Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸಿಎಂ ಬೊಮ್ಮಾಯಿ‌ ಮಾಧ್ಯಮ ಸಂಯೋಜಕ ಗುರಲಿಂಗಸ್ವಾಮಿ ನಿಧನ..: ಅಂತಿಮ ದರ್ಶ‌ನ ಪಡೆಯಲಿರುವ ಸಿಎಂ

Facebook
Twitter
Telegram
WhatsApp

ಬೆಂಗಳೂರು: ಸಿಎಂ ಬೊಮ್ಮಾಯಿ‌ ಮಾಧ್ಯಮ ಸಂಯೋಜಕ ಗುರಲಿಂಗಸ್ವಾಮಿ ಹೊಳಿಮಠ ನಿಧನರಾಗಿದ್ದಾರೆ. 45 ವರ್ಷದ ಹೊಳಿಮಠ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಅವರ ನಿಧನಕ್ಕೆ ಮಾಧ್ಯಮದವರು, ರಾಜಕಾರಣಿಗಳು, ಆಪ್ತರು ಆತ್ಮಕ್ಕೆ ಶಾಂತಿ ಕೋರಿದ್ದಾರೆ.

ನಾಗರಭಾವಿ ಯುನಿಟಿ ಲೈಫ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಬೆಳಗ್ಗೆ ಜಿಮ್‌ಗೆ ಹೊಗಿ ವರ್ಕೌಟ್ ಮಾಡುವಾಗ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ನಡೆದಿತ್ತು. ಆದರೆ ಮಾರ್ಗಮದ್ಯದಲ್ಲಿಯೇ ನಿಧನರಾಗಿದ್ದಾರೆ. ಬೊಮ್ಮಾಯಿ‌ ಗೃಹ ಸಚಿವರಾದಾಗಿನಿಂದಲೂ ಮಾಧ್ಯಮ ವರ್ಗ ನೋಡಿಕೊಳ್ಳುತ್ತಿದ್ದರು.

 

ತಮ್ಮ ಮಾಧ್ಯಮ ಸಂಯೋಜಕ ನಿಧನ ಹಿನ್ನೆಲೆ, ನಾಗರಾಭಾವಿಯ ಯುನಿಟಿ ಆಸ್ಪತ್ರೆಗೆ ಸಿಎಂ ಭೇಟಿ ನೀಡಲಿದ್ದಾರೆ. ಗುರುಲಿಂಗ ಸ್ವಾಮಿ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆಯಲಿದ್ದಾರೆ.

ಸಿಎಂ ಮಾಧ್ಯಮ ಸಲಹೆಗಾರ ಗುರುಲಿಂಗ ಸ್ವಾಮಿ ನಿಧನಕ್ಕೆ ಸಚಿವ ಕೆ.ಗೋಪಾಲಯ್ಯ ಕಂಬನಿ ಮಿಡಿದಿದ್ದಾರೆ. ಅಬಕಾರಿ ಹಾಗೂ ಹಾಸನ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ. ಕೆ.ಗೋಪಾಲಯ್ಯ ತೀವ್ರ ಸಂತಾಪ ಸೂಚಿಸಿದ್ದಾರೆ

ಸಿಎಂ ಅಂತ ಮಾಧ್ಯಮ ಸಲಹೆಗಾರರಾಗಿ ಉತ್ತಮ ಜವಾಬ್ದಾರಿ ನಿರ್ವಹಣೆ ಮಾಡುತ್ತಿದ್ದ ಗುರುಲಿಂಗಸ್ವಾಮಿ ಅವರ ನಿಧನದ ದುಖ:ವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಸಚಿವರು ತಮ್ಮ ಸಂತಾಪ ಸೂಚಕದಲ್ಲಿ ತಿಳಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬೇಸಿಗೆಯಲ್ಲಿ ಮೊಟ್ಟೆ ತಿಂದರೆ ಏನಾಗುತ್ತೆ ಗೊತ್ತಾ ?

ಸುದ್ದಿಒನ್ : ಮೊಟ್ಟೆ ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ. ಮೊಟ್ಟೆ ಸೇವನೆ ಆರೋಗ್ಯಕ್ಕೆ ತುಂಬಾ ಉಪಯುಕ್ತ ಎಂದು ಹೇಳುತ್ತಾರೆ. ಮೊಟ್ಟೆಗಳಲ್ಲಿ ವಿಟಮಿನ್ ಎ, ವಿಟಮಿನ್ ಬಿ12, ವಿಟಮಿನ್ ಡಿ, ಪ್ರೊಟೀನ್, ಕ್ಯಾಲ್ಸಿಯಂ, ಸತು, ಫೋಲೇಟ್ ಮತ್ತು

ಶ್ರೀರಾಮನವಮಿಯಂದು 40 ಲಕ್ಷ ಭಕ್ತರು : ಮದುವಣಗಿತ್ತಿಯಂತೆ ಸಿಂಗಾರಗೊಂಡ ಅಯೋಧ್ಯಾ

ಸುದ್ದಿಒನ್ : 500 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಅಯೋಧ್ಯೆಯ ರಾಮಮಂದಿರದಲ್ಲಿ ಶ್ರೀರಾಮ ನವಮಿ ಆಚರಣೆ ನಡೆಯುತ್ತಿದೆ. ಅಯೋಧ್ಯೆ ರಾಮಮಂದಿರ ನಿರ್ಮಾಣದ ನಂತರ ಪ್ರಥಮ ಬಾರಿಗೆ ನಡೆಯುತ್ತಿರುವ ಶ್ರೀರಾಮ ಕಲ್ಯಾಣ ಮಹೋತ್ಸವವನ್ನು ಆಯೋಜಿಸಲು

ಈಗ ಈ ರಾಶಿಯವರು ಮದುವೆ ಸಾಲಾವಳಿ ಕೇಳುವ ಸಮಯ ಬಂದಿದೆ

ಈಗ ಈ ರಾಶಿಯವರು ಮದುವೆ ಸಾಲಾವಳಿ ಕೇಳುವ ಸಮಯ ಬಂದಿದೆ, ಈ ರಾಶಿಯವರಿಗೆ ವ್ಯಾಪಾರದಲ್ಲಿ ಆರ್ಥಿಕ ಚೇತರಿಕೆಯಿಂದ ಸಂತಸ, ಮಂಗಳವಾರ ರಾಶಿ ಭವಿಷ್ಯ ಏಪ್ರಿಲ್-16,2024 ಸೂರ್ಯೋದಯ: 06:03, ಸೂರ್ಯಾಸ್ತ : 06:28 ಶಾಲಿವಾಹನ ಶಕೆ1945,

error: Content is protected !!