ಚಾಮರಾಜನಗರ: ಸಂತೋಷ್ ಪಾಟೀಲ್ ಬಗ್ಗೆ ಮಾತನಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಆ ಕುಟುಂಬಸ್ಥರಿಗೆ 1 ಕೋಟಿ ಪರಿಹಾರ ಕೊಡಿ. ಆ ಯಮ್ಮ ಬಿಎ ಓದಿದ್ದಾಳೆ ಸರ್ಕಾರಿ ನೌಕರಿ ಕೊಡಿ ಇದು ನಮ್ಮ ಡಿಮ್ಯಾಂಡ್. ಇಷ್ಟೊಂದು ಭ್ರಷ್ಟಾಚಾರ ಮಾಡುತ್ತಿದ್ದಾರೆ. ಇದಕ್ಕೆಲ್ಲಾ ಕುಮ್ಮಕ್ಕು ಕೊಡುತ್ತಾ ಇರೋದು ಮಿಸ್ಟರ್ ಬಸವರಾಜ್ ಬೊಮ್ಮಾಯ್. ಮಿಸ್ಟರ್ ಬೊಮ್ಮಾಯ್ ಪಕ್ಷದಲ್ಲಿ ಉಳಿದುಕೊಳ್ಳಲು ನಿಮಗೆ ಯಾವುದೇ ನೈತಿಕತೆ ಇಲ್ಲ ಪ್ಲೀಸ್ ಗೆಟ್ ಔಟ್.
ನೀವೂ ಜನಗಳ ಮನೆ ಮನೆಗಳಿಗೆ ಹೋಗಬೇಕು. ಹಳ್ಳಿ ಹಳ್ಳಿಗೆ ಹೋಗಬೇಕು. ಜನರಿಗೆ ಹೇಳಬೇಕು. ಮುಂದಿನ ಚುನಾವಣೆಯಲ್ಲಿ ಅತ್ಯಂತ ದುರಾಡಳಿತ ಮಾಡಿದ್ದಂತ, ಭ್ರಷ್ಟಾಚಾರ ಮಾಡಿದ್ದಂತ, ಜನ ವಿರೋಧಿಯಾದಂತ ಸರ್ಕಾರವಿದೆ ಅಂತ ಹೇಳುವ ಕೆಲಸವಾಗಬೇಕು. ಈ ರಾಜ್ಯ ಉಳಿಬೇಕಾ ಬೇಡವಾ..? ಯಾರಿಂದ ಉಳಿಯಬೇಕು..? ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ಕಾಂಗ್ರೆಸ್ ನವರು. ಬಿಜೆಪಿಯವರಲ್ಲ.
ಬಿಜೆಪಿಯವರಿದ್ದಾರಲ್ಲ ಇವತ್ತು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಜನರ ಮಧ್ಯೆ ಬೆಂಕಿ ಹಚ್ಚುತ್ತಿದ್ದಾರೆ. ಯಾಕೆಂದರೆ ಈ ಬೆಲೆ ಏರಿಕೆ, ಭ್ರಷ್ಟಾಚಾರ, ದುರಾಡಳಿತ ಇದೆಲ್ಲ ಮುಂಚಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ. ಆ ನಳೀನ್ ಕುಮಾರ್ ಮಾತಿಗೆಲ್ಲಾ ಉತ್ತರ ಕೊಡಲ್ಲ. ಅವರಿಗೆ ರಾಜಕೀಯದ ಪ್ರೌಡಿಮೆಯೇ ಬೆಳೆದಿಲ್ಲ. ಅಪರಾಧಗಳನ್ನು ಬಂಧಿಸಿ ಆದರೆ ಇನೋಸೆಂಟ್ ಗಳನ್ನು ಬಂಧುಸಬೇಡಿ ಅನ್ನೋದು ನಮ್ಮ ಮಾತು.
ಸಣ್ಣದು ಅಂದರೆ ಏನು ದೊಡ್ಡದು ಅಂದರೆ ಯಾವುದು. ಆ ಕೊಲೆಯಾಗಿರೋದು ಸಣ್ಣದಾ. ಹರ್ಷನಾ ಕೊಲೆಯಾಯ್ತು ಶಿವಮೊಗ್ಗದಲ್ಲಿ. ಶವ ಯಾತ್ರೆ ಮಾಡಿದವರು ಯಾರು. 144 ಸೆಕ್ಷನ್ ಇತ್ತು. ಅದನ್ನು ಉಲ್ಲಂಘಿಸಿ ಶವಯಾತ್ರೆ ಮಾಡಿದ್ದು ಯಾರು. ಅದೇ ಬೆಳ್ತಂಗಡಿಯಲ್ಲಿ ದಿನೇಶ್ ಎಂಬ ದಲಿತ ಸತ್ತೋದಾ. ಅವನಿಗ್ಯಾಕೆ ಪಾದಯಾತ್ರೆ ಮಾಡಲಿಲ್ಲ. ನರಗುಂದದಲ್ಲಿ ಒಬ್ಬ ಮುಸ್ಲಿಂನನ್ನು ಶ್ರೀರಾಮ ಸೇನೆಯವನೇ ಸಾಯಿಸಿದ ಅದಕ್ಕೆ ಯಾಕೆ ಪಾದಯಾತ್ರೆ ಮಾಡಲಿಲ್ಲ ಇವರು. ಮಾತು ಎತ್ತಿದ್ದರೆ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಅಂತಾರೆ ಎಂದು ಕಿಡಿಕಾರಿದ್ದಾರೆ.






GIPHY App Key not set. Please check settings