in

ಮತ್ತೆ ಒಂದಾಗುತ್ತಾ ಕಾಂಗ್ರೆಸ್ – ಜೆಡಿಎಸ್ : ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಸಿಕ್ಕ ಸುಳಿವೇನು..?

suddione whatsapp group join

 

ಕಲಬುರಗಿ: ಕಲಬುರಗಿ‌ ಮಹಾನಗರ ಪಾಲಿಕೆ ವಿಚಾರದಲ್ಲಿ ಜೆಡಿಎಸ್ ಯಾರ ಪರ ? ಕಾಂಗ್ರೆಸ್-ಜೆಡಿಎಸ್ ಅಥವಾ ಜೆಡಿಎಸ್ ಬಿಜೆಪಿನಾ ? ಅನ್ನುವ ಗೊಂದಲ ಎಲ್ಲರಲ್ಲೂ ಇದೆ. ಇದೀಗ ಕಾಂಗ್ರೆಸ್ ಜೊತೆ ಮತ್ತೆ ಮೈತ್ರಿಗೆ ಜೆಡಿಎಸ್ ಸಿದ್ಧವಾಗಿದೆ ಎನ್ನಲಾಗುತ್ತಿದೆ.

ಇದಕ್ಕೆ‌ ಹೌದು ಎನ್ನುವಂತಿದೆ ಕಾಂಗ್ರೆಸ್ ಮುಖಂಡನ ಹೇಳಿಕೆ. ಕುಮಾರಸ್ವಾಮಿ ಸರ್ಕಾರವನ್ನು ಕೆಡವಿದ್ದ ಬಿಜೆಪಿ ಇದೀಗ ಮೈತ್ರಿಗಾಗಿ ಜೆಡಿಎಸ್ ಮನೆ ಬಾಗಿಲಿಗೆ ಹೋಗಿದೆ. ನಾಚಿಕೆಯಾಗಬೇಕು, ಮಾನ ಮರ್ಯಾದೆ ಇದೆಯಾ ಬಿಜೆಪಿಗರಿಗೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಶರಣ ಪ್ರಕಾಶ್ ಪಾಟೀಲ್ ಆಕ್ರೋಶಗೊಂಡಿದ್ದಾರೆ.

ಜಾತ್ಯಾತೀತ ನಿಲುವಿನೊಂದಿಗೆ ಕಾಂಗ್ರೆಸ್ ಜೊತೆ ಜೆಡಿಎಸ್ ಮೈತ್ರಿ‌ ಮಾಡಿಕೊಳ್ಳಲಿದೆ. ಈಗಾಗಲೇ ಮಲ್ಲಿಕಾರ್ಜುನ್ ಖರ್ಗೆ ಜೆಡಿಎಸ್ ಜೊತೆ ಮಾತುಕತೆ ನಡೆಸಿದ್ದಾರೆ. ಈಗಾಗಲೇ ಶಾಸಕರನ್ನ ಖರೀದಿ ಮಾಡಿ ವಾಮ ಮಾರ್ಗದಲ್ಲಿ ಬಿಜೆಪಿ ಸರ್ಕಾರ ರಚಿಸಿದೆ. ಪಾಲಿಕೆಯಲ್ಲಿ ಕಾಂಗ್ರೆಸ್ ಸದಸ್ಯರನ್ನ ಖರೀದಿ ಮಾಡಲು ಸಾಧ್ಯವೆ ಇಲ್ಲ ಎಂದಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ವಿಶ್ವಕರ್ಮ ಯುವಕ ಸಂಘದ ಅಧ್ಯಕ್ಷರಾಗಿ ಆರ್.ಡಿ.ಸಂಜಯ್ ನೇಮಕ

ಹೈದರ್ ಷಾವಲಿ ದರ್ಗಾ ಕಾಂಪ್ಲೆಕ್ಸ್‌ನಲ್ಲಿ ಮಳಿಗೆಗಳಿಗೆ ಲಾಕ್ !