ಬೆಂಗಳೂರು: ಒಂದು ಕಡೆ ಕೊರೊನಾ ಕೇಸ್ ಯರ್ರಾಬಿರ್ರಿ ಏರಿಕೆಯಾಗ್ತಾ ಇದೆ. ನಿನ್ನೆ ಒಂದೇ ದಿನ 12 ಸಾವಿರ ಕೇಸ್ ದಾಖಲಾಗಿದೆ. ಕೊರೊನಾ ಕಂಟ್ರೋಲ್ ಗೆ ಅಂತಾನೆ ಬಿಜೆಪಿ ಸರ್ಕಾರ ಟಫ್ ರೂಲ್ಸ್ ಜಾರಿ ಮಾಡಿದೆ. ಆ ಟಫ್ ರೂಲ್ಸ್ ನಲ್ಲಿ ಪ್ರತಿಭಟನೆ, ಜಾತ್ರೆ, ರ್ಯಾಲಿ ಇತ್ಯಾದಿ ಇತ್ಯಾದಿ ಕಾರ್ಯಕ್ರಮಗಳಿಗೆ ಅನುಮತಿ ನಿರಾಕರಣೆ ಮಾಡಲಾಗಿದೆ. ಸದ್ಯ ಜಾರಿಯಾಗಿರುವ ಟಫ್ ರೂಲ್ಸ್ ನಿಂದಲೇ ಜನ ಕಂಗಲಾಗಿದ್ದಾರೆ. ಬದುಕು ಈಗ್ಲೆ ಮೂರಾಬಟ್ಟೆಯಾಗಿದೆ. ಇನ್ನು ಹೀಗೆ ಆದ್ರೆ ಮತ್ತೆಲ್ಲಿಗೆ ಹೋಗಿ ನಿಲ್ಲುತ್ತೋ ಎಂಬ ಭಯ ಜನರದ್ದು.
ಹೀಗಿರುವಾಗ ಕೋವಿಡ್ ಹೆಚ್ಚಳ ಆಗೋದಕ್ಕೆ ಕಾರಣ ಆಗ್ತಾ ಇರೋದು ಸಾಮಾನ್ಯ ಜನರಲ್ಲ ಇದೇ ರಾಜಕಾರಣಿಗಳು. ಇವರು ಮಾಡುವ ರೂಲ್ಸ್ ಬ್ರೇಕ್ ಗಳಿಂದ ಕೊರೊನಾ ಹೆಚ್ಚಾದ್ರೆ ನಮ್ಮ ಬದುಕು ಮತ್ತೆ ಬೀದಿಗೆ ಬೀಳುತ್ತೆ ಅಂತ ಸಾಮಾನ್ಯ ಜನ ಹಿಡಿ ಶಾಪ ಹಾಕುತ್ತಿದ್ದಾರೆ.
ಎರಡು ಪಕ್ಷಗಳು ಸಹ ಕೊರೊನಾ ರೂಲ್ಸ್ ಕಡೆ ಗಮನವನ್ನೆ ಕೊಡದೆ ತಮ್ಮ ಕೆಲಸಗಳನ್ನಷ್ಟೇ ಮಾಡುತ್ತಿದೆ. ಇತ್ತ ನಿನ್ನೆಯಲ್ಲ ಕಾಂಗ್ರೆಸ್ ನಾಯಕರು ಮೇಕೆದಾಟು ಯೋಜನೆಗೆ ಆಗ್ರಹಿಸಿ ಪಾದಯಾತ್ರೆ ಮಾಡಿದ್ದಾರೆ. ಸಾಕಷ್ಟು ಜನ ಸೇರಿದ ಕಾರ್ಯಕ್ರಮದಲ್ಲಿ ಮಾಸ್ಕ್ ಇಲ್ಲ, ಸೋಷಿಯಲ್ ಡಿಸ್ಟೆನ್ಸ್ ಮೊದಲೇ ಇಲ್ಲ.
ಇವತ್ತು ಬಿಜೆಪಿ ನಾಯಕರಿಂದಲೂ ಕೊರೊನಾ ರೂಲ್ಸ್ ಬ್ರೇಕ್ ಆಗಿದೆ. ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಕೊರೊನಾ ನಿಯಮಗಳನ್ನ ಗಾಳಿಗೆ ತೂರಿ ಸಾವಿರಾರು ಜನ ಸೇರಿರುವ ಹೋರಿ ಬೆದರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.
ಇದು ಸಾಮಾನ್ಯ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಟಫ್ ರೂಲ್ಸ್ ಮತ್ತೊಂದು. ಯಾವುದೆ ನಿಯಮಗಳನ್ನ ಹಾಕಿದ್ರು ನಾವುಗಳು ಚಾಚು ತಪ್ಪದೆ ಪಾಲನೆ ಮಾಡುತ್ತಿದ್ದೇವೆ. ದುಡಿಮೆ ಇಲ್ಲದಿದ್ದರು ಕೊರೊನಾ ಕಂಟ್ರೋಲ್ ಗೆ ಮಾಡಿರುವ ರೂಲ್ಸ್ ಬ್ರೇಕ್ ಮಾಡ್ತಿಲ್ಲ. ಆದ್ರೆ ರಾಜಕಾರಣಿಗಳೇ ಕೊರಿನಾ ಹಬ್ಬಿಸಿ, ಮತ್ತೆ ನಮ್ಮ ಬದುಕನ್ನೇ ಬದಿಗೆ ತಂದ್ರೆ ಹೊಣೆ ಯಾರು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬೀದರ್,(ಏಪ್ರಿಲ್ 16): ಗ್ಯಾರಂಟಿಗಳನ್ನು ಜಾರಿ ಮಾಡಿ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ ಏ. 16 : ಹೊಳಲ್ಕೆರೆ…
ಚಿತ್ರದುರ್ಗ. ಏ.16: ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಳೆಯಿಂದಾಗಿ ಹಾನಿಗೊಳಗಾದ ಬೆಳೆಹಾನಿ ಪ್ರದೇಶಗಳಿಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭೇಟಿ…
ಚಿತ್ರದುರ್ಗ. ಏ.16: ಆರೋಗ್ಯ ಇಲಾಖೆ, ಜಿಲ್ಲಾ ಆಸ್ಪತ್ರೆ, ಹಜ್ ಸಮಿತಿ ಸಹಯೋಗದೊಂದಿಗೆ ಬುಧವಾರ ನಗರದ ಎಂ.ಕೆ.ಪ್ಯಾಲೇಸ್ ಸಭಾಂಗಣದಲ್ಲಿ ಜಿಲ್ಲೆಯ 99…
ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 16 : ರಂಗಭೂಮಿ ಚಟುವಟಿಕೆಗಳ ಆಯಾಮಗಳನ್ನು ಶಿಕ್ಷಣ ಕ್ಷೇತ್ರದಲ್ಲಿ ಅಳವಡಿಸಿಕೊಂಡರೆ ಬೋಧನೆಯು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಶಿಕ್ಷಕ…
ಚಿತ್ರದುರ್ಗ. ಏ.16:ಚಿತ್ರದುರ್ಗ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಪಕ್ಕದಲ್ಲಿರುವ ಯೂನಿಯನ್ ಪಾರ್ಕ್ ಬಳಿ, ಪುಟ್‍ಪಾತ್ ಮೇಲೆ ಅನಾಮಧೇಯ ವ್ಯಕ್ತಿಯ ಶವ ಪತ್ತೆಯಾಗಿದೆ.…