in ,

ರಚಿತಾ ರಾಮ್ ವಿರುದ್ಧ ಮಂಡ್ಯದಲ್ಲಿ ದಾಖಲಾಯ್ತು ದೂರು..!

suddione whatsapp group join

ಇತ್ತಿಚೆಗೆ ಕ್ರಾಂತಿ ಸಿನಿಮಾದ ಟ್ರೇಲರ್ ಲಾಂಚ್ ಕಾರ್ಯಕ್ರಮದ ವೇಳೆ ನಟಿ ರಚಿತಾ ರಾಮ್ ತುಂಬಾ ಎಕ್ಸೈಟ್ ಆಗಿದ್ದರು. ಈ ವೇಳೆ ಆಡಿದ ಒಂದು ಮಾತು ವಿವಾದಕ್ಕೆ ಕಾರಣವಾಗಿತ್ತು, ಟ್ರೋಲಿಗರಿಗೆ ಗುರಿಯಾಗಿತ್ತು, ಆಕ್ರೋಶಕ್ಕೂ ಕಾರಣವಾಗಿತ್ತು. “ಈ ವರ್ಷ ಗಣರಾಜ್ಯೋತ್ಸವ ಎಂಬುದನ್ನು ಮರೆತು ಕ್ರಾಂತಿ ಉತ್ಸವ” ಮಾಡಿ ಎಂದಿದ್ದರು.

ಈ ಹೇಳಿಕೆ ವಿವಾದವನ್ನುಂಟು ಮಾಡಿತ್ತು. ದೇಶದ ಹಬ್ಬವನ್ನೇ ಮರೆತು ಕ್ರಾಂತಿ ನೋಡಬೇಕಾ..? ಕ್ರಾಂತಿ ದೇಶಕ್ಕಿಂತ ದೊಡ್ಡದ ಹೀಗೆ ಹಲವು ಪ್ರಶ್ನೆಗಳು ರಚಿತಾ ರಾಮ್ ಗೆ ಎದುರಾದವೂ. ಯೂಟ್ಯೂಬ್ ಚಾನೆಲ್ ಒಂದಕ್ಕೆ ಈ ಹೇಳಿಕೆ ಸಂಬಂಧ ನಟಿ ರಚಿತಾ ರಾಮ್ ಸ್ಪಷ್ಟನೆಯನ್ನು ನೀಡಿದ್ದರು. “ನಾನೇನು ಬೇರೆ ದೇಶಕ್ಕೆ ಜೈಕಾರ ಹಾಕಿದೆನಾ, ಏನೋ ಹೇಳುವ ಫ್ಲೋನಲ್ಲಿ ಮಿಸ್ ಆಗಿ ಹೇಳಿದೆ” ಎಂದಿದ್ದರು. ಇದೀಗ ಈ ಸಂಬಂಧ ನಟಿ ವಿರುದ್ಧ ಕೇಸ್ ಕೂಡ ದಾಖಲಾಗಿದೆ.

ರಚಿರಾ ರಾಮ್ ನೀಡಿದ್ದ ಹೇಳಿಕೆಯನ್ನು ಖಂಡಿಸಿ ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಶಿವಲಿಂಗಯ್ಯ ಅವರು ಮಾತನಾಡಿದ್ದಾರೆ. ರಚಿರಾ ರಾಮ್ ನೀಡಿರುವ ಹೇಳಿಕೆ ದೇಶದ್ರೋಹದ ಹೇಳಿಕೆಯಾಗಿದೆ, ಇದರ ವಿರುದ್ಧ ಕ್ರಮ ಕೈಗೊಂಡು ಅವರನ್ನು ದೇಶದಿಂದ ಗಡಿಪಾರು ಮಾಡಬೇಕು ಎಂದು ಶಿವಲಿಂಗಯ್ಯ ಕಿಡಿಕಾರಿದ್ದಾರೆ. ಅಷ್ಟೇ ಅಲ್ಲದೇ ಈ ವಿಷಯವಾಗಿ ಮಂಡ್ಯ ಜಿಲ್ಲೆಯ ಮದ್ದೂರಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಶಿವಲಿಂಗಯ್ಯ ತಿಳಿಸಿದರು.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ನಮ್ಮಂಥವರು ರಿಯಾಕ್ಟ್ ಮಾಡುವುದಕ್ಕೂ ಆತ ಯೋಗ್ಯನಲ್ಲ: ಕಟೀಲು ವಿರುದ್ಧ ಡಿಕೆಶಿ ವಾಗ್ದಾಳಿ

ವರುಣಾದಲ್ಲಿ ಯುದ್ಧ ಮಿಸ್ ಆಯ್ತು ಎಂದುಕೊಳ್ಳುವಾಗಲೇ ಕೋಲಾರದಲ್ಲೂ ಸಿದ್ದರಾಮಯ್ಯ ಹಿಂದೆ ಬಿದ್ದ ಬಿಜೆಪಿ..!