ಕಾಂಗ್ರೆಸ್ ಪಕ್ಷ ಐತಿಹಾಸಿಕ ಸತ್ಯಗಳಿಂದ ಪಾಠ ಕಲಿಯುವುದಿಲ್ಲ: ಕ್ಯಾಪ್ಟನ್ ಗಣೇಶ್ ಕಾರ್ಣಿಕ್

suddionenews
1 Min Read

ಬೆಂಗಳೂರು: ಕಾಂಗ್ರೆಸ್ ಪಕ್ಷ ಐತಿಹಾಸಿಕ ಸತ್ಯಗಳಿಂದ ಪಾಠ ಕಲಿಯುವುದಿಲ್ಲ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಗಣೇಶ್ ಕಾರ್ಣಿಕ್ ಹೇಳಿದರು.

ಈ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಯಾವುದೇ ರಚನಾತ್ಮಕ ಹೋರಾಟ, ಜನಪರ ಹೋರಾಟ ಕೈಗೆತ್ತಿಕೊಳ್ಳುವುದಿಲ್ಲ. ಕೇವಲ ಜಾತಿ, ಮತ, ಪ್ರಾಂತ ಎಂದು ಒಡೆದಾಳುವ ಮತ ಗಳಿಕೆ ನೀತಿ ಅದರದು.

ಅದರಿಂದಲೇ ಸುದೀರ್ಘ ಕಾಲ ಕಾಂಗ್ರೆಸ್ ಪಕ್ಷದವರು ದೇಶವನ್ನು ಆಳ್ವಿಕೆ ಮಾಡಿದ್ದಾರೆ ಎಂದರು. ಅಧಿಕಾರದ ಹಪಾಹಪಿತನಕ್ಕೆ ಈ ರೀತಿಯ ಹೇಳಿಕೆಯನ್ನು ಅವರು ನೀಡುತ್ತಿದ್ದಾರೆ ಎಂದು ತಿಳಿಸಿದರು.
ಸ್ವಾರ್ಥರಹಿತ ಮತ್ತು ರಾಷ್ಟ್ರನಿರ್ಮಾಣದ ಕಾರ್ಯದಲ್ಲಿ ತೊಡಗಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುರಿತು ಟೀಕಿಸುವ ಕೀಳು ಪ್ರವೃತ್ತಿಗೆ ಕಾಂಗ್ರೆಸ್ಸಿಗರು ಇಳಿದಿದ್ದಾರೆ.

ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷರ ಆಯ್ಕೆ ಆ ಪಕ್ಷದೊಳಗೆ ಕಗ್ಗಂಟಾಗಿದೆ. ಈ ಹುದ್ದೆಗಾಗಿ ಇವತ್ತು ತಾಯಿ -ಮಗನ ನಡುವೆ ಪೈಪೋಟಿ ಇದೆ. ಕಾಂಗ್ರೆಸ್ ಪುನಶ್ಚೇತನಕ್ಕಾಗಿ ಪ್ರಯತ್ನ ಮಾಡುವ ಜಿ 23 ನಾಯಕರನ್ನು ಹೊರಗಟ್ಟಿ, ಕೇವಲ ಗಾಂಧಿ ಕುಟುಂಬದ ನಾಯಕರು ಮಾತ್ರ ತಮ್ಮ ಪಕ್ಷದ ಚುಕ್ಕಾಣಿ ಹಿಡಿಯಬೇಕೆಂಬ ಹಾಗೂ ಹೊಗಳುಭಟ್ಟಂಗಿಗಳ ಗುಂಪಿಗೆ ಸೀಮಿತವಾದ ಪಕ್ಷ ಅದಾಗಿದೆ ಎಂದರು.

ಬಿಜೆಪಿ, ಪಕ್ಷದ ಸಂವಿಧಾನದ ಆಧಾರದಲ್ಲಿ ರಾಷ್ಟ್ರಾಧ್ಯಕ್ಷರ, ಇತರ ಘಟಕಗಳ ಅಧ್ಯಕ್ಷರ ಆಯ್ಕೆಯನ್ನು ಸಕಾಲದಲ್ಲಿ ನಡೆಸುತ್ತಿದೆ. ಆಂತರಿಕ ಪ್ರಜಾಪ್ರಭುತ್ವ ಅಲ್ಲಿದೆ. ನಮ್ಮ ಪಕ್ಷ ನೋಡಿ ಅವರು ಪಾಠ ಕಲಿಯಬೇಕು ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *