ನವದೆಹಲಿ: ಹೀಗೊಂದು ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಇದಕ್ಕೆಲ್ಲಾ ಕಾರಣ ಸಿದ್ದರಾಮಯ್ಯ ಹಾಗೂ ಸೋನಿಯಾ ಗಾಂಧಿ ಅವರ ಭೇಟಿ. ಹೌದು, ಹೈಕಮಾಂಡ್ ಕರೆಯ ಮೇರೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಇಂದು ದೆಹಲಿ ಪ್ರವಾಸ ಮಾಡಿದ್ದಾರೆ.. ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿಯೂ ಆಗಿದೆ. ಆ ಭೇಟಿಯಲ್ಲಿ ಆದ ಚರ್ಚೆಗಳು ಈ ಅನುಮಾನ ಹುಟ್ಟು ಹಾಕಿವೆ.
ಇಂದು ಸೋನಿಯಾ ಅವರನ್ನ ದೆಹಲಿ ನಿವಾಸದಲ್ಲಿ ಭೇಟಿಯಾಗಿದ್ದು, ಸುಮಾರು 30 ನಿಮಿಷಗಳ ಕಾಲ ಚರ್ಚಿಸಿದ್ದಾರೆ. ಸಿದ್ದರಾಮಯ್ಯ ಅವರಿಗೆ ಜಮೀರ್ ಅಹ್ಮದ್ ಕೂಡ ಸಾಥ್ ನೀಡಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಅವರಿಗೆ ರಾಷ್ಟ್ರ ರಾಜಕಾರಣದತ್ತ ಗಮನ ಹರಿಸಲು ಸೋನಿಯಾ ಅವರು ಹೇಳಿದ್ದಾರೆ ಎನ್ನಲಾಗಿದೆ.
ಸೋನಿಯಾ ಗಾಂಧಿ ಅವರನ್ನ ಭೇಟಿ ಮಾಡೋದಕ್ಕೆ ತೆರಳುವ ಮೊದಲು ಏರ್ಪೋರ್ಟ್ ನಲ್ಲಿ ಮಾಧ್ಯಮದವರೊಂದಿಗೆ ಸಿದ್ದರಾಮಯ್ಯ ಮಾತನಾಡಿದ್ದರು. ಈ ವೇಳೆ, ನಾನು ರಾಷ್ಟರಾಜಕಾರಣಕ್ಕೆ ತೆರಳುವುದಿಲ್ಲ. ನನಗೆ ಅದರಲ್ಲಿ ಆಸಕ್ತಿಯೂ ಇಲ್ಲ. ಸೋನಿಯಾ ಗಾಂಧಿ ಅವರು ಯಾವ ಕಾರಣಕ್ಕೆ ಕರೆದಿದ್ದಾರೆಂಬುದು ನನಗೆ ತಿಳಿದಿಲ್ಲ ಎಂದಿದ್ದರು. ಈ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಹೋಗುವ ವಿಚಾರವನ್ನು ತಳ್ಳಿ ಹಾಕಿದ್ರು.
ಇದೀಗ ಎಲ್ಲಾ ಚರ್ಚೆಗಳು ಮುಗಿದಿವೆ. ಚರ್ಚೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಪಕ್ಷ ಬಲವರ್ಧನೆ ಬಗ್ಗೆಯೂ ಚರ್ಚಿಸಲಾಗಿದೆ ಎನ್ನಲಾಗಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ವರ್ಚಸ್ಸು ಸ್ವಲ್ಪವೂ ಕುಂದಿಲ್ಲ. ಅವರ ಆಡಳಿತಾವಾಧಿಯಲ್ಲಕ ಸಾಕಷ್ಟು ಜನಪರ ಕೆಲಸಗಳನ್ನ ಮಾಡಿದ್ರು. ಹೀಗಾಗಿಯೆ ಅವರನ್ನ ರಾಷ್ಟ್ರ ರಾಜಕಾರಣಕ್ಕೆ ತೆಗೆದುಕೊಂಡು ಹೋಗುವ ಫ್ಲ್ಯಾನ್ ಮಾಡಲಾಗಿದೆ ಎನ್ನಲಾಗಿದೆ.
ಸುದ್ದಿಒನ್, ಚಿತ್ರದುರ್ಗ, ಜನವರಿ. 31 : ಬೆಳ್ಳಂಬೆಳಗ್ಗೆಯೇ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳಿಗೆ ಚಳಿಯಲ್ಲೂ ಬೆವರುವಂತೆ ಮಾಡಿದ್ದಾರೆ. ಬೆಂಗಳೂರು, ರಾಯಚೂರು,…
ಇಂದಿನಿಂದ ಬಜೆಟ್ ಅಧಿವೇಶನ ಆರಂಭವಾಗಲಿದೆ. ಬೆಳಗ್ಗೆ 11 ಗಂಟೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮಾ ಅವರು ಜಂಟಿ ಅಧಿವೇಶನ ಉದ್ದೇಶಿಸಿ…
ಸುದ್ದಿಒನ್ :ಮಕ್ಕಳಿಗೆ ಟೀ ಮತ್ತು ಕಾಫಿ ಕೊಡುವ ಮೊದಲು ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳಿವೆ. ಚಿಕ್ಕ ವಯಸ್ಸಿನಲ್ಲಿ ಚಹಾ ಅಥವಾ ಕಾಫಿ…
ಈ ರಾಶಿಯ ದಂಪತಿಗಳಿಗೆ ಅತಿಯಾದ ಕಿರುಕುಳದಿಂದ ಜಿಗುಪ್ಸೆ, ಶುಕ್ರವಾರದ ರಾಶಿ ಭವಿಷ್ಯ 31 ಜನವರಿ 2025 - ಸೂರ್ಯೋದಯ -…
ದಾವಣಗೆರೆ: ಇತ್ತೀಚೆಗೆ ಮೈಕ್ರೋ ಫೈನಾನ್ಸ್ ಕಾಟಕ್ಕೆ ರಾಜ್ಯದಲ್ಲಿ ಜೀವ ಕಳೆದುಕೊಂಡವರು ಅದೆಷ್ಟೋ. ಇದಕ್ಕೆ ಕಡಿವಾಣ ಹಾಕುವುದಕ್ಕೆ ಸರ್ಕಾರ ಕೂಡ ಸಭೆಗಳನ್ನ…
ಚಿತ್ರದುರ್ಗ. ಜ.30: ಮಹಾತ್ಮಾ ಗಾಂಧೀಜಿಯವರು ಹುತಾತ್ಮರಾದ ದಿನವಾದ ಜ. 30 ರಂದು ಸರ್ವೋದಯ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಈ ನಿಮಿತ್ತ ಅಪರ…