in

ಬಸವ ಜಯಂತಿ ಅಂಗವಾಗಿ ಅಲಂಕಾರಿಕ ರಾಸುಗಳ ಸ್ಪರ್ಧೆ : ಏನ್. ರಘುಮೂರ್ತಿ

suddione whatsapp group join

ಚಳ್ಳಕೆರೆ, (ಮೇ.02) : ಬಸವ ಜಯಂತಿ ಅಂಗವಾಗಿ ತಾಲೂಕು ಆಡಳಿತ, ಚಳ್ಳಕೆರೆ ಮತ್ತು ಗ್ರಾಮ ಪಂಚಾಯತಿ ನನ್ನಿವಾಳ ಇವರ ಸಂಯುಕ್ತಾಶ್ರಯದಲ್ಲಿ ಅಲಂಕಾರಿಕ ರಾಸುಗಳ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಚಳ್ಳಕೆರೆ ತಹಶೀಲ್ದಾರ್ ಏನ್. ರಘುಮೂರ್ತಿ ತಿಳಿಸಿದ್ದಾರೆ.

ಗ್ರಾಮಾಂತರ ಪ್ರದೇಶದಲ್ಲಿ ವ್ಯವಸಾಯಕ್ಕೆ ಪೂರಕವಾಗಿ ರಾಸುಗಳನ್ನು ಉಪಯೋಗಿಸಲಾಗುತ್ತದೆ. ಇಂತಹ ರಾಸುಗಳನ್ನು ಗ್ರಾಮೀಣ ಪ್ರದೇಶದಲ್ಲಿ ಬಸವ ಜಯಂತಿಯ ದಿನ ಗೆಜ್ಜೆ ಕೋಡಣಸು ಜೋಲು ಬಣ್ಣ ಮತ್ತು ಬ್ಯಾಗಡಿ ಗಳೊಂದಿಗೆ ಅಲಂಕಾರ ಮಾಡಿ ಪೂಜಿಸಲಾಗುತ್ತದೆ. ಮತ್ತು
ಮೆರವಣಿಗೆಯಲ್ಲೂ ಕೂಡ ಗ್ರಾಮಗಳಲ್ಲಿ ಪ್ರದರ್ಶಿಸಲಾಗುತ್ತದೆ.

ಚಿತ್ರದುರ್ಗ ಜಿಲ್ಲೆಯ ಕೆಲವುಭಾಗಗಳು ಸಾಂಸ್ಕೃತಿಕವಾಗಿ ಶ್ರೀಮಂತ ಪ್ರದೇಶಗಳಾಗಿದ್ದು ಈ ಪ್ರದೇಶಗಳಲ್ಲಿ ಆಚರಿಸುವ ಇಂತಹ ಸ್ಪರ್ಧೆಗಳಿಗೆ ತಾಲೂಕಾಡಳಿತ ಪ್ರೋತ್ಸಾಹ ನೀಡಬೇಕಾಗುತ್ತದೆ.

ಸ್ಥಳಿಯ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳ ಸಹಯೋಗದೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸುವ ಮತ್ತು ಅತ್ಯಂತ ಉನ್ನತ ಶ್ರೇಣಿಯಲ್ಲಿ ರಾಸುಗಳನ್ನು ಶೃಂಗಾರ ಮಾಡಿರುವಂತ ಸ್ಪರ್ಧಿಗಳಿಗೆ ಪ್ರಥಮ ಬಹುಮಾನ 5 ಸಾವಿರ ರೂ ಬಹುಮಾನ 2 ಸಾವಿರ ರೂಗಳನ್ನು ಘೋಷಿಸಲಾಗಿದೆ.

ಇದರಿಂದ ಸಹ ಪ್ರದೇಶದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳನ್ನು ಕೋಶದ ಪೋಷಿಸಿದಂತಾಗುತ್ತದೆ. ಕಾರ್ಯಕ್ರಮದಲ್ಲಿ ಚಳ್ಳಕ ಕ್ಷೇತ್ರದ ಶಾಸಕರಾದ ರಘು ಮೂರ್ತಿ ಭಾಗವಹಿಸಲಿದ್ದು, ಈ ವಿಜೇತರಾದ ರಾಸುಗಳಿಗೆ ಬಹುಮಾನ ನೀಡಲಿದ್ದಾರೆ.

ಈ ಭಾಗದ ರೈತರುಗಳು ತಮ್ಮ ರಾಸುಗಳನ್ನು ಅಲಂಕಾರಗೊಳಿಸಿ ಗ್ರಾಮೀಣ ಭಾಗದ ಈ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗವಹಿಸಬೇಕಾಗಿ ಕೋರಿದ್ದಾರೆ. ಈ ಸಂದರ್ಭದಲ್ಲಿ ನನ್ನಿವಾಳ  ಗ್ರಾಮ ಪಂಚಾಯತ ಅಧ್ಯಕ್ಷರಾದಂತಹ ಬಸವರಾಜು ಮತ್ತು ಸದಸ್ಯರುಗಳು ಹಾಜರಿದ್ದರು.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ಪಿತೂರಿ ನಡೆದಿದೆ, ನನ್ನ ಬಂಧನದ ಹಿಂದೆ ಗೂಡ್ಸೆ ಭಕ್ತರಿದ್ದಾರೆ : ಜಿಗ್ನೇಶ್ ಮೇವಾನಿ

50ಕ್ಕೂ ಹೆಚ್ಚು ಮಕ್ಕಳ ತಂದೆ ಮತ್ತೊಂದು ಸಂಗಾತಿ ಹುಡುಕುತ್ತಿದ್ದಾನಂತೆ..!