in

ಕರ್ನಾಟಕದಲ್ಲಿ ದೇವಾಲಯಗಳನ್ನ ಅವಸರದಲ್ಲಿ ಒಡೆಯಬಾರದು : ಸಿಎಂ ಬಸವರಾಜ್ ಬೊಮ್ಮಾಯಿ

suddione whatsapp group join

ಬೆಂಗಳೂರು: ಸುಪ್ರೀಂ ಕೋರ್ಟ್ ಆದೇಶ ನೀಡಿದೆ ಅಂತ ಮೈಸೂರು ಜಿಲ್ಲೆಯಾದ್ಯಂತ ಸಾಕಷ್ಟು ದೇವಸ್ಥಾನಗಳನ್ನ ಹೊಡೆದು ಹಾಕಿದ್ದಾರೆ. ಇದಕ್ಕೆ ಈಗಾಗ್ಲೇ ತೀವ್ರ ವಿರೋಧ ವ್ಯಕ್ತವಾಗಿದೆ. ಸದ್ಯಕ್ಕೆ ದೇವಾಲಯಗಳ ತೆರವು ಕಾರ್ಯ ಸ್ಥಗಿತಗೊಂಡಿದೆ. ಈ ಸಂಬಂಧ ಮಾತನಾಡಿರುವ ಸಿಎಂ ಬಸವರಾಜ್ ಬೊಮ್ಮಾಯಿ ಅವರು, ಕರ್ನಾಟಕದಲ್ಲಿ ದೇವಾಲಯಗಳನ್ನ ಹಾಗೇ ಅವಸರದಲ್ಲಿ ಒಡೆಯಬಾರದು ಎಂದು ಸೂಚಿಸಲಾಗಿದೆ ಎಂದಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶವನ್ನ ಸಂಪೂರ್ಣವಾಗಿ ಪರಿಶೀಲನೆ ನಡೆಸ್ತೇವೆ. ಈಗಾಗಲೇ ಹೇಗೆ ಒಡೆದಿದ್ದಾರೆಂದು ಕಾರಣ ಕೇಳಿ ನೋಟೀಸ್ ನೀಡಲಾಗಿದೆ. ಯಾವ ರೀತಿಯಲ್ಲಿ ದೇವಸ್ಥಾನ ತೆರವು ಮಾಡಲಾಗಿದೆ ಎಂಬುದನ್ನು ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಗೆ ನೋಟೀಸ್ ನೀಡಲಾಗಿದೆ. ಅವರಿಂದ ಉತ್ತರ ಬರಲಿದೆ ಎಂದಿದ್ದಾರೆ.

 

ಇನ್ನು ನಾಳೆ, ನಾಡಿದ್ದು ಕ್ಯಾಬಿನೆಟ್ ಕರೆದು ಸ್ಪಷ್ಟವಾಗಿ ನಿರ್ದೇಶನ ಕೊಡಲಿದ್ದೇವೆ. ಸದ್ಯ ಸದನದಲ್ಲೂ ಈ ಬಗ್ಗೆ ಎಲ್ಲಾ ದಾಖಲೆಗಳನ್ನು ಸಲ್ಲಿಸಲಿದ್ದೇನೆ. ಇಡೀ ರಾಜ್ಯದಲ್ಲಿ ಎಲ್ಲೇ ಆದ್ರುಯ ದೇವಸ್ಥಾನದ ವಿಚಾರದಲ್ಲಿ ಅವಸರದ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಸಲಹೆ ನೀಡಿದ್ದಾರೆ.

What do you think?

-1 Points
Upvote Downvote

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಟೆಸ್ಟ್ ಮಾಡ್ತೀನಿ ಅಂತ ಹೋಗಿ ಕಾರನ್ನೇ ಎಗರಿಸಿದ ಭೂಪ..!

ಸೆಪ್ಟೆಂಬರ್ 20ಕ್ಕೆ ನೀನಾಸಂ ಸತೀಶ್ ಅಭಿನಯದ ಪೆಟ್ರೋ ಮ್ಯಾಕ್ಸ್ ಟ್ರೈಲರ್ ರಿಲೀಸ್