ಕರ್ನಾಟಕದ ಮಾನ ಮರ್ಯಾದೆ ಪ್ರಪಂಚದಲ್ಲಿ ಹೋಗಿದೆ : ಬಿಜೆಪಿ ವಿರುದ್ಧ ಕೆಪಿಸಿಸಿ ವಕ್ತಾರ ಆಕ್ರೋಶ
ಮೈಸೂರು: ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಇಂದು ಜಿಲ್ಲೆಯಲ್ಲಿ ಸುದ್ದಿಗೋಷ್ಟಿ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ. ಕಳೆದ ಎರಡು ತಿಂಗಳಿನಿಂದ ಬಿಜೆಪಿಯವರು ಡೈವರ್ಟ್ ಮಾಡೋ ದಿಕ್ಕಿನಲ್ಲಿದ್ದಾರೆ. ಹಿಜಾಬ್ ವಿಚಾರ ತಂದ್ರು, ಮುಸ್ಲಿಂ ಸಮುದಾಯದವರಿಗೆ ಜಾತ್ರೆಗಳಲ್ಲಿ ಅಂಗಡಿ ಮುಂಗಟ್ಟುಗಳಿಗೆ ಅವಕಾಶ ನೀಡಬಾರದು ಎಂಬುದನ್ನು ತಂದಿರಿ, ಟಿಪ್ಪು ಪಠ್ಯ ಪುಸ್ತಕದಲ್ಲಿ ಟಿಪ್ಪು ಚರಿತ್ರೆ ತೆಗೆಯುವ ಬಗ್ಗೆ ಪ್ರಸ್ತಾಪ, ಭಗವದ್ಘಿತೆ ಅಳವಡಿಸುವ ಬಗ್ಗೆ ಪ್ರಸ್ತವಾನೆ ತಂದರು. ಇತ್ತೀಚೆಗೆ ಹಲಾಲ್ ಕಟ್ ವಿಚಾರ ನಡೀತು. ಹೊಸ ತಡುಕಿಗೆ ಹಲಾಲ್ ಕಟ್ ಜಟ್ಕಾ ಕಟ್ ಎಂಬುದನ್ನ ತರುವಲ್ಲಿ ಬಿಜೆಪಿಯವರು ನಿರಂತರವಾಗಿ ಮಾಡುತ್ತಿದ್ದಾರೆ.
ಮಾನ ಮರ್ಯಾದೆ ದೇಶದಲ್ಲಿ ಅಲ್ಲ ಪ್ರಪಂಚದಲ್ಲೇ ತುಂಬಾ ಕೇವಲವಾಗಿ ಕರ್ನಾಟಕವನ್ನ, ಬೆಂಗಳೂರನ್ನ ನೋಡುವ ಪರಿಸ್ಥಿತಿಯನ್ನ ಬಿಜೆಪಿ ಸರ್ಕಾರ ತಂದಿರುವುದು ನಾಚಿಕೆಗೇಡಿನ ಸಂಗತಿ. ಇದಕ್ಕೆ ಉದಾಹರಣೆಯಾಗಿ ಕಿರಣ್ ಮಜುಂದಾರ್ ಒಂದು ಟ್ವೀಟ್ ಮಾಡಿದ್ದರು. ಆ ಟ್ವೀಟ್ ನ್ನ ಕೇಂದ್ರ ಸರ್ಕಾರ ಪರಿಗಣಿಸಲೇ ಬೇಕಾಗಿದೆ.
ಅರಬ್ ದೇಶಗಳಿಗೆ ನಮ್ಮ ದೇಶದಿಂದ ಆಗುತ್ತಿದ್ದ ವ್ಯವಹಾರದಲ್ಲಿ ಕುಸಿತ ಕಂಡಿದೆ. ಇದು ಆಘಾತಕಾರಿಯಾಗಿದೆ. ನಮ್ಮಲ್ಲಿ ಇಂಪೋರ್ಟ್ ಮಾಡಿಕೊಳ್ಳುತ್ತಿದ್ದ ವಸ್ತುಗಳನ್ನ ಅವರು ನಿಲ್ಲಿಸಬಹುದು. ಈಗಾಗಲೇ ಎಕ್ಸ್ ಪೋರ್ಟ್ ಕುಸಿತಗೊಂಡಿದೆ. ಬಿಜೆಪಿಗರಿಗೆ ಚುನಾವಣೆ, ಅಧಿಕಾರವೇ ಮುಖ್ಯ. ಬೇರೆಯವರ ಸಮಾಧಿ ಮೇಲೆ ಅಧಿಕಾರ ನಡೆಸುತ್ತಾರೆ ಎಂಬುದಕ್ಕೆ ಉದಾಹರಣೆ ಕರ್ನಾಟಕದಲ್ಲಿ ಕಳೆದ ಎರಡು ತಿಂಗಳನಿಂದ ನಡೆಯುತ್ತಿರುವ ಘಟನೆಯೇ ಉದಾಹರಣೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗ. ಫೆ.24: ಬರುವ ಮಾರ್ಚ್ 01 ರಂದು ಚಿತ್ರದುರ್ಗದ ಮುರುಘರಾಜೇಂದ್ರ ಕ್ರೀಡಾಂಗಣ (ಸರ್ಕಾರಿ ವಿಜ್ಞಾನ ಕಾಲೇಜು ಮೈದಾನ) ದಲ್ಲಿ ಬೃಹತ್…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳೆಗೆರೆ, ಚಳ್ಳಕೆರೆ, ಮೊ : 84314 13188 ಸುದ್ದಿಒನ್, ಚಳ್ಳಕೆರೆ, ಫೆಬ್ರವರಿ. 24 :…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…
ಚಿತ್ರದುರ್ಗ, ಫೆಬ್ರವರಿ. 24 : ಭದ್ರ ಮೇಲ್ದಂಡೆ ಯೋಜನೆಗೆ ಮುಂಬರುವ ರಾಜ್ಯ ಬಜೆಟ್ ನಲ್ಲಿ ಕನಿಷ್ಟ ಐದು ಸಾವಿರ ಕೋಟಿ…
ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಛಾವಾ ಸಿನಿಮಾ ಎಲ್ಲೆಡೆ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಇದರಲ್ಲಿ ಸಂಭಾಜಿ ಜೀವನ…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ ಫೆ. 24 :…