in

ಬೆಲೆ ಏರಿಕೆ ವಿರುದ್ಧ ಹೋರಾಟ ನಡೆಸಲು ಕಾಂಗ್ರೆಸ್ ಸಜ್ಜು : ಎತ್ತಿನ ಗಾಡಿಯಲ್ಲೇ ಕಾಂಗ್ರೆಸ್ ನಾಯಕರ ಎಂಟ್ರಿ..!

suddione whatsapp group join

ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆ ದಿನದಿಂದ ದಿನಕ್ಕೆ ಏರಿಕೆಯಾಗ್ತಾನೆ ಇದೆ. ಬೆಲೆ ಏರಿಕೆ ಖಂಡಿಸಿ ಅದಾಗಲೇ ಕಾಂಗ್ರೆಸ್ ನಾಯಕರು ಸಾಕಷ್ಟು ಬಾರಿ ಪ್ರತಿಭಟನೆ ನಡೆಸಿದ್ದಾರೆ. ಇದೀಗ ಇಂದಿನಿಂದ ಅಧಿವೇಶನ ಶುರುವಾಗಲಿದ್ದು, ಕಾಂಗ್ರೆಸ್ ನಾಯಕರು ಆಡಳಿತ ಪಕ್ಷಕ್ಕೆ ಮತ್ತೆ ಬಿಸಿ ಮುಟ್ಟಿಸಲು ಸಜ್ಜಾಗಿದ್ದಾರೆ.

ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಸದನಕ್ಕೆ ಎತ್ತಿನ ಗಾಡಿಯಲ್ಲೇ ಬರಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅಧಿವೇಶನದ ಮೊದಲ ದಿನವೇ ಇಂಧನ ಬೆಲೆ ಏರಿಕೆ ವಿರೋಧಿಸಲಿದೆ.

ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಎತ್ತಿನ ಗಾಡಿಯಲ್ಲೇ ಬರಲಿದ್ದಾರೆ. ಹಲವು ವಿಚಾರಗಳ ಮೇಲೆ ಕಾಂಗ್ರೆಸ್ ಹೋರಾಟ ನಡೆಸಲಿದೆ.

ಈಗಾಗಲೇ ಜೆಡಿಎಸ್ ಕೂಡ ಅಧಿವೇಶನದಲ್ಲಿ ಬಿಜೆಪಿ ಹಣಿಸಲು ಶಸ್ತ್ರ ಸನ್ನದ್ಧವಾಗಿ ರೆಡಿಯಾಗುತ್ತಿದೆ. ಅತ್ತ ರೈತ ಸಂಘಟನೆಗಳಿಂದಲೂ ಬಿಜೆಪಿಗೆ ಬಿಸಿ ಮುಟ್ಟಲಿದೆ. ಈ ಬಾರಿಯ ಅಧಿವೇಶನದಲ್ಲಿ ಏನೆಲ್ಲಾ ಆಗುತ್ತೆ, ಯಾವುದೆಲ್ಲಾ ಚರ್ಚೆಗೆ ಬರಲಿದೆ, ಅಧಿವೇಶನ ಎಷ್ಟು ಉಪಯುಕ್ತವಾಗಿ ನಡೆಯಲಿದೆ ಅನ್ನೋ ಕುತೂಹಲ ರಾಜ್ಯದ ಜನರಿಗಿದೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ಏನೆಲ್ಲಾ ಚರ್ಚೆಗೆ ಬರಬಹುದು..? ಇಲ್ಲಿದೆ ಇನ್ ಸೈಡ್ ಸ್ಟೋರಿ

ಕೌಟುಂಬಿಕ ಕಲಹಕ್ಕೆ ದಂಪತಿ ಸಾವು