡಿದೆ, ಮುಖ್ಯಮಂತ್ರಿಗಳಾದವರು ಆಡಬಾರದ ಮಾತನ್ನು ಆಡಿದ್ದಾರೆ. ಜನತೆಗೆ ಸಹಾಯವನ್ನು ಮಾಡದ ಸರ್ಕಾರ ಜನತೆ, ಜಾತಿ, ಧರ್ಮದ ಮಧ್ಯೆ ದ್ವೇಷವನ್ನು ಬಿತ್ತುವ ಕಾರ್ಯವನ್ನು ಮಾಡುತ್ತಿದೆ. ಇಂತಹ ಪಕ್ಷವನ್ನು ಮುಂದಿನ ಚುನಾವಣೆಯಲ್ಲಿ ಕಿತ್ತು ಹಾಕಬೇಕಿದೆ.

ಇದರ ಬಗ್ಗೆ ಮತದಾರರು ಜಾಗೃತರಾಗಬೇಕಿದೆ ಎಂದು ಹೇಳಿದರು
ರಾಜ್ಯದಲ್ಲಿ ಜನವರಿ ಒಳಗಾಗಿ ಜಿಲ್ಲಾ ಮಟ್ಟದ ಓಬಿಸಿ ಸಮಾವೇಶವನ್ನು ಪೂರ್ಣಗೊಳಿಸಿ ನಂತರ ರಾಜ್ಯ ಮಟ್ಟದ ಸಮಾವೇಶವನ್ನು ಬೆಂಗಳೂರನ್ನು ಹೊರೆತುಪಡಿಸಿ ಬೇರೆ ಕಡೆಯಲ್ಲಿ ಮಾಡಲಾಗುವುದು. ಬಿಜೆಪಿಯವರಿಗೆ ಓಬಿಸಿ ಸಮಾವೇಶ ಮಾಡಲು ಯೋಗ್ಯತೆ ಇಲ್ಲ ಅ ಪಕ್ಷದಿಂದ ಈ ವರ್ಗಕ್ಕೆ ಯಾವುದೇ ರೀತಿಯ ಕೂಡುಗೆ ಇಲ್ಲ, ಚುನಾವಣೆ ಸಮಯದಲ್ಲಿ ಮಾತ್ರವೇ ಅವರು ನೆನಪಾಗುತ್ತಾರೆ, ಬಂಗಾರಪ್ಪರವರ ಅಭೀಮಾನಿಗಳು ಬೇರೆ ಪಕ್ಷದಲ್ಲಿ ಇದ್ದಾರೆ ಅವರು ಕಾಂಗ್ರೇಸ್ ಪಕ್ಷಕ್ಕೆ ಬನ್ನಿ ಎಂಬ ಮನವಿಯನ್ನು ಮಾಡುತ್ತೇನೆ ಎಂದು ಮಧು ಬಂಗಾರಪ್ಪ ತಿಳಿಸಿದರು.

ನ.06 ಕ್ಕೆ ಕನಾಟಕಕ್ಕೆ ಖರ್ಗೆ ; ಅಖಿಲ ಭಾರತ ಕಾಂಗ್ರೇಸ್ ಪಕ್ಷದ ಅಧ್ಯಕ್ಷರಾಗಿರುವ ಮಲ್ಲಿಕಾರ್ಜನ ಖರ್ಗೆಯವರು ಪ್ರಥಮ ಭಾರಿಗೆ ನ.06ಕ್ಕೆ ಕರ್ನಾಟಕಕ್ಕೆ ಆಗಮಿಸಲಿದ್ದಾರೆ ಅಂದು ಅವರನ್ನು ಭವ್ಯವಾದ ಸ್ವಾಗತದೊಂದಿಗೆ ಬರ ಮಾಡಿಕೊಳ್ಳಲಾಗುವುದು. ಖರ್ಗೆ ಅಧ್ಯಕ್ಷರಾಗಿರುವುದಿಂದ ಪಕ್ಷಕ್ಕೆ ಮ್ತತಷ್ಟು ಶಕ್ತಿ ಬಂದಿದೆ, ಇದರಿಂದ ಕರ್ನಾಟಕ ರಾಜ್ಯಕ್ಕೂ ಸಹಾ ಶಕ್ರಿ ಬಂದಿದೆ ಎಂದರು.

ಗೋಷ್ಠಿಯಲ್ಲಿ ಶಾಸಕರಾದ ರಘುಮೂರ್ತಿ, ಜಿಲ್ಲಾಧ್ಯಕ್ಷ ತಾಜ್‍ಪೀರ್, ಕಾರ್ಯಾಧ್ಯಕ್ಷರಾದ ಹಾಲೇಶ್, ವಿಧಾನ ಪರಿಷತ್ ಮಾಜಿ ಸದಸ್ಯೆ ಶ್ರೀಮತಿ ಜಯ್ಯಮ್ಮ ಬಾಲರಾಜ್, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಗೀತಾ ನಂದಿನಿಗೌಡ, ಓಬಿಸಿ ಜಿಲ್ಲಾಧ್ಯಕ್ಷ ಎನ್.ಡಿ.ಕುಮಾರ್, ಮುಖಂಡರಾದ ಕುಮಾರ್ ಗೌಡ, ನಾಗವೇಣಿ, ಮೈಲಾರಪ್ಪ, ಬಾಲಕೃಷ್ಣ ಯಾದವ್, ಪ್ರಕಾಶ್ ಮೂರ್ತಿ ಸೇರಿದಂತೆ ಇತರರು ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಏಪ್ರಿಲ್ 1ರಿಂದ ಈ ಎಲ್ಲಾ ಹಣಕಾಸು ನಿಯಮಗಳು ಬದಲಾವಣೆ : ಯಾವುದೆಲ್ಲಾ ಇರುತ್ತೆ

ಏಪ್ರಿಲ್ ತಿಂಗಳಲ್ಲಿ ಹೊಸ ಹಣಕಾಸು ವರ್ಷ ಆರಂಭವಾಗುತ್ತದೆ. ಈ ತಿಂಗಳಲ್ಲಿ ಕೆಲವೊಂದು ವ್ಯವಹಾರಗಳು ಬದಲಾವಣೆಯಾಗುತ್ತವೆ. ಏಪ್ರಿಲ್ ಒಂದರಿಂದ ಕೆಪವೊಂದು ನಿಯಮಗಳು ಜಾರಿಗೆ ಬರಲಿವೆ. ಈ ಬದಲಾವಣೆ ಜನಸಾಮಾನ್ಯರಿಗೆ ಪೆಟ್ಟು ಬೀಳುವಂತ ಬದಲಾವಣೆಯಾಗಿರಲಿದೆ.   *

ಲೈಸೆನ್ಸ್ ಪಡೆಯದೆ ಡ್ರೋನ್ ಹಾರಿಸಿದ ಪ್ರತಾಪ್ : ಸಾಕ್ಷಿಗಳು ಬಹಿರಂಗ..!

ಡ್ರೋನ್ ಪ್ರತಾಪ್ ಸೋಷಿಯಲ್ ಮೀಡಿಯಾದಲ್ಲಿ ರೈತರ ಬೆಳೆಗಳಿಗೆ ಔಷಧಿ ಸಿಂಪಡಿಸಲು ಡ್ರೋನ್ ಬಳಕೆ ಮಾಡುವುದನ್ನು ನೋಡಬಹುದು. ಇದೀಗ ಡ್ರೋನ್ ವಿಚಾರಕ್ಕೆ ಹೊಸದೊಂದು ಸಂಕಷ್ಟ ಎದುರಾಗಿದೆ. ಡ್ರೋನ್ ಪ್ರತಾಪ್ ವಿರುದ್ಧ ಸಾಕ್ಷಿಗಳು ಸಿಕ್ಕಿವೆ. ಡ್ರೋನ್ ಪ್ರತಾಪ್

ಮೂವರು ಆಟಗಾರರು ಆಟ ಶುರು ಮಾಡಿದ್ರೆ RCB ಟಚ್ ಮಾಡೋದು ಕಷ್ಟ ಕಷ್ಟ..!

ಪಂಜಾಬ್ ಕಿಂಗ್ಸ್ ಮಣಿಸಿದ ಆರ್ಸಿಬಿ ಇಂದು ಮತ್ತೊಂದು ಆಟಕ್ಕೆ ಸಜ್ಜಾಗಿದೆ. ಕೆಕೆಆರ್ ವಿರುದ್ದ ಜಯ ಗಳಿಸುವ ಆತ್ಮ ವಿಶ್ವಾಸದಲ್ಲಿ ಮೈದಾನಕ್ಕೆ ಇಳಿದಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ಜೊತೆಗೆ ಆರ್ಸಿಬಿ ಎರಡನೇ ಪಂದ್ಯವನ್ನಾಡಲಿದೆ. ಆದರೆ ಈ

error: Content is protected !!