ಬೆಂಗಳೂರು: ಬರೀ ಈಶ್ವರಪ್ಪನವರ ರಾಜೀನಾಮೆ ಪಡೆದು ತಿಪ್ಪೆ ಸಾರಿಸುವುದಲ್ಲ, ಬಂಧಿಸಿ ಜೈಲಿಗಟ್ಟಬೇಕು, ಭ್ರಷ್ಟಾಚಾರ ನಿಗ್ರಹದ ಪ್ರಕರಣ ದಾಖಲಾಗಬೇಕು. ಇದ್ಯಾವುದನ್ನೂ ಮಾಡದೆ ಸರ್ಕಾರ ರಕ್ಷಣೆಗೆ ನಿಂತರೆ ಹಿಂದೂ ಕಾರ್ಯಕರ್ತ ಸಂತೋಷ್ ಪಾಟೀಲ್‌ಗೆ ಅವಮಾನಿಸಿದಂತೆ, ದೇಶದ ಕಾನೂನಿನ ಮೇಲಿನ ಜನರ ನಂಬಿಕೆಯನ್ನು ಅಪಹಾಸ್ಯ ಮಾಡಿದಂತಾಗುತ್ತದೆ.
ಮೊನ್ನೆ – ನೂರಕ್ಕೆ ನೂರು ರಾಜೀನಾಮೆ ಕೊಡುವುದಿಲ್ಲ
ನಿನ್ನೆ – ರಾಜೀನಾಮೆ ನೀಡುತ್ತೇನೆ. ಇದು @ikseshwarappa ಅವರ ಸದಾರಮೆ ನಾಟಕದ ಡೈಲಾಗ್‌ಗಳು!. ಕೇವಲ ರಾಜೀನಾಮೆಯ ಮೂಲಕ ಪ್ರಕರಣವನ್ನು ತಿಳಿಗೊಳಿಸುವ ಹುನ್ನಾರವಿದು, ರಾಜಿನಾಮೆಯಷ್ಟೇ ಸಾಲದು ಭ್ರಷ್ಟಾಚಾರ, ಕೊಲೆ ಎರಡೂ ಪ್ರಕರಣಗಳಲ್ಲಿ ಬಂಧನವಾಗಲೇಬೇಕು.
ಸಂತೋಷ್ ಮಾಡಿದ ಕಾಮಗಾರಿಗೆ ಕಾರ್ಯದೇಶವೇ ಇರಲಿಲ್ಲ, ಸರ್ಕಾರಕ್ಕೂ ಕಾಮಗಾರಿಗೂ ಸಂಬಂಧವೇ ಇಲ್ಲ ಎನ್ನುತ್ತಿದ್ದರು ಬಿಜೆಪಿಗರು, ಆದರೆ ಈಗ ಮುರುಗೇಶ್ ನಿರಾಣಿ ಸಂಪೂರ್ಣ ಮೊತ್ತವನ್ನು ಬಿಡುಗಡೆ ಮಾಡಿಸುತ್ತೇವೆ ಎನ್ನುವ ಮೂಲಕ ತಪ್ಪನ್ನು ಒಪ್ಪಿಕೊಳ್ಳತೊಡಗಿದ್ದಾರೆ. ಅಂದರೆ ಇಷ್ಟು ದಿನ ಈಶ್ವರಪ್ಪ ತಡೆಹಿಡಿದಿದ್ದರು ಎಂದಾಯಿತು.
ರಾಜೀನಾಮೆ ಘೋಷಣೆ ಮಾಡಿ ಅಧಿಕೃತವಾಗಿ ನೀಡಲು ಸಾಕಷ್ಟು ಸಮಯ ತೆಗೆದುಕೊಂಡ ಈಶ್ವರಪ್ಪ ತುರಾತುರಿಯಲ್ಲಿ 29 ಪಿಡಿಓಗಳನ್ನ ವರ್ಗಾವಣೆ ಮಾಡಿದ್ದಾರೆ. ಈ ತುರಾತುರಿಯ ವರ್ಗಾವಣೆಯಲ್ಲಿ ಎಷ್ಟು ಪರ್ಸೆಂಟ್ ಹಗರಣವಿದೆ?. ಇನ್ನುಳಿದ ಗುತ್ತಿಗೆದಾರರಿಂದ ಬಾಕಿಯಿದ್ದ 40% ವಸೂಲಿಗಾಗಿಯೇ ಇಷ್ಟು ಸಮಯ ತಗೆದುಕೊಂಡಿದ್ದಾ ಎಂದು ಸರಣಿ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.
ಬೆಂಗಳೂರು: ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿದೆ. ಇದರಿಂದ ಅದೆಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸಾಲ ಕೊಟ್ಟ…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಕಡಲೆ, ಮೆಕ್ಕೆಜೋಳ ಸೇರಿದಂತೆ ಇತರೆ…
ಬೆಂಗಳೂರು: ನಟ ಡಾಲಿ ಧನಂಜಯ್ ಮದುವೆ ಸಂಭ್ರಮದಲ್ಲಿದ್ದಾರೆ. ಚಿತ್ರದುರ್ಗದ ಅಳಿಯ ಬೇರೆ ಆಗ್ತಾ ಇದ್ದಾರೆ. ಧನ್ಯತಾ ಮೂಲತಃ ಚಿತ್ರದುರ್ಗದವರು. ಆದರೆ…
ಬೆಂಗಳೂರು: ಇಂದು ಹೈಕೋರ್ಟ್ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದು ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ನೀಡಿದೆ. ಈ…
ಈ ರಾಶಿಯವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಒದಗಿ ಬರಲಿವೆ, ಈ ರಾಶಿಯವರಿಗೆ ಉತ್ತಮ ಸಂಗಾತಿ ಸಿಗುವರು, ಶುಕ್ರವಾರದ ರಾಶಿ ಭವಿಷ್ಯ…
144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದರೆ ಕರ್ಮ ಕಳೆಯುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಕೋಟ್ಯಾಂತರ ಮಂದಿ…