in

1-5ನೇ ತರಗತಿ ಆರಂಭಕ್ಕೆ ಮುಂದಾದ ಶಿಕ್ಷಣ ಸಚಿವರಿಗೆ ಸಿಎಂ ಕ್ಲಾಸ್..!

suddione whatsapp group join

ಬೆಂಗಳೂರು: ಕೊರೊನಾ ವೈರಸ್ ಒಂದ ಥರ ಬೂದಿ ಮುಚ್ಚಿದ ಕೆಂಡದಂತೆ. ಕಳೆದ ಕೆಲವು ದಿನಗಳಿಂದ ಸೋಂಕಿತರ ಸಂಖ್ಯೆ ತೀರಾ ಕಡಿಮೆ ಇರಬಹುದು. ಆದ್ರೆ ಯಾವಾಗ ಬ್ಲಾಸ್ಟ್ ಆಗುತ್ತೋ ಗೊತ್ತಿಲ್ಲ. ಅಷ್ಟೇ ಅಲ್ಲ ಈ ಬಾರಿಯ ಅಲೆ ಮಕ್ಕಳಿಗೆ ಡೇಂಜರ್ ಅಂತ ಆರಂಭದಲ್ಲೇ ಹೇಳಲಾಗ್ತಾ ಇತ್ತು. ಆ ಬಳಿಕ ಏನು ಆಗಲ್ಲ ಅಂದ್ರು. ಅದೇನೆ ಇರ್ಲಿ ಈ ಭಯದ ನಡುವೆಯೇ 1-5ನೇ ತರಗತಿ ಬಿಟ್ಟು ಉಳಿದೆಲ್ಲಾ ತರಗತಿಗಳು ಪ್ರಾರಂಭವಾಗಿವೆ.

ಶಾಲೆಯಲ್ಲಿ ಸುರಕ್ಷತೆ ಬಗ್ಗೆ ಗಮನಕೊಡಲಾಗುತ್ತೆ ಅಂತ ಧೈರ್ಯದಿಂದಲೇ ಪೋಷಕರು ಕೂಡ ಮಕ್ಕಳನ್ನ ಕಳಿಹಿಸುತ್ತಿದ್ದಾರೆ. ಈ ಮಧ್ಯೆ ಶಿಕ್ಷಣ ಸಚಿವ ನಾಗೇಶ್ ಅವರು 1-5ನೇ ತರಗತಿಯನ್ನು ಆದಷ್ಟು ಬೇಗ ಆರಂಭ ಮಾಡ್ತೇವೆ ಅಂತ ಹೇಳಿದ್ದಾರೆ. ಇದು ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಕೋಪ ತರಿಸಿದೆ.

ಕೊರೊನಾ ಕೇಸ್ ಗಳು ಹೆಚ್ಚಾಗುವ ಸಾಧ್ಯತೆ ಇದೆ. ಯಾವುದೇ ಕಾರಣಕ್ಕು 1-5ನೇ ತರಗತಿ ಆರಂಭಕ್ಕೆ ಕೈ ಹಾಕಬೇಡಿ ಎಂದು ಸಲಹೆ ನೀಡದ್ದಾರೆ. ಇವತ್ತು ಕೊರೊನಾ ಕಡಿಮೆ ಇರಬಹುದು, ನಾಳೆ ಜಾಸ್ತಿ ಆಗಲ್ಲ ಅಂತ ಏನ್ ಗ್ಯಾರಂಟಿ. ಕೊರೊನಾ ಲಸಿಕೆ ಬೇರೆ ಇಲ್ಲ. ಮಕ್ಕಳಿಗೆ ಕೊರೊನಾ ವೈರಸ್ ಅಟ್ಯಾಕ್ ಆದ್ರೆ ಏನ್ ಮಾಡೋದು.‌ ಇದು ಸೂಕ್ಷ್ಮ ವಿಚಾರ ಏಕಾಏಕಿ ಇಂಥ ನಿರ್ಧಾರಕ್ಕೆ ಬರಬೇಡಿ. ಅಧಿವೇಶನ‌ಮುಗಿಯುವ ತನಕ ಯಾವ ನಿರ್ಧಾರಕ್ಕೂ ಬರಬೇಡಿ ಎಂದು ಸಿಎಂ ಬಸವರಾಜ್ ಬೊಮ್ಮಾಯಿ, ಶಿಕ್ಷಣ ಸಚಿವ ನಾಗೇಶ್ ಅವರಿಗೆ ಖಡಕ್ ಆಗಿ ಹೇಳಿದ್ದಾರೆ.

Please wait while flipbook is loading. For more related info, FAQs and issues please refer to DearFlip WordPress Flipbook Plugin Help documentation.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಮೈಸೂರು ಆಯ್ತು ಈಗ ಬೆಳಗಾವಿಯಲ್ಲೂ ದೇವಸ್ಥಾನ ತೆರವಿಗೆ ಮುಂದಾದ ಸರ್ಕಾರ..!

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ..ಆತನಿಗೆ 20 ವರ್ಷ..ಸಾಥ್ ಕೊಟ್ಟಕಾಗೆ 5 ವರ್ಷ ಕಠಿಣ ಶಿಕ್ಷೆ..!