in

ಆಪ್ತ ಸ್ನೇಹಿತ ನಿಧನ : ಬಿಕ್ಕಿ ಬಿಕ್ಕಿ ಅತ್ತ ಸಿಎಂ ಬೊಮ್ಮಾಯಿ..!

suddione whatsapp group join

ಹುಬ್ಬಳ್ಳಿ: ಹೃದಯಾಘಾತದಿಂದ ಸಿಎಂ ಬೊಮ್ಮಾಯಿ ಅವರ ಆಪ್ತ ಗೆಳೆಯ ರಾಜೂ ಪಾಟೀಲ್ ನಿಧನರಾಗಿದ್ದಾರೆ. ಇಂದು ಅವರ ಅಂತ್ಯಕ್ರಿಯೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಭಾಗಿಯಾಗಿದ್ದಾರೆ. ಈ ವೇಳೆ ರಾಜು ಪಾಟೀಲ್ ಅವರ ಪಾರ್ಥೀವ ಶರೀರ ನೋಡಿ ಸಿಎಂ ಬೊಮ್ಮಾಯಿ ಅವರಿಗೆ ದುಃಖ ತಡೆದುಕೊಳ್ಳಲಾಗಿಲ್ಲ. ಎಲ್ಲರ ಮುಂದೆ ಮಗು ರೀತಿ ಬಿಕ್ಕಿ ಬಿಮ್ಕಿ ಅತ್ತಿದ್ದಾರೆ.

ಬಾಲ್ಯದಿಂದಲೂ ಆಪ್ತ ಸ್ನೇಹಿತ ಹಾಗೂ ಅಳಿಯನಾಗಿದ್ದ ರಾಜು ಪಾಟೀಲ ನಿನ್ನೆ ಹೃದಯಾಘಾತದಿಂದ ಮೃತಪಟ್ಟಿದ್ದರು. ಸ್ನೇಹಿತನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಇಂದು ಹುಬ್ಬಳ್ಳಿಗೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ ಸ್ನೇಹಿತನ ಅಂತಿಮ ದರ್ಶನ ಪಡೆದಿದ್ದಾರೆ. ಕುಟುಂಬಸ್ಥರು ಪಾರ್ಥಿವ ಶರೀರಕ್ಕೆ ಪೂಜೆ ಮುಗಿಸಿದ್ದಾರೆ. ಸಿಎಂ ಬೊಮ್ಮಾಯಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

ರಾಜು ಪಾಟಿಲ್ ನಿನ್ನೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಇಂದು ಸಂಜೆ ಅಂತ್ಯಕ್ರಿಯೆ ನಡೆಯಲಿದೆ. ಕುಟುಂಬ ಸಮೇತ ಹುಬ್ಬಳ್ಳಿಗೆ ಹೋಗಿರುವ ಬೊಮ್ಮಾಯಿ‌ ಅವರು, ಅಂತ್ಯಕ್ರಿಯೆ ಮುಗಿಸಿಕೊಂಡು ವಾಪಾಸ್ಸಾಗಲಿದ್ದಾರೆ. ಟ್ವಿಟ್ಟರ್ ನಲ್ಲೂ ಸಿಎಂ ಸಂತಾಪ ಸೂಚಿಸಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಸೆ.18 ರಂದು ದೊಡ್ಡಸಿದ್ದವ್ವನ ಹಳ್ಳಿಯಲ್ಲಿ ಬೃಹತ್ ಆರೋಗ್ಯ ತಪಾಸಣೆ ಶಿಬಿರ

ಇಷ್ಟು ದಿನ ಡ್ರಗ್ಸ್ ಸಿಕ್ತಾ ಇತ್ತು..ಇದೀಗ ಡ್ರಗ್ಸ್ ಫ್ಯಾಕ್ಟರಿಯೇ ಪತ್ತೆ..!