Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಹಿಂದುಳಿದವರು, ದಲಿತರು ಬಿಜೆಪಿಗೆ ಬೆಂಬಲಿಸುತ್ತಿರುವುದರಿಂದ ಕಾಂಗ್ರೆಸ್ ನಾಶವಾಗುತ್ತಿದೆ : ಸಚಿವ ಕೆ.ಎಸ್.ಈಶ್ವರಪ್ಪ

Facebook
Twitter
Telegram
WhatsApp

ವರದಿ : ಕೆ.ಎಂ. ಮುತ್ತುಸ್ವಾಮಿ ಕಣ್ಣನ್

ಸುದ್ದಿಒನ್, ಚಿತ್ರದುರ್ಗ, (ನ.03) : ದೇಶದ ಎಲ್ಲಾ ಕಡೆ ಹಿಂದುಳಿದವರು, ದಲಿತರು ಬಿಜೆಪಿಗೆ ಬೆಂಬಲಿಸುತ್ತಿರುವುದರಿಂದ ಕಾಂಗ್ರೆಸ್ ನಾಶವಾಗುತ್ತಿದೆ ಎಂದು ಪಂಚಾಯತ್‍ರಾಜ್ ಮತ್ತು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಭಾರತೀಯ ಜನತಾಪಾರ್ಟಿ ಹಿಂದುಳಿದ ವರ್ಗಗಳ ಮೋರ್ಚಾದಿಂದ ಮಾಳಪ್ಪನಹಟ್ಟಿ ಸಮೀಪವಿರುವ ತಿರುಮಲ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಜಿಲ್ಲಾ ಮಹಾ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಎಪ್ಪತ್ತೈದು ವರ್ಷಗಳಾಗಿದ್ದರೂ ಇನ್ನು ದಲಿತರು, ಹಿಂದುಳಿದವರ ಬದುಕು ಸುಧಾರಣೆಯಾಗಿಲ್ಲ. ಕಾಂಗ್ರೆಸ್ ಪಕ್ಷ ಇವರುಗಳ ಓಟುಗಳನ್ನು ಪಡೆದು ಗೆದ್ದುಕೊಂಡು ಬಂದಿತು. ಆದರೆ ಈಗ ಹಿಂದುಳಿದವರು, ದಲಿತರು ಜಾಗೃತರಾಗಿದ್ದಾರೆ. ಕಾಂಗ್ರೆಸ್‍ನಿಂದ ನಮ್ಮ ಉದ್ದಾರ ಸಾಧ್ಯವಿಲ್ಲವೆಂಬುದನ್ನು ಮನಗಂಡು ಎಲ್ಲಾ ಕಡೆ ಬಿಜೆಪಿ.ಗೆ ಬೆಂಬಲಿಸುತ್ತಿದ್ದಾರೆ. ಇದರಿಂದಲೇ ನರೇಂದ್ರಮೋದಿ ಎರಡನೆ ಬಾರಿಗೆ ದೇಶದ ಪ್ರಧಾನಿಯಾಗಲು ಕಾರಣವಾಯಿತು ಎಂದರು.

ತಮಿಳುನಾಡು, ಕೇರಳ, ಆಂಧ್ರ, ಛತ್ತಿಸ್‍ಗಡ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್ ಸೋತಿರುವುದರಿಂದ ಪ್ರಾದೇಶಿಕ ಪಕ್ಷವಾಗಿ ಉಳಿದುಕೊಂಡಿದೆ. ಹಿಂದುಳಿದವರು, ದಲಿತರು ಕಾಂಗ್ರೆಸ್‍ನಿಂದ ದೂರವಾಗುತ್ತಿದ್ದಾರೆ.

ಹಿಂದುಳಿದವರು, ದಲಿತರ ಕೈಯಲ್ಲಿ ದೇಶದ ಆಡಳಿತವಿದೆ. ಸಿಂಧಗಿ ಉಪ ಚುನಾವಣೆಯಲ್ಲಿ ಬಿಜೆಪಿ. 31 ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್ ವಿರುದ್ದ ಜಯಗಳಿಸಿದೆ. ಹಾನಗಲ್‍ನಲ್ಲಿ ಏಳು ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್ ಗೆದ್ದಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹಾನಗಲ್ ಸೇರಿ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ.ಗೆದ್ದು ಅಧಿಕಾರ ಹಿಡಿಯಲಿದೆ. ಹಾಗಾಗಿ ಎರಡು ಕ್ಷೇತ್ರಗಳ ಉಪಚುನಾವಣೆಗೆ ಮಹತ್ವ ಕೊಡುವುದು ಬೇಡ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ವಿಧಾನಸಭೆ, ಪಾರ್ಲಿಮೆಂಟ್ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪದಾಧಿಕಾರಿಗಳು ಕೆಲಸ ಮಾಡಬೇಕಿದೆ. ಹಿಂಧುತ್ವ, ದೇಶದ ವಿಚಾರ ಬಂದಾಗ ಧರ್ಮವನ್ನು ಪಕ್ಕಕ್ಕೆ ಸರಿಸುತ್ತೇವೆ. ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರನ್ನು ಕಾಂಗ್ರೆಸ್ ಓಟಿಗಾಗಿ ಬಳಸಿಕೊಳ್ಳುತ್ತಿದೆಯೇ ವಿನಃ ಅವರ ಅಭಿವೃದ್ದಿಗೆ ಒತ್ತು ಕೊಟ್ಟಿಲ್ಲ. ಮುಂದಿನ ಬಜೆಟ್‍ನಲ್ಲಿ ದಲಿತರು, ಹಿಂದುಳಿದವರಿಗೆ ಹೆಚ್ಚಿನ ಸೌಲಭ್ಯ ಕೊಡುತ್ತೇವೆ.

ಜಾತಿಯನ್ನು ಮತಕ್ಕಾಗಿ ಬಳಸಿಕೊಳ್ಳುವ ಬದಲು ಅಭಿವೃದ್ದಿಗೊಳಿಸಬೇಕು. ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಎಂಟೆಂಟು ಮಂದಿಯನ್ನು ಆಯ್ಕೆ ಮಾಡಿ ಡಿಸೆಂಬರ್‍ನಲ್ಲಿ ಬೆಂಗಳೂರಿನಲ್ಲಿ ದೊಡ್ಡ ಸಮಾವೇಶ ಮಾಡುತ್ತೇವೆ. ದಲಿತರು, ಹಿಂದುಳಿದವರನ್ನು ಜಾಗೃತಿಗೊಳಿಸಿ ಓ.ಬಿ.ಸಿ.ಯನ್ನು ಶಕ್ತಿಶಾಲಿಯನ್ನಾಗಿ ಮಾಡುವುದು ಬಿಜೆಪಿ.ಉದ್ದೇಶ. ಎಲ್ಲಾ ಜಾತಿಯವರನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಿ ಎನ್ನುವ ಒತ್ತಡ ಬರುತ್ತಿರುವುದು ಒಳ್ಳೆಯ ಬೆಳವಣಿಗೆ. ದೇಶದ ಪ್ರಧಾನಿ ನರೇಂದ್ರಮೋದಿರವರು ಯಾವ್ಯಾವ ಜಾತಿಯನ್ನು ಯಾವ ವರ್ಗಕ್ಕೆ ಸೇರಿಸಬೇಕೆನ್ನುವ ಅಧಿಕಾರವನ್ನು ಆಯಾ ರಾಜ್ಯಗಳಿಗೆ ನೀಡಿದ್ದಾರೆ. ಜಯಪ್ರಕಾಶ್‍ಹೆಗ್ಡೆರವರ ಅಧ್ಯಕ್ಷತೆಯಲ್ಲಿ ಆಯೋಗ ರಚಿಸಿದೆ. ವರದಿ ಬಂದ ನಂತರ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದರು.

ಜಿಲ್ಲಾ ಬಿಜೆಪಿ.ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಪ್ರವೀಣ್, ಬಿಜೆಪಿ.ಜಿಲ್ಲಾಧ್ಯಕ್ಷ ಎ.ಮುರಳಿ. ಓ.ಬಿ.ಸಿ. ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ್‍ಬಾಬು, ಶಂಕರಪ್ಪ, ಚಿತ್ರದುರ್ಗ ಜಿಲ್ಲಾ ಸಹ ಪ್ರಭಾರಿ ಹೇಮಂತ್, ನಗರ ಘಟಕದ ಅಧ್ಯಕ್ಷ ಕೃಷ್ಣ, ಗ್ರಾಮಾಂತರ ಘಟಕದ ಅಧ್ಯಕ್ಷ ಮಹಾಂತೇಶ್, ಜೈಪಾಲ್ ವೇದಿಕೆಯಲ್ಲಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಸುಳ್ಳು ಹೇಳಿದರೆ ತಾಯಿ ಭದ್ರೆ ಸಹಿಸುವುದಿಲ್ಲ : ಕಮಲ ಪಡೆಗೆ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ತಿರುಗೇಟು

ಸುದ್ದಿಒನ್, ಚಿತ್ರದುರ್ಗ, ಏ. 24 : ಭದ್ರಾ ಮೇಲ್ದಂಡೆ ಯೋಜನೆ ವಿಷಯದಲ್ಲಿ ನಿರಂತರ ಸುಳ್ಳು ಹೇಳಿಕೊಂಡು ಬರುತ್ತಿರುವ ಬಿಜೆಪಿಯವರಿಗೆ ಭದ್ರಾ ಮೇಲ್ದಂಡೆ ಯೋಜನೆ ಜಾರಿ, ಅದಕ್ಕಾಗಿ ನಡೆದ ಹೋರಾಟದ ಮಾಹಿತಿ ಕೊರತೆ ಇದೆ ಅಥವಾ

ಏಪ್ರಿಲ್ 26 ರಂದು ಲೋಕಸಭೆ ಚುನಾವಣೆ | ಸಾರ್ವತ್ರಿಕ ರಜಾದಿನ ಘೋಷಣೆ

ಚಿತ್ರದುರ್ಗ. ಏ.24: ಎರಡನೇ ಹಂತದ ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಏಪ್ರಿಲ್ 26 ರಂದು ಚಿತ್ರದುರ್ಗ ಜಿಲ್ಲೆಯಲ್ಲಿ ಮತದಾನ ಜರುಗಲಿದೆ. ಮತದಾನದ ದಿನವನ್ನು ಸಾರ್ವತ್ರಿಕ ರಜಾದಿನವನ್ನಾಗಿ ಘೋಷಣೆ ಮಾಡಲಾಗಿದೆ. ಅಂದು ಎಲ್ಲಾ ಸರ್ಕಾರಿ ಹಾಗೂ ಖಾಸಗಿ

ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿಗೆ ಎಐಡಿಎಸ್ಓ ವತಿಯಿಂದ ಪ್ರಣಾಳಿಕೆ ಸಲ್ಲಿಕೆ

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 24 : ದುಡಿಯುವ ಜನರ ಹೋರಾಟದ ಧ್ವನಿಯಾಗಿರುವ ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸುಜಾತ.ಡಿ ಅವರಿಗೆ ಎಐಡಿಎಸ್ಓ ವತಿಯಿಂದ ವಿದ್ಯಾರ್ಥಿಗಳ ಬೇಡಿಕೆಯ ಪ್ರಣಾಳಿಕೆಯನ್ನು ಸಲ್ಲಿಸಲಾಯಿತು. ಸ್ವಾತಂತ್ರ್ಯ ಬಂದು

error: Content is protected !!