ಕಾಫಿನಾಡು ಚಂದು ಯಾರಿಗೆ ತಾನೇ ಗೊತ್ತಿಲ್ಲ. ನಾನು ಪುನೀತಣ್ಣ, ಶಿವಣ್ಣನ ಅಭಿಮಾನಿ ಎಂದೇ ಕಾಫಿನಾಡು ಚಂದು ಡೈಲಾಗ್ ಶುರುವಾಗುವುದು. ಅಣ್ಣಾವ್ರ ಕುಟುಂಬದ ಅಭಿಮಾನಿಯೆಂದೇ ಫೇಮಸ್. ಕಾಫಿನಾಡು ಚಂದು ಹುಟ್ಟುಹಬ್ಬದ ವಿಶ್ ಮಾಡುವುದಕ್ಕೆ ಸಿಕ್ಕಾಪಟ್ಟೆ ಹೆಸರು ಮಾಡಿದ್ದರು. ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಕಾಫಿನಾಡು ಚಂದು ಮತ್ತೆ ಕಾಣಿಸಿಕೊಂಡಿದ್ದಾರೆ. ಅದು ಡಿಫ್ರೆಂಟ್ ಗೆಟಪ್ ನಲ್ಲಿ.
ಅಪ್ಪು ಕನಸಿನ ಕೂಸು ಗಂಧದ ಗುಡಿ ಇಂದು ಸಂಜೆಯಿಂದಾನೇ ಎಲ್ಲೆಡೆ ರಿಲೀಸ್ ಆಗುತ್ತಿದೆ. ಗಂಧದ ಗುಡಿ ಸಿನಿಮಾವನ್ನು ನೋಡುವುದಕ್ಕೆ ಅಭಿಮಾನಿಗಳು ಮಾತ್ರವಲ್ಲ ಇಡೀ ಸಿನಿಮಾ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ನಡುವೆ ಕಾಫಿನಾಡು ಚಂದು ಕೂಡ ಸಿನಿಮಾದ ಪ್ರಮೋಷನ್ ಶುರು ಮಾಡಿದ್ದಾರೆ.
ತಲೆಗೂದಲನ್ನು ಕಟಿಂಗ್ ಮಾಡಿಸಿದ್ದು, ಗಂಧದ ಗುಡಿ ಎಂದು ಬರೆಸಿಕೊಂಡಿದ್ದಾರೆ. ಬೀದಿ ಬೀದಿಗಳಲ್ಲಿ ಸುತ್ತುತ್ತಾ ಗಂಧದ ಗುಡಿ ಸಿನಿಮಾದ ಬಗ್ಗೆ ತಮ್ಮ ಅಭಿಮಾನ ತೋರಿಸುತ್ತಿದ್ದಾರೆ. ಓಂ ಸಿನಿಮಾ ಈ ಹಿಂದೆ ಹೇಗೆ ಹೆಸರು ಮಾಡಿತ್ತೋ ಅದೇ ರೀತಿ ಗಂಧದ ಗುಡಿ ಸಿನಿಮಾ ಹೆಸರು ಮಾಡುತ್ತೆ. ಓಂ, ಜನುಮದ ಜೋಡಿ, ಮುಂಗಾರು ಮಳೆ ಸಿನಿಮಾ ವರ್ಷಗಟ್ಟಲೇ ಥಿಯೇಟರ್ ಗಳಲ್ಲಿ ಓಡಿದ್ದವು. ಗಂಧದ ಗುಡಿ ಸಿನಿಮಾ ಕೂಡ ವರ್ಷಗಟ್ಟಲೇ ಓಡುತ್ತೆ ಎಂದಿದ್ದಾರೆ.
ಬೆಂಗಳೂರು: ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿದೆ. ಇದರಿಂದ ಅದೆಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸಾಲ ಕೊಟ್ಟ…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಕಡಲೆ, ಮೆಕ್ಕೆಜೋಳ ಸೇರಿದಂತೆ ಇತರೆ…
ಬೆಂಗಳೂರು: ನಟ ಡಾಲಿ ಧನಂಜಯ್ ಮದುವೆ ಸಂಭ್ರಮದಲ್ಲಿದ್ದಾರೆ. ಚಿತ್ರದುರ್ಗದ ಅಳಿಯ ಬೇರೆ ಆಗ್ತಾ ಇದ್ದಾರೆ. ಧನ್ಯತಾ ಮೂಲತಃ ಚಿತ್ರದುರ್ಗದವರು. ಆದರೆ…
ಬೆಂಗಳೂರು: ಇಂದು ಹೈಕೋರ್ಟ್ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದು ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ನೀಡಿದೆ. ಈ…
ಈ ರಾಶಿಯವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಒದಗಿ ಬರಲಿವೆ, ಈ ರಾಶಿಯವರಿಗೆ ಉತ್ತಮ ಸಂಗಾತಿ ಸಿಗುವರು, ಶುಕ್ರವಾರದ ರಾಶಿ ಭವಿಷ್ಯ…
144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದರೆ ಕರ್ಮ ಕಳೆಯುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಕೋಟ್ಯಾಂತರ ಮಂದಿ…