in ,

ಮಂದಿರ-ಮಸೀದಿಯ ಧ್ವನಿವರ್ಧಕ ತೆಗೆಸಿದ ಸಿಎಂ ಆದಿತ್ಯನಾಥ್

suddione whatsapp group join

ಕಳೆದ ಕೆಲವು ದಿನಗಳಿಂದ ಮಸೀದಿಗಳಲ್ಲಿ ಬಳಸುವ ಧ್ವನಿವರ್ಧಕದ ಬಗ್ಗೆಯೇ ಸಾಕಷ್ಟು ಚರ್ಚೆಯಾಗುತ್ತಿದೆ. ಬರೀ ರಾಜ್ಯವಲ್ಲ ದೇಶಾದ್ಯಂತ ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಹಲವೆಡೆ ಈ ವಿಚಾರ ರಾಜಕೀಯ ಬಣ್ಣವನ್ನು ಬಳಿದುಕೊಂಡಿದೆ. ಇದೀಗ ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಮಂದಿರ ಮಸೀದಿ ಎನ್ನದೆ ಎಲ್ಲಾ ಕಡೆ ಧ್ವನಿವರ್ಧಕಗಳನ್ನು ತೆಗೆಸಿದೆ.

ಮಸೀದಿಗಳ ಧ್ವನಿವರ್ಧಕ ಕರ್ನಾಟಕದಲ್ಲಿ ಒಂದು ಆಯಾಮ ಪಡೆದುಕೊಂಡರೆ, ಮಹಾರಾಷ್ಟ್ರದಲ್ಲಿ ಮತ್ತೊಂದು ಆಯಾಮ ಪಡೆದುಕೊಂಡಿತ್ತು. ಸಂಸದೆ ನವನೀತ್ ರಾಣಾ ಮತ್ತು ಆಕೆಯ ಪತಿ ಸಿಎಂ ಠಾಕ್ರೆ ಮನೆ ಮುಂದೆಯೇ ಹನುಮಾನ್ ಚಾಲೀಸಾ ಪಠಿಸಲು ಹೋಗಿ ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ಉತ್ತರ ಪ್ರದೇಶದಲ್ಲಿಯೂ ಧ್ವನಿವರ್ಧಕದ ಚರ್ಚೆಗಳಾಗುತ್ತಿದ್ದವು.

ಸುಪ್ರೀಂ ಕೋರ್ಟ್ ಈ ಧ್ವನಿವರ್ಧಕದ ಬಗ್ಗೆ ಸಲಹೆ, ಸೂಚನೆಗಳನ್ನು ಕೊಟ್ಟಿದೆ. ಅದರ ಶಬ್ದ ಎಷ್ಟಿರಬೇಕು ಎಂಬುದನ್ನು ವಿವರಿಸಿದೆ. ಆದರೂ ಸುಪ್ರೀಂ ಆಜ್ಞೆಯನ್ನು ಮೀರಿ, ಶಬ್ಧ ಜೋರಾಗಿಯೇ ಕೊಡಲಾಗಿತ್ತು. ಇದೀಗ ಯೋಗಿ ಆದಿತ್ಯನಾಥ್ ಸರ್ಕಾರ ಮಂದಿರ ಮಸೀದಿ ಎಂಬ ಭೇದ ಬಿಟ್ಟು ಒಂದೇ ದಿನದಲ್ಲಿ ಬರೋಬ್ಬರಿ 21,900 ಧ್ವನಿವರ್ಧಕಗಳನ್ನು ತೆಗೆಸಿದೆ. ಕಣ್ಣಿಗೆ ಕಂಡ ಅನಗತ್ಯ ಸ್ಪೀಕರ್ ಗಳನ್ನು ತೆಗೆಸಿದ್ದಾರೆ.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ಬೆಳಗಾವಿ ವಿಭಜನೆ ವಿಚಾರ : ಸಿಎಂ ಬೊಮ್ಮಾಯಿ ಹೇಳಿದ್ದೇನು..?

psi ಹಗರಣದ ಆರೋಪಿ ರುದ್ರಗೌಡ ಆರೋಗ್ಯದಲ್ಲಿ ಏರುಪೇರು.. ಮತ್ಯಾರೆಲ್ಲಾ ಅರೆಸ್ಟ್ ಆಗಿದ್ದಾರೆ ಗೊತ್ತಾ..?