ಬಿಜೆಪಿಯಲ್ಲಿ ಈ ಬಾರಿ ಸಾಕಷ್ಟು ಜನರಿಗೆ ಟಿಕೆಟ್ ಮಿಸ್ ಆಗಿದೆ. ಟಿಕೆಟ್ ಸಿಗದ ಕಾರಣ ಹಲವರು ರಾಜೀನಾಮೆ ಘೋಷಿಸಿದರೆ, ಶಾಸಕ ನೆಹರು ಓಲೇಕಾರ್ ಸಿಎಂ ಬೊಮ್ಮಾಯಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ನನಗೆ ಟಿಕೆಟ್ ಕೈ ತಪ್ಪಲು ಬೊಮ್ಮಾಯಿ ಕಾರಣ. ಹನಿ ನೀರಾವರಿಗೆ 1500 ಗುಳುಂ ಮಾಡಿದ ಪ್ರಕರಣವನ್ನು ಬಯಲಿಗೆಳೆಯುತ್ತೇನೆ ಎಂದು ಏಕವಚನದಲ್ಲಿಯೇ ದಾಳಿ ನಡೆಸಿದ್ದಾರೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಭಾಗಗಳ ದೇವಸ್ಥಾನಗಳಿಗೆ ಭೇಟಿ ನೀಡಿರುವ ಸಿಎಂ ಬೊಮ್ಮಾಯಿ ಅವರು ಈ ಸಂಬಂಧ ಪ್ರತಿಕ್ರಿಯೆ ನೀಡಿ, ದಾಖಲೆ ಇಲ್ಲದೆ ಯಾವುದು ಹಗರಣ ಆಗಲ್ಲ. 1500 ಕೋಟಿ ಅಲ್ಲ ಎಷ್ಟು ಬೇಕಾದರೂ ಮಾಡಲಿ, ದಾಖಲೆ ಸಮೇತ ಮಾಡಲಿ. ನಾನು ಎಲ್ಲರಿಗೂ ಹೇಳಿದ್ದೀನಿ. ಯಾವ ಹಗರಣ ಹೇಳಿಕೆಯಿಂದ ಹಗರಣ ಆಗಲ್ಲ.ದಾಖಲೆ ಸಮೇತ ಆಗಲಿ. ಸತ್ಯಾಸತ್ಯತೆ ಹೊರಗೆ ಬರಲಿ ಎಂದಿದ್ದಾರೆ.
ಓಲೇಕಾರ್ ಸಿಎಂ ಬೊಮ್ಮಾಯಿ ವಿರುದ್ಧ ಏಕವಚನದಲ್ಲಿಯೇ ದಾಳಿ ನಡೆಸಿದ್ದರು. ಇಷ್ಟು ದಿನ ಬೊಮ್ಮಾಯಿ ರಾಜಕಾರಣವಿತ್ತು. ನಾಳೆಯಿಂದ ನಮ್ಮ ರಾಜಕಾರಣ ಶುರುವಾಗಲಿದೆ. ಅವನಿಗೆ ಯಾವ ರೀತಿ ಟಕ್ಕರ್ ಕೊಡ್ತೀವಿ ನೋಡ್ತೀರಿ. ಸಿಎಂ ಬೊಮ್ಮಾಯಿಯನ್ನು ಚುನಾವಣೆಯಲ್ಲಿ ಗೆಲ್ಲೋಕೆ ಬಿಡಲ್ಲ. ಅವನ ಧಮ್, ತಾಕತ್ತು ತೋರಿಸಲಿ. ನಮ್ಮ ಜಿಲ್ಲೆಯನ್ನು ಹಾಳು ಮಾಡುವ ದುರುದ್ದೇಶ ಅವನಿಗೆ ಇದೆ ಎಂದು ವಾಗ್ದಾಳಿ ನಡೆಸಿದ್ದಾರೆ.





GIPHY App Key not set. Please check settings