ಹೊಸದಿಲ್ಲಿ : ಕಚ್ಚಾತೈಲ ಬೆಲೆ ಏರಿಕೆ ಬೆನ್ನಲ್ಲೇ ಬೆಲೆ ಏರಿಕೆ ಬಿಸಿ ಎಲ್ಪಿಜಿ ಗ್ರಾಹಕರಿಗೂ ತಟ್ಟಿದೆ.
ಕಳೆದ ತಿಂಗಳಷ್ಟೇ ವಾಣಿಜ್ಯ ಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆ ಹೆಚ್ಚಿಸಲಾಗಿತ್ತು. ಇದೀಗ ಮತ್ತೆ 19 ಕೆಜಿ ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ 55 ರೂಪಾಯಿ ಏರಿಕೆಯಾಗಿದೆ.
ಆದರೆ, ಗೃಹಬಳಕೆಯ 14.2 ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ತನ್ನ ವೆಬ್ ಸೈಟ್ ನಲ್ಲಿ ತಿಳಿಸಿದೆ.
19 ಕೆಜಿ ಸಿಲಿಂಡರ್ ಪರಿಷ್ಕೃತ ಬೆಲೆ: ದಿಲ್ಲಿ: 129, ಕೋಲ್ಕತ: 1351, ಮುಂಬಯಿ: 1244, ಚೆನ್ನೈ: 1410.
ಗೃಹಬಳಕೆ (14.2 ಕೆಜಿ) ಸಿಲಿಂಡರ್ ಬೆಲೆ: ದಿಲ್ಲಿ: 594, ಕೋಲ್ಕತ: 620.50, ಮುಂಬಯಿ: 594, ಚೆನ್ನೈ: 610.
